ಬೆಂಗಳೂರು: ಇಂದು ಭಾರತೀಯ ಸೇನೆಯ ಮಹಾದಂಡ ನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ 120ನೇ ಜನ್ಮ ದಿನಾಚರಣೆ. ಹೀಗಾಗಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಕಾರ್ಯಪ್ಪ ಅವರನ್ನು ಸ್ಮರಿಸಿದ್ದಾರೆ.
ಕನ್ನಡ ಲಿಪಿಯಲ್ಲಿ ಕೊಡವ ಭಾಷೆಯಲ್ಲಿಯೇ ಟ್ವೀಟ್ ಮಾಡುವ ಮೂಲಕ ಕರ್ನಾಟಕದ ಕೊಡಗಿನ ಹಿರಿಮೆಯ ಪುತ್ರ ಹಾಗೂ ಅದಕ್ಕೂ ಮಿಗಿಲಾಗಿ ಭಾರತದ ಮಹಾನ್ ಪುತ್ರ ಎಂದು ನೆನಪಿಸಿಕೊಳ್ಳುವ ಮೂಲಕ ಜನ್ಮದಿನಾಚರಣೆಗೆ ಶುಭಾಶಯ ತಿಳಿಸಿದ್ದಾರೆ.
Advertisement
ಟ್ವೀಟ್ ನಲ್ಲೇನಿದೆ..?:
“ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಆಯಿಂಗಡ ಪುಟ್ಟ ನ ದಿನತ್ ರ ಒರ್ ಸ್ಮರಣೆ. ಕೊಡ ಗ್ ರ , ಕರ್ನಾಟಕ ತ್ ರ, ಆಂಡ ಮೀದ ಭಾರತ ದೇಶ ತ್ ರ ಕೊದಿಮೋಂವ ನಾನ ಇಯಂಗ ನಂಗಡ ಕೇಳಿ ಪೋನ ಮಹದಂಡ ನಾಯಕ ಅಲ್ಲತೆ ಪ್ರೀತಿರ ರಾಷ್ಟ್ರನಾಯಕ. ಇಯಂಗಡ ದೇಶ ಸೇವೆನ ನಂಗ ಎಕ್ಕಲೂ ಗೇ ನ ಬೆಚ್ಚೋ ವ. – ರಾಷ್ಟ್ರಪತಿ ಕೋವಿಂದ್”
Advertisement
ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಆಯಿಂಗಡ ಪುಟ್ಟ ನ ದಿನತ್ ರ ಒರ್ ಸ್ಮರಣೆ. ಕೊಡ ಗ್ ರ , ಕರ್ನಾಟಕ ತ್ ರ, ಆಂಡ ಮೀದ ಭಾರತ ದೇಶ ತ್ ರ ಕೊದಿಮೋಂವ ನಾನ ಇಯಂಗ ನಂಗಡ ಕೇಳಿ ಪೋನ ಮಹದಂಡ ನಾಯಕ ಅಲ್ಲತೆ ಪ್ರೀತಿರ ರಾಷ್ಟ್ರನಾಯಕ. ಇಯಂಗಡ ದೇಶ ಸೇವೆನ ನಂಗ ಎಕ್ಕಲೂ ಗೇ ನ ಬೆಚ್ಚೋ ವ. – ರಾಷ್ಟ್ರಪತಿ ಕೋವಿಂದ್
— President of India (@rashtrapatibhvn) January 28, 2019
Advertisement
ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪನವರ ಜನ್ಮದಿನದ ಸ್ಮರಣೆ. ಕರ್ನಾಟಕದ ಕೊಡಗಿನ ಹಿರಿಮೆಯ ಪುತ್ರ ಹಾಗೂ ಅದಕ್ಕೂ ಮಿಗಿಲಾಗಿ ಭಾರತದ ಮಹಾನ್ ಪುತ್ರರಾದ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪನವರು ನಮ್ಮ ಅತ್ತ್ಯುತ್ತಮ ಸೇನಾ ದಂಡನಾಯಕರಲ್ಲಿ ಒಬ್ಬರು ಹಾಗೂ ಅತ್ಯಂತ ನೆಚ್ಚಿನ ರಾಷ್ಟ್ರ ನಾಯಕರಾಗಿ ಉಳಿದಿರುತ್ತಾರೆ ಎಂದು ಬರೆದುಕೊಂಡಿದ್ದಾರೆ.
Advertisement
ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪನವರ ಜನ್ಮದಿನದ ಸ್ಮರಣೆ. ಕರ್ನಾಟಕದ ಕೊಡಗಿನ ಹಿರಿಮೆಯ ಪುತ್ರ ಹಾಗೂ ಅದಕ್ಕೂ ಮಿಗಿಲಾಗಿ ಭಾರತದ ಮಹಾನ್ ಪುತ್ರರಾದ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪನವರು ನಮ್ಮ ಅತ್ತ್ಯುತ್ತಮ ಸೇನಾ ದಂಡನಾಯಕರಲ್ಲಿ ಒಬ್ಬರು ಹಾಗೂ ಅತ್ಯಂತ ನೆಚ್ಚಿನ ರಾಷ್ಟ್ರ ನಾಯಕರಾಗಿ ಉಳಿದಿರುತ್ತಾರೆ – ರಾಷ್ಟ್ರಪತಿ ಕೋವಿಂದ್
— President of India (@rashtrapatibhvn) January 28, 2019
ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪ(ಕಾರ್ಯಪ್ಪ) ಅವರು 1899ರ ಜನವರಿ 28 ರಂದು ಕೊಡಗು ಜಿಲ್ಲೆಯ ಶನಿವಾರ ಸಂತೆಯಲ್ಲಿ ತಂದೆ ಕೊಡಂದೆರ ಮಾದಪ್ಪ ಕಾರಿಯಪ್ಪ ಹಾಗೂ ತಾಯಿ ಕಾವೇರಿಯ ಪುತ್ರನಾಗಿ ಜನಿಸಿದ್ದರು. ಭಾರತದ ಸೇನೆಯ ಪ್ರಥಮ ದಂಡನಾಯಕರಾಗಿದ್ದರು ಮತ್ತು ಫೀಲ್ಡ್ ಮಾರ್ಷಲ್ (ಮಹಾದಂಡನಾಯಕ) ಪದವಿಯನ್ನು ಪಡೆದ ಮೊದಲ ವ್ಯಕ್ತಿ. 1993 ಮೇ 15 ರಂದು ಕಾರ್ಯಪ್ಪ ನಿಧನರಾಗಿದ್ದರು.
Being handed the Field Marshal’s baton (bottom photo). Only a Field Marshal/five star general carries a baton and salutes with his baton. pic.twitter.com/CJFdXdEpiN
— President of India (@rashtrapatibhvn) January 28, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv