ಗಾಂಧಿನಗರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೊಮವಾರ ಸಬರಮತಿ (Sabarmati) ಆಶ್ರಮದಲ್ಲಿ (Ashram) ಚರಕ (Charkha) ಹಿಡಿದು ನೂಲು ತೆಗೆದರು.
ಎರಡು ದಿನಗಳ ಕಾಲ ದ್ರೌಪದಿ ಮುರ್ಮು (Droupadi Murmu) ಗುಜರಾತ್ ಪ್ರವಾಸದಲ್ಲಿದ್ದಾರೆ. ಈ ಮೂಲಕ ಅವರು ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಗುಜರಾತ್‍ಗೆ (Gujarat) ಭೇಟಿ ಕೊಟ್ಟಿದ್ದಾರೆ.
Advertisement
Advertisement
ಸಬರಮತಿ ಆಶ್ರಮದ ಭೇಟಿಯ ಬಗ್ಗೆ ಟ್ವೀಟ್ ಮಾಡಿರುವ ಅವರು, ಆಶ್ರಮ ಭೇಟಿ ವರ್ಣಿಸಲು ಸಾಧ್ಯವಿಲ್ಲದ ಸ್ಫೂರ್ತಿಯಾಗಿದೆ. ಈ ಹಿಂದೆಯೂ ಚರಕವನ್ನು ತಿರುಗಿಸಿದ್ದೆ. ಆದರೆ ಸಬರಾಮತಿಯಲ್ಲಿರುವ ಬಾಪು ಆಶ್ರಮದಲ್ಲಿ ಚರಕ ತಿರುಗಿಸಿರುವುದು ಸಂತೋಷವನ್ನು ತಂದಿದೆ. ಮಹಾತ್ಮ ಗಾಂಧೀಜಿ ಅವರ ಸಬರಮತಿ ಆಶ್ರಮ, ಸ್ವಾತಂತ್ರ್ಯ ಚಳುವಳಿ ಸಂದರ್ಭದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಮಹಾತ್ಮರ ಕಾರ್ಯಕ್ಷೇತ್ರವಾಗಿತ್ತು. ನಂತರವೂ ಆಶ್ರಮದ ಪಾವಿತ್ರ್ಯತೆ ಹಾಗೂ ಗಾಂಧಿ ನೆನಪು ಅಚ್ಚಳಿಯದೆ ಉಳಿದಿದೆ ಎಂದು ತಿಳಿಸಿದ್ದಾರೆ.
Advertisement
I have spun the charkha before, but doing so in Bapu’s Ashram in Sabarmati proved to be a deeply touching experience. It revealed to me the deeper significance of his philosophy of self-reliance. The pristine environment of the Ashram continues to carry his vibes even today. pic.twitter.com/YFCp0QvEjc
— President of India (@rashtrapatibhvn) October 3, 2022
Advertisement
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ರಾಷ್ಟ್ರಪತಿ ಮುರ್ಮು ಚರಕದ ಮುಂದೆ ಕುಳಿತಿದ್ದಾರೆ. ಅವರಿಗೆ ಮಹಿಳೆಯೊನ್ನರು ಮಾರ್ಗದರ್ಶನವನ್ನು ನೀಡುತ್ತಿದ್ದು, ಅದರ ಪ್ರಕಾರವಾಗಿಯೇ ಚರಕದಿಂದ ನೂಲು ತೆಗೆಯುತ್ತಿದ್ದಾರೆ. ಇದನ್ನೂ ಓದಿ: ದಸರಾ ಸಂಭ್ರಮ – 85 ದೇಶಗಳ 1.50 ಲಕ್ಷ ಭಕ್ತರಿಂದ ಪ್ರಾರ್ಥನೆ
ಈ ವೇಳೆ ಆಶ್ರಮದ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಉಪಸ್ಥಿತರಿದ್ದರು. ಮುರ್ಮು ಅವರು ಗಾಂಧಿಯವರ ಜೀವನ ಮತ್ತು ದೇಶದ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಆರ್ಕೈವಲ್ ಪ್ರದರ್ಶನವನ್ನು ವೀಕ್ಷಿಸಿದರು. ಇದನ್ನೂ ಓದಿ: ರಕ್ಷಣಾ ಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್‍ಗೆ Z+ ಭದ್ರತೆ