ಒಟಿಟಿ ಮೂಲಕ ‘ದಿ ಎಲಿಫೆಂಟ್ ವಿಸ್ಪರರ್ಸ್’ (The Elephant Whisperers) ಸಿನಿಮಾ ಸಿನಿ ಪ್ರೇಕ್ಷಕರ ಮನಗೆದ್ದಿದೆ. ಈ ಡಾಕ್ಯುಮೆಂಟರಿ ಆಸ್ಕರ್ ಅವಾರ್ಡ್ ಗೆಲ್ಲುವ ಮೂಲಕ ಭಾರತೀಯರು ಹೆಮ್ಮೆಪಡುವಂತೆ ಮಾಡಿದ್ದರು. ಇದರಲ್ಲಿ ಪ್ರಮುಖವಾಗಿ ನಟಿಸಿದ್ದ ಬೊಮ್ಮನ್- ಬೆಳ್ಳಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸನ್ಮಾನ ಮಾಡಿದ್ದಾರೆ. ಈ ಕುರಿತ ಫೋಟೋವನ್ನ ರಾಷ್ಟ್ರಪತಿ ದ್ರೌಪದಿ ಅವರು, ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಭಾವಿ ಪತ್ನಿ ಲಾವಣ್ಯ ಜೊತೆ ವರುಣ್ ತೇಜ್ ಕಾಫಿ ಡೇಟ್
Advertisement
ಈ ವರ್ಷದ 95ನೇ ಸಾಲಿನ ಅಕಾಡೆಮಿ ಅವಾರ್ಡ್‌ನಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್ʼ ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದಿತು. ದೀಪಿಕಾ ಪಡುಕೋಣೆ ಅವರು ಭಾರತವನ್ನು ಪ್ರತಿನಿಧಿಸಿದ ಆಸ್ಕರ್ ಅಂಗಳದಲ್ಲಿ ನಿರೂಪಣೆ ಮಾಡಿದ್ದರು. ಆಸ್ಕತ್ ಪ್ರಶಸ್ತಿಯ ಬಳಿಕ ಬೊಮ್ಮನ್- ಬೆಳ್ಳಿ ಜನಪ್ರಿಯತೆ ಪಡೆದರು.
Advertisement
President Droupadi Murmu felicitated Bomman and Bellie, the protagonists of the Oscar winning documentary ‘The Elephant Whisperers’ at Rashtrapati Bhavan. The President praised the couple belonging to Kattunayakan tribe for devoting their life in taking care of orphaned baby… pic.twitter.com/Kd4V7BYsL1
— President of India (@rashtrapatibhvn) July 18, 2023
Advertisement
ಆಸ್ಕರ್ ಪ್ರಶಸ್ತಿ ಪಡೆದ ‘ದಿ ಎಲಿಫೆಮಂಟ್ ವಿಸ್ಪರರ್ಸ್’ನಲ್ಲಿ ಮುಖ್ಯವಾಗಿ ಕಾಣಿಸಿಕೊಂಡ ಬೊಮ್ಮನ್- ಬೆಳ್ಳಿಯನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸನ್ಮಾನಿಸಿದರು. ಆನೆ ಮರಿಗಳನ್ನು ನೋಡಿಕೊಳ್ಳಲು ಜೀವನ ಮುಡಿಪಿಟ್ಟ ಅವರನ್ನು ಶ್ಲಾಘಿಸಲಾಯಿತು ಎಂದು ರಾಷ್ಟ್ರಪತಿ ಟ್ವಿಟ್ಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ.
Advertisement
ಬೊಮ್ಮನ್-ಬೆಳ್ಳಿ ಅವರು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಅರಣ್ಯದ ತೆಪ್ಪಕಾಡು ಆನೆ ಶಿಬಿರದಲ್ಲಿ ವಾಸವಾಗಿದ್ದಾರೆ. ಇಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಭೇಟಿ ನೀಡಿದ್ದರು. ಬೆಳ್ಳಿ ಮತ್ತು ಬೊಮ್ಮನ್ ದಂಪತಿ ಜೊತೆ ಭೇಟಿಯಾದ ಮೋದಿ ಅವರ ಫೋಟೋ ಸಖತ್ ವೈರಲ್ ಆಗಿತ್ತು.