ನವದೆಹಲಿ: ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿದ್ದ ರಾಷ್ಟ್ರಪತಿ (President Of India) ದ್ರೌಪದಿ ಮುರ್ಮು (Draupadi Murmu) ಅವರು ಕೊನೆಗೂ ಸಮಸ್ಯೆಯಿಂದ ಮುಕ್ತಿ ಪಡೆದಿದ್ದಾರೆ.
ಹಲವು ದಿನಗಳಿಂದ ತಮ್ಮ ಎಡಗಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಭಾನುವಾರ ದೆಹಲಿಯ ಆರ್ಮಿ ಹಾಸ್ಪಿಟಲ್ ರಿಸರ್ಚ್ ಅಂಡ್ ರೆಫೆರಲ್‌ನಲ್ಲಿ (Army Hospital Research and Referral) ಶಸ್ತ್ರ ಚಿಕಿತ್ಸೆಗೆ (Eye Cataract Surgery) ಒಳಗಾಗಿದ್ದರು. ಬೆಳಿಗ್ಗೆ 11:30ರ ವೆಳೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು ಮಧ್ಯಾಹ್ನ 1:30ರ ವೇಳೆಗೆ ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: ನಾಲ್ಕು ದಿನದ ತ್ರಿವೇಣಿ ಸಂಗಮದ ಮಹಾ ಕುಂಭಮೇಳಕ್ಕೆ ತೆರೆ
Advertisement
President Murmu underwent successful cataract surgery of her left eye at Army Hospital Research & Referral, Delhi Cantt today at 11:30am. Surgery was conducted by Brig SK Mishra & his team. She was discharged from hospital at 1:30pm & advised rest: Army Hospital R&R
(File pic) pic.twitter.com/KkvpsLtkBV
— ANI (@ANI) October 16, 2022
Advertisement
ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿರುವುದಾಗಿ ರಾಷ್ಟ್ರಪತಿ ಭವನದ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ ಚರಿತ್ರೆಯಲ್ಲಿ ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿ ಪಟ್ಟ – ಇಂದು ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ
Advertisement
Advertisement
ಕಳೆದ ಜುಲೈ 25ರಂದು ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಸ್ವೀಕರಿಸಿದರು. 20 ಜೂನ್ 1958 ರಂದು ಜನಿಸಿದ ಅವರು ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಮುರ್ಮು ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.