– ತಮಿಳುನಾಡಲ್ಲಿ ಆಸ್ಕರ್ ವಿಜೇತ ಬೊಮ್ಮ, ಬೆಳ್ಳಿ ದಂಪತಿ ಭೇಟಿ
ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಇಂದು (ಶನಿವಾರ) ಮೈಸೂರಿಗೆ (Mysuru) ಭೇಟಿ ನೀಡಲಿದ್ದು, ವಿಶೇಷ ವಿಮಾನದ ಮೂಲಕ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಬಳಿಕ ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ತಮಿಳುನಾಡಿನ (Tamil Nadu) ಮಧು ಮಲೈ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಲಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಕಾವಾಡಿಗ ದಂಪತಿ ಬೊಮ್ಮ, ಬೆಳ್ಳಿ ಜೊತೆ ಕಾವಾಡಿಗರು, ಮಾವುತರ ಜೊತೆ ಸಂವಾದ ನಡೆಸಲಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು ದೇವೀರಮ್ಮ ದೇವಾಲಯಕ್ಕೆ ಸ್ಕರ್ಟ್, ಮಿಡಿ, ಪ್ಯಾಂಟ್ ಹಾಕ್ಕೊಂಡು ಬರುವಂತಿಲ್ಲ
ನಂತರ 5:45ರ ಸುಮಾರಿಗೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ದೆಹಲಿಗೆ (Delhi) ಪ್ರಯಾಣ ಬೆಳೆಸಲಿದ್ದಾರೆ. ಮುರ್ಮು ಮೈಸೂರು ಆಗಮನದ ವೇಳೆ ಮೈಸೂರು ಜಿಲ್ಲಾಡಳಿತ ರಾಷ್ಟ್ರಪತಿಗೆ ಸ್ವಾಗತ ಕೋರಲಿದೆ. ಇದನ್ನೂ ಓದಿ: ‘ಗೃಹಜ್ಯೋತಿ’ ಗ್ಯಾರಂಟಿಗೆ ಇಂದು ಚಾಲನೆ; ಕಲಬುರಗಿಯಲ್ಲಿ ಸಿಎಂ ಉದ್ಘಾಟನೆ – ಖರ್ಗೆ ತವರಲ್ಲಿ ಸಿದ್ಧತೆ
Web Stories