ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಅವರ ಮೊಮ್ಮಗಳು (Grand Daughter) ನವೋಮೆ ಬೈಡನ್ ಹಾಗೂ ಪೀಟರ್ ನೀಲ್ ಅವರು ವೈಟ್ ಹೌಸ್‍ನ (White House) ಸೌತ್ ಲಾನ್‍ನಲ್ಲಿ ಶನಿವಾರ ವಿವಾಹವಾಗಲಿದ್ದಾರೆ. ಈ ಮೂಲಕ ಹೊಸದೊಂದು ದಾಖಲೆಯನ್ನು ಬರೆಯಲಿದ್ದಾರೆ.
ಜೋ ಬೈಡನ್ ಅವರ ಮೊಮ್ಮಗಳು ನೋಮಿ(28) ಮತ್ತು ನೀಲ್ (25) ಅವರು 4 ವರ್ಷಗಳ ಹಿಂದೆ ನ್ಯೂಯಾರ್ಕ್‍ನಲ್ಲಿ ಸ್ನೇಹಿತರ ಮೂಲಕ ಭೇಟಿಯಾಗಿದ್ದರು. ಅಂದಿನಿಂದ ಅವರಿಬ್ಬರು ಒಟ್ಟಿಗೆ ನೆಲೆಸಿದ್ದರು. ನೋಮಿ ವಕೀಲರಾಗಿದ್ದರೆ, ನೀಲ್ ಇತ್ತೀಚೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಕಾನೂನು ಶಾಲೆಯಿಂದ ಪದವಿ ಪಡೆದಿದ್ದಾರೆ. ಪ್ರಸ್ತುತ ಇಬ್ಬರೂ ವಾಷಿಂಗ್ಟನ್‍ನಲ್ಲಿ ವಾಸಿಸುತ್ತಿದ್ದಾರೆ.
Advertisement
Advertisement
ಇದು ವೈಟ್ ಹೌಸ್‍ನ ಇತಿಹಾಸದಲ್ಲಿ 19ನೇ ವಿವಾಹವಾಗಿದೆ (Wedding). ಈವರೆಗೆ ಶ್ವೇತಭವನದಲ್ಲಿ ನಡೆದ 18 ಮದುವೆಯಲ್ಲಿ 9 ಹಿಂದಿನ ಅಮೆರಿಕದ ಅಧ್ಯಕ್ಷರ ಮಕ್ಕಳ ಮದುವೆ ಆಗಿದೆ. ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರೊಬ್ಬರ ಮೊಮ್ಮಗಳು ವೈಟ್‍ಹೌಸ್‍ನಲ್ಲಿ ಮದುವೆ ಆಗಲಿದ್ದಾರೆ ಎಂದು ವೈಟ್‍ಹೌಸ್ ಹಿಸ್ಟಾರಿಕಲ್ ಅಸೋಸಿಯೇಷನ್ ತಿಳಿಸಿದೆ. ಇದನ್ನೂ ಓದಿ: ಬೈಕ್ ಹಿಂದೆ ಎಮ್ಮೆ ಓಡುವ ಸ್ಪರ್ಧೆ – ಗೆದ್ದವರಿಗೆ ನಗದು, ಬಕೆಟ್ ಬಹುಮಾನ
Advertisement
ಬೈಡನ್ ಪತ್ನಿ ಜಿಲ್ ಬೈಡನ್ ಮಾತನಾಡಿ, ತಮ್ಮ ಮೊಮ್ಮಗಳ ಮದುವೆಯನ್ನು ನೋಡಲು ಉತ್ಸುಕರಾಗಿದ್ದೇನೆ. ಇದು ಅವಳ ಆಯ್ಕೆ ಆಗಿದೆ ಎಂದರು. ಇದನ್ನೂ ಓದಿ: ನಮ್ಮ ಇಸ್ಲಾಂ ಧರ್ಮದಲ್ಲಿ ಪ್ರತಿಮೆಗೆ ಅವಕಾಶ ಇಲ್ಲ – ಟಿಪ್ಪು ಪ್ರತಿಮೆ ಸ್ಥಾಪನೆಗೆ ಇಬ್ರಾಹಿಂ ವಿರೋಧ