ವಾಷಿಂಗ್ಟನ್: ಕದನ ವಿರಾಮದ ಬಗ್ಗೆ ದೊಡ್ಡ ಚರ್ಚೆ ಆಗುತ್ತಿರುವ ಸಮಯದಲ್ಲೇ ಇರಾನ್ (Iran) ನಮಗೆ ಗಿಫ್ಟ್ ನೀಡಿದೆ ಎಂದು ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
ಅಧ್ಯಕ್ಷೀಯ ನಿವಾಸ ಶ್ವೇತ ಭವನದಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಪಾಕ್ ಧ್ವಜ (Pakistan Flag) ಇರುವ 8 ತೈಲ ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಾಗಲು ಅವಕಾಶ ನೀಡಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
🚨 HOLY CRAP. President Trump just revealed the present Iran’s leaders gifted him was 8 boats of OIL through the Strait of Hormuz!
“Then they apologized for something, and SENT 2 MORE BOATS. It was 10 boats!”
“I said, well, I guess they were right, they were real! I think they… pic.twitter.com/DRQ6XRlOJ5
— Eric Daugherty (@EricLDaugh) March 26, 2026
ಯುದ್ಧವನ್ನು ಕೊನೆಗೊಳಿಸುವ ಮಾತುಕತೆಗಳ ಸಮಯದಲ್ಲಿ ಉಡುಗೊರೆಯಾಗಿ ಇರಾನ್ ಕನಿಷ್ಠ ಎಂಟು ಪಾಕಿಸ್ತಾನ ಧ್ವಜ ಹೊಂದಿರುವ ತೈಲ ಟ್ಯಾಂಕರ್‌ಗಳಿಗೆ ಅವಕಾಶ ನೀಡಿದೆ ಎಂದರು. ಇದನ್ನೂ ಓದಿ: ಅಲಿ ಖಮೇನಿ ನಮ್ಮೊಂದಿಗೆ ಇಲ್ಲ, ಇರಾನ್‌ನಲ್ಲಿ ಈಗ ನಾಯಕರೇ ಇಲ್ಲ: ಟ್ರಂಪ್
ನಾವು ಸರಿಯಾದ ಜನರೊಂದಿಗೆ ವ್ಯವಹರಿಸುತ್ತಿದ್ದೇವೆ ಎನ್ನುವುದನ್ನು ನಾನು ಮೊದಲೇ ಹೇಳಿದ್ದೆ. ಸೋತಿರುವ ಇರಾನ್ ಈಗ ನಮ್ಮ ಜೊತೆ ಒಪ್ಪಂದ ಮಾಡುವಂತೆ ಭಿಕ್ಷೆ ಬೇಡಿಕೊಳ್ಳುತ್ತಿದೆ. ಆದರೆ ನಮಗೆ ಒಪ್ಪಂದ ಮಾಡಲು ಸಾಧ್ಯವಾಗುತ್ತದೆಯೋ ಇಲ್ಲವೋ ನನಗೆ ತಿಳಿದಿಲ್ಲ. ಅವರು ಅದನ್ನು ನಾಲ್ಕು ವಾರಗಳ ಹಿಂದೆ ಮಾಡಬೇಕಾಗಿತ್ತು. ಎರಡು ವರ್ಷಗಳ ಹಿಂದೆ ಅಥವಾ ನಾವು ಮೊದಲು ಅಧಿಕಾರಕ್ಕೆ ಬಂದಾಗ ಅವರು ಅದನ್ನು ಮಾಡಬೇಕಾಗಿತ್ತು ಎಂದು ಹೇಳಿದರು.

