Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿಕಸಿತ ಭಾರತ ಜಿ ರಾಮ್ ಜಿ ಮಸೂದೆಗೆ ರಾಷ್ಟ್ರಪತಿ ಮುರ್ಮು ಅಂಕಿತ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ವಿಕಸಿತ ಭಾರತ ಜಿ ರಾಮ್ ಜಿ ಮಸೂದೆಗೆ ರಾಷ್ಟ್ರಪತಿ ಮುರ್ಮು ಅಂಕಿತ

Latest

ವಿಕಸಿತ ಭಾರತ ಜಿ ರಾಮ್ ಜಿ ಮಸೂದೆಗೆ ರಾಷ್ಟ್ರಪತಿ ಮುರ್ಮು ಅಂಕಿತ

Public TV
Last updated: December 21, 2025 7:56 pm
Public TV
Share
8 Min Read
Draupadi Murmu
SHARE

– ಕಾಯ್ದೆಯಡಿ ಕಡ್ಡಾಯ ಉದ್ಯೋಗ ಖಾತ್ರಿ ದಿನಗಳು 125ಕ್ಕೆ ಹೆಚ್ಚಳ
– ಗ್ರಾಮಸಭಾ & ಪಂಚಯತ್‌ಗಳಿಗೆ ಯೋಜನೆ ರೂಪಿಸುವ ಅಧಿಕಾರ

ನವದೆಹಲಿ: ಗ್ರಾಮೀಣ ಉದ್ಯೋಗ ನೀತಿಯಲ್ಲಿ ಮಹತ್ವದ ಮೈಲಿಗಲ್ಲು ತರುವ ಪರಿವರ್ತನಾತ್ಮಕ ವಿಕಸಿತ ಭಾರತ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಖಾತ್ರಿ (ವಿಬಿ – ಜಿ ರಾಮ್ ಜಿ) ಮಸೂದೆ 2025ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಕಿತ ಹಾಕಿದ್ದಾರೆ.

ಈ ಮೊದಲು ಸಂಸತ್, ವಿಬಿ-ಜಿ ರಾಮ್ ಜಿ ಮಸೂದೆ 2025ಗೆ ಅನುಮೋದನೆ ನೀಡಿತ್ತು. ಆ ಮೂಲಕ ಭಾರತದ ಗ್ರಾಮೀಣ ಉದ್ಯೋಗ ಮತ್ತು ಅಭಿವೃದ್ಧಿ ಚೌಕಟ್ಟಿನ ನಿರ್ಣಾಯಕ ಸುಧಾರಣೆಗೆ ಅನುವು ಮಾಡಿಕೊಟ್ಟಿತು. ಈ ಕಾಯ್ದೆ 2005ರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ಮನ್ರೇಗಾ) ಬದಲಿಗೆ ಜಾರಿಯಾಗಲಿದೆ. ಹೊಸ ಕಾಯ್ದೆಗೆ ಆಧುನಿಕ, ಸಾಂಸ್ಥಿಕ ಚೌಕಟ್ಟನ್ನು ರೂಪಿಸಲಾಗಿದ್ದು, ಇದು ಜೀವನೋಪಾಯ ಭದ್ರತೆಯನ್ನು ಹೆಚ್ಚಿಸುತ್ತದೆ. ವಿಕಸಿತ ಭಾರತ @2047 ರಾಷ್ಟ್ರೀಯ ಮುನ್ನೋಟಕ್ಕೆ ಪೂರಕವಾಗಿದೆ.ಇದನ್ನೂ ಓದಿ: ಮಾದಾವರ-ತುಮಕೂರು ಮೆಟ್ರೋ; ಆರ್‌ವಿ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಲಿಮಿಟೆಡ್‌ಗೆ DPR ಹೊಣೆ

ಈ ಕಾಯ್ದೆ ಗ್ರಾಮೀಣ ಕುಟುಂಬಗಳಿಗೆ ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ವೇತನ ಸಹಿತ ಉದ್ಯೋಗಖಾತ್ರಿಯನ್ನು ಖಚಿತಪಡಿಸುತ್ತದೆ ಮತ್ತು ಸಬಲೀಕರಣವನ್ನು ಉತ್ತೇಜಿಸುತ್ತದೆ. ಈ ಮೂಲಕ ಪ್ರಗತಿ, ಅಭಿವೃದ್ಧಿ, ಗರಿಷ್ಠ ಸರ್ಕಾರಿ ಪ್ರಯೋಜನಗಳು ಸಿಗಲಿದ್ದು, ಸಮೃದ್ಧ, ಸ್ಥಿತಿಸ್ಥಾಪಕತ್ವ ಮತ್ತು ಸ್ವಾವಲಂಬಿ ಗ್ರಾಮೀಣ ಭಾರತ ನಿರ್ಮಾಣಕ್ಕೆ ಈ ಕಾಯ್ದೆ ಭದ್ರ ಬುನಾದಿಯನ್ನು ಬಲವರ್ಧನೆಗೊಳಿಸಲಿದೆ.

ಗ್ರಾಮೀಣ ಉದ್ಯೋಗ ವ್ಯವಸ್ಥೆಯಲ್ಲಿ ಪರಿವರ್ತನೆ ತರುವುದಲ್ಲದೆ, ಕಲ್ಯಾಣ ಮಧ್ಯಸ್ಥಿಕೆಯನ್ನು ಅಭಿವೃದ್ಧಿಯ ಏಕೀಕೃತ ಸಾಧನವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ಗ್ರಾಮೀಣ ಕುಟುಂಬಗಳಿಗೆ ಆದಾಯ ಭದ್ರತೆಯನ್ನು ಬಲವರ್ಧನೆಗೊಳಿಸುವುದಲ್ಲದೆ, ಆಡಳಿತವನ್ನು ಮತ್ತು ಹೊಣೆಗಾರಿಕೆಯನ್ನು ಆಧುನೀಕರಣಗೊಳಿಸುತ್ತದೆ. ದೀರ್ಘಕಾಲದ ಮತ್ತು ಉತ್ಪಾದಕ ಗ್ರಾಮೀಣ ಸ್ವತ್ತುಗಳನ್ನು ಸೃಷ್ಟಿಸುವ ಮೂಲಕ ವೇತನ ಉದ್ಯೋಗದೊಂದಿಗೆ ಸಂಯೋಜನೆಗೊಂಡಿದೆ.

ಈ ಕಾಯ್ದೆಯ ಪ್ರಮುಖಾಂಶಗಳು:
ಕಡ್ಡಾಯ ಉದ್ಯೋಗ ಖಾತ್ರಿ ಹೆಚ್ಚಳ:

  • ಕಾಯ್ದೆಯ ಸೆಕ್ಷನ್ 5(1) ಅನ್ವಯ ಕುಟುಂಬದ ವಯಸ್ಕ ಸದಸ್ಯರು ಸ್ವಯಂಪ್ರೇರಿತವಾಗಿ ಕೌಶಲ್ಯರಹಿತ ಮಾನವ ಉದ್ಯೋಗ ಕೈಗೊಳ್ಳಲು ಪ್ರತಿ ಹಣಕಾಸು ವರ್ಷ 125 ದಿನಗಳಿಗೆ ಕಡಿಮೆ ಇಲ್ಲದಂತೆ ವೇತನ, ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸಿದೆ.
  • ಈ ಉದ್ಯೋಗಸಹಿತ ದಿನಗಳ ಹೆಚ್ಚಳ, ಹಿಂದೆ ಇದ್ದ 100 ದಿನಗಳಿಗೆ ಹೋಲಿಸಿದರೆ ಗಣನೀಯವಾಗಿ ಏರಿಕೆಯಾಗಿರುವುದಲ್ಲದೆ, ಗ್ರಾಮೀಣ ಜೀವನೋಪಾಯ ಭದ್ರತೆಯನ್ನು ಬಲವರ್ಧನೆಗೊಳಿಸಲಿದೆ.
  • ನಿರ್ದಿಷ್ಟ ಕೆಲಸ ಲಭಿಸುವುದು ಖಾತ್ರಿಯಾಗಲಿದೆ ಮತ್ತು ಗ್ರಾಮೀಣ ಕುಟುಂಬಗಳಿಗೆ ಆದಾಯ ಸ್ಥಿರತೆ ದೊರಕಲಿದೆ.
  • ಆ ಮೂಲಕ ಅವರು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಹೆಚ್ಚು ಪರಿಣಾಮಕಾರಿ ಮತ್ತು ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಲು ನೆರವಾಗಲಿದೆ.

ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ನಡುವೆ ಸಮತೋಲನ:

  • ಕೃಷಿಯ ಬಿತ್ತನೆ ಮತ್ತು ಕಟಾವಿನ ಹಂಗಾಮು ಸಮಯದಲ್ಲಿ ಕೃಷಿ ಕಾರ್ಮಿಕರ ಲಭ್ಯತೆಗೆ ನೆರವಾಗಲು ಈ ಕಾಯ್ದೆ ಹಣಕಾಸು ವರ್ಷ(ಸೆಕ್ಷನ್ 6)ರ ಅನ್ವಯ 60 ದಿನಗಳ ಕಾಲ ಅಗ್ರಿಗೇಟೆಡ್ ಪಾಸ್ ಪಿರಿಯಡ್(ರಜಾ ದಿನಗಳು) ಪ್ರಕಟಿಸಲು ರಾಜ್ಯಗಳಿಗೆ ಅಧಿಕಾರ ನೀಡುತ್ತದೆ.
  • ಪೂರ್ಣ 125 ದಿನಗಳ ಉದ್ಯೋಗ ಖಾತ್ರಿ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಉಳಿದ ಅವಧಿಯಲ್ಲಿ ಕೃಷಿ ಉತ್ಪಾದನೆ ಮತ್ತು ಕಾರ್ಮಿಕರ ಭದ್ರತೆಯ ಬೆಂಬಲದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾಗಿದೆ

ಸಕಾಲದಲ್ಲಿ ವೇತನ ಪಾವತಿ:

  • ಕಾಯ್ದೆ ವೇತನ ಪಾವತಿಯನ್ನು ವಾರದ ಆಧಾರದಲ್ಲಿ ಅಥವಾ ಕಾಮಗಾರಿ ಪೂರ್ಣಗೊಳಿಸಿದ(ಸೆಕ್ಷನ್ 5(3)) ಅನ್ವಯ 15 ದಿನಗಳಲ್ಲಿ ಪಾವತಿಸಬೇಕು. ಒಂದು ವೇಳೆ ನಿಗದಿತ ಸಮಯಕ್ಕಿಂತ ವಿಳಂಬವಾದರೆ ಶೆಡ್ಯೂಲ್ 2ರಲ್ಲಿ ಉಲ್ಲೇಖಿಸಿರುವ ನಿಬಂಧನೆಗಳಿಗೆ ಅನುಗುಣವಾಗಿ ವಿಳಂಬ ಅವಧಿಗೆ ಪರಿಹಾರವನ್ನು ಪಾವತಿಸಬೇಕಾಗುತ್ತದೆ. ಇದು ವೇತನ ಭದ್ರತೆಯನ್ನು ಪುನರುಚ್ಛರಿಸುವುದಲ್ಲದೆ, ವಿಳಂಬ ವೇತನದಿಂದ ಕಾರ್ಮಿಕರನ್ನು ರಕ್ಷಿಸುತ್ತದೆ.

ಉತ್ಪಾದಕ ಗ್ರಾಮೀಣ ಮೂಲಸೌಕರ್ಯದೊಂದಿಗೆ ಉದ್ಯೋಗ ಜೋಡಣೆ:

  • ಕಾಯ್ದೆ ಅಡಿಯಲ್ಲಿ ವೇತನ, ಉದ್ಯೋಗ ನಾಲ್ಕು ಆದ್ಯತಾ ವಲಯಗಳಾದ್ಯಂತ (ಶೆಡ್ಯೂಲ್ 1ರಲ್ಲಿ ಉಲ್ಲೇಖಿಸಿರುವ ಸೆಕ್ಷನ್ 4(2))ರಂತೆ. ದೀರ್ಘಕಾಲದ ಸಾರ್ವಜನಿಕ ಸ್ವತ್ತುಗಳ ಸೃಷ್ಟಿಯ ಜೊತೆ ಸಂಯೋಜನೆಗೊಂಡಿದೆ.

ಜಲಭದ್ರತೆ ಮತ್ತು ಜಲಸಂಬಂಧಿ ಕಾಮಗಾರಿಗಳು:

  • ಪ್ರಮುಖ ಗ್ರಾಮೀಣ ಮೂಲಸೌಕರ್ಯ
  • ಜೀವನೋಪಾಯ ಸಂಬಂಧಿ ಮೂಲಸೌಕರ್ಯ
  • ಪ್ರತಿಕೂಲ ಹವಾಮಾನ ಉಪಶಮನ ಕಾಮಗಾರಿಗಳು
  • ಎಲ್ಲಾ ಕಾಮಗಾರಿಗಳನ್ನು ತಳಮಟ್ಟದಿಂದ ಅನ್ವಯವಾಗುವಂತೆ ಯೋಜಿಸಬೇಕು ಮತ್ತು ಎಲ್ಲಾ ಸೃಷ್ಟಿಸುವ ಸ್ವತ್ತುಗಳು ವಿಕಸಿತ ಭಾರತ – ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾಯ್ದೆಗೆ ಹೊಂದಿಕೆಯಾಗಬೇಕು. ಅದರಲ್ಲಿ ಸಾರ್ವಜನಿಕ ಹೂಡಿಕೆಗಳ ಒಳಗೊಳ್ಳುವಿಕೆ ಮತ್ತು ಫಲಿತಾಂಶ ಆಧಾರಿತ ಯೋಜನೆಗಳ ಮೂಲಕ ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ನಿರ್ಣಾಯಕ ಗ್ರಾಮೀಣ ಮೂಲಸೌಕರ್ಯ ಸೃಷ್ಟಿ ಖಾತ್ರಿಪಡಿಸುತ್ತದೆ.

ರಾಷ್ಟ್ರೀಯ ಸಮನ್ವಯತೆಯೊಂದಿಗೆ ವಿಕೇಂದ್ರೀಕರಣ ಯೋಜನೆ:

  • ಎಲ್ಲಾ ಕಾಮಗಾರಿಗಳು ವಿಕಸಿತ ಗ್ರಾಮ ಪಂಚಾಯಿತಿ ಯೋಜನೆಗಳು (ವಿಜಿಪಿಪಿ)ಗಳ ಮೂಲ ಹೊಂದಿರಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆಯೊಂದಿಗೆ ಸಿದ್ಧಪಡಿಸಿರಬೇಕು ಮತ್ತು ಗ್ರಾಮ ಸಭಾ (ಸೆಕ್ಷನ್ 4(1)-(3)) ಅನುಮೋದಿಸಿರಬೇಕು.
  • ಈ ಯೋಜನೆಗಳನ್ನು ಡಿಜಿಟಲ್ ರೂಪದಲ್ಲಿ ಮತ್ತು ಭೌತಿಕವಾಗಿ ರಾಷ್ಟ್ರೀಯ ವೇದಿಕೆಗಳಾದ ಪಿಎಂ ಗತಿಶಕ್ತಿ ಸೇರಿದಂತೆ ಇತರೆ ವೇದಿಕೆಗಳೊಂದಿಗೆ ಸಂಯೋಜಿಸಿರಬೇಕು. ಅವು ಇಡೀ ಸರ್ಕಾರದ ಸಮನ್ವಯತೆಯೊಂದಿಗೆ ಸಂಪೂರ್ಣ ವಿಕೇಂದ್ರೀಕರಣ ನಿರ್ಧಾರ ಕೈಗೊಳ್ಳುವಿಕೆಗೆ ಒಳಪಟ್ಟಿರಬೇಕು.
  • ಈ ಏಕೀಕೃತ ಯೋಜನಾ ಚೌಕಟ್ಟಿನಿಂದಾಗಿ ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳು ಯೋಜನೆಗಳನ್ನು ರೂಪಿಸಲು ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲು ನೆರವಾಗುತ್ತದೆ ಹಾಗೂ ಎರಡೆರಡು ಕೆಲಸಗಳು ಮಾಡುವುದು ತಪ್ಪುತ್ತದೆ ಮತ್ತು ಸಾರ್ವಜನಿಕ ಸಂಪನ್ಮೂಲಗಳು ವ್ಯರ್ಥವಾಗುವುದಿಲ್ಲ ಹಾಗೂ ಗರಿಷ್ಠ ಫಲಿತಾಂಶದ ಮೂಲಕ ಖಚಿತ ಅಭಿವೃದ್ಧಿ ಸಾಧ್ಯವಾಗಲಿದೆ.

ಸುಧಾರಿತ ಹಣಕಾಸು ವ್ಯವಸ್ಥೆ:

  • ಈ ಕಾಯ್ದೆಯನ್ನು ಕೇಂದ್ರದ ಪ್ರಾಯೋಜಕತ್ವದ ಯೋಜನೆಯನ್ನಾಗಿ ಜಾರಿಗೊಳಿಸಬೇಕು. ಅದನ್ನು ಯೋಜನೆಗಳ ನಿಬಂಧನೆಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರಗಳು ಅಧಿಸೂಚನೆ ಹೊರಡಿಸಬೇಕು ಮತ್ತು ಅವುಗಳನ್ನು ಅನುಷ್ಠಾನಗೊಳಿಸಬೇಕು.
  • ಯೋಜನೆಯ ಹಣಕಾಸು ಹಂಚಿಕೆ ಪದ್ಧತಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ 60:40ರಷ್ಟಿದ್ದು, ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯದ ರಾಜ್ಯಗಳಿಗೆ 90:10 ಮತ್ತು ಶಾಸನ ಸಭೆಗಳಿಲ್ಲದ ಕೇಂದ್ರಾಡಳಿತ ಪ್ರದೇಶಗಳಿಗೆ ಶೇ. 100ರಷ್ಟು ಕೇಂದ್ರದ ನೆರವು ಲಭ್ಯವಾಗಲಿದೆ.
  • ಆರ್ಥಿಕ ನೆರವನ್ನು ನಿಯಮ (ಸೆಕ್ಷನ್ 4(5) ಮತ್ತು 22(4))ನಲ್ಲಿ ನಿಗದಿಪಡಿಸಿರುವ ಮಾನದಂಡಗಳನ್ನಾಧರಿಸಿ ರಾಜ್ಯವಾರು ಹಂಚಿಕೆ ಮಾಡಲಾಗುವುದು. ಇದು ಎಷ್ಟು ಅನುದಾನ ಬರುತ್ತದೆ ಎಂಬುದನ್ನು ಊಹಿಸಬಹುದಾಗಿದ್ದು, ವಿತ್ತೀಯ ಶಿಸ್ತು ಮತ್ತು ಉತ್ತಮ ರೀತಿಯಲ್ಲಿ ಯೋಜನೆ ರೂಪಿಸಲು ಸಹಕಾರಿಯಾಗಲಿದೆ. ಜೊತೆಗೆ ಉದ್ಯೋಗ ಮತ್ತು ನಿರುದ್ಯೋಗ ಭತ್ಯೆ ಪಾವತಿಗೆ ರಕ್ಷಣೆಯನ್ನು ಒದಗಿಸುತ್ತದೆ.

ಆಡಳಿತಾತ್ಮಕ ಸಾಮರ್ಥ್ಯ ಬಲವರ್ಧನೆ:

  • ಆಡಳಿತಾತ್ಮಕ ವೆಚ್ಚದ ಮಿತಿಯನ್ನು ಶೇ.6ರಿಂದ ಶೇ.9ಕ್ಕೆ ಹೆಚ್ಚಿಸಲಾಗಿದ್ದು, ಇದರಲ್ಲಿ ಸಿಬ್ಬಂದಿಯ ಸುಧಾರಣೆ, ತರಬೇತಿ, ತಾಂತ್ರಿಕ ಸಾಮರ್ಥ್ಯವೃದ್ಧಿ ಮತ್ತು ತಳಮಟ್ಟದ ನೆರವು ಒಳಗೊಂಡಿದೆ ಹಾಗೂ ಪರಿಣಾಮಕಾರಿ ಫಲಿತಾಂಶಗಳು ನೀಡಲು ಸಂಸ್ಥೆಗಳ ಸಾಮರ್ಥ್ಯ ಬಲವರ್ಧನೆಯೂ ಸೇರಿದೆ.
  • ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಖಾತ್ರಿ (ವಿಬಿ – ಜಿ ರಾಮ್ ಜಿ) ಮಸೂದೆ 2025ಕ್ಕೆ ಒಂದು ನಿರ್ಣಾಯಕ ಹೆಜ್ಜೆಯಾಗಿದೆ ಮತ್ತು ಇದು ವಿಕಸಿತ @2047ಗೆ ಪೂರಕವಾಗಿ ಭಾರತದ ಗ್ರಾಮೀಣ ಉದ್ಯೋಗ ವ್ಯವಸ್ಥೆಯ ಚೌಕಟ್ಟನ್ನು ಬಲವರ್ಧನೆಗೊಳಿಸಲಿದೆ.
  • ಪ್ರತಿ ಹಣಕಾಸು ವರ್ಷ ಕನಿಷ್ಠ 125 ದಿನ ವೇತನ ಖಾತ್ರಿ ಉದ್ಯೋಗವನ್ನು ಒದಗಿಸುವುದರೊಂದಿಗೆ ಕಾಯ್ದೆ ಆಳವಾದ ವಿಕೇಂದ್ರೀಕೃತ ಸಾರ್ವಜನಿಕ ಪಾಲ್ಗೊಳ್ಳುವಿಕೆಯೊಂದಿಗೆ ಉದ್ಯೋಗಕ್ಕೆ ಬೇಡಿಕೆಯೊಡ್ಡುವ ಹಕ್ಕನ್ನು ಪುನರ್ ಪ್ರತಿಪಾದಿಸುತ್ತದೆ.
  • ಇದು ಪಾರದರ್ಶಕ, ನಿಯಮಾಧಾರಿತ ಆರ್ಥಿಕ ನೆರವು, ಉತ್ತರದಾಯಿತ್ವ ಕಾರ್ಯ ವಿಧಾನ, ತಂತ್ರಜ್ಞಾನ ಆಧಾರಿತ ಒಳಗೊಳ್ಳುವಿಕೆ ಮತ್ತು ಸಮನ್ವಯ ಆಧಾರಿತ ಅಭಿವೃದ್ಧಿಯನ್ನು ಗ್ರಾಮೀಣ ಉದ್ಯೋಗಕ್ಕೆ ಖಾತ್ರಿಪಡಿಸುವುದಲ್ಲದೆ, ಆದಾಯ ಭದ್ರತೆಯನ್ನೂ ಸಹ ಒದಗಿಸುತ್ತದೆ. ಜೊತೆಗೆ ಸುಸ್ಥಿರ ಜೀವನೋಪಾಯ, ಸ್ಥಿತಿ ಸ್ಥಾಪಕ ಆಸ್ತಿಗಳ ಸೃಷ್ಟಿ ಮತ್ತು ದೀರ್ಘಾವಧಿಯಲ್ಲಿ ಗ್ರಾಮೀಣ ಸಮೃದ್ಧಿಗೆ ಕೊಡುಗೆ ನೀಡುತ್ತದೆ.

ಉದ್ಯೋಗ ಖಾತ್ರಿ ಮತ್ತು ಬೇಡಿಕೆಯ ಹಕ್ಕು:

  • ಕಾಯ್ದೆಯಡಿ ಉದ್ಯೋಗ ಬೇಡಿಕೆಯ ಹಕ್ಕನ್ನು ದುರ್ಬಲಗೊಳಿಸಿಲ್ಲ. ಅದಕ್ಕೆ ಬದಲಾಗಿ ಸೆಕ್ಷನ್ 5(1)ರ ಅಡಿ ಸರ್ಕಾರಕ್ಕೆ ಕನಿಷ್ಠ 125 ದಿನಕ್ಕಿಂತ ಕಡಿಮೆ ಇಲ್ಲದಂತೆ ಅರ್ಹ ಗ್ರಾಮೀಣ ಕುಟುಂಬಗಳಿಗೆ ವೇತನಸಹಿತ ಉದ್ಯೋಗ ಖಾತ್ರಿಯನ್ನು ಕಡ್ಡಾಯಗೊಳಿಸಲಾಗಿದೆ.
  • ಖಾತ್ರಿಪಡಿಸಿದ ಉದ್ಯೋಗ ದಿನಗಳ ವಿಸ್ತರಣೆಯಿಂದ ಒಟ್ಟಾರೆ ಉತ್ತರದಾಯಿತ್ವ ಬಲವರ್ಧನೆಗೊಳ್ಳುವುದಲ್ಲದೆ, ಕುಂದುಕೊರತೆ ನಿವಾರಣಾ ಕಾರ್ಯತಂತ್ರಗಳು ಮತ್ತು ತಮ್ಮ ಹಕ್ಕುಗಳ ಜಾರಿಯನ್ನು ಪುನರ್ ಪ್ರತಿಪಾದಿಸುತ್ತದೆ.

ಪ್ರಮಾಣಿತ ಹಣಕಾಸು ಮತ್ತು ಉದ್ಯೋಗ ನಿಬಂಧನೆ:

  • ಹಣಕಾಸು ಹಂಚಿಕೆ ಮತ್ತು ಹಣಕಾಸು ಹರಿವು ಕಾರ್ಯತಂತ್ರದಲ್ಲಿನ ಬದಲಾವಣೆಗಳಿಂದ ಉದ್ಯೋಗ ನೀಡುವ ಕಾನೂನುಬದ್ಧ ಹಕ್ಕಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸೆಕ್ಷನ್ 4(5) ಮತ್ತು 22(4)ರ ಅನ್ವಯ ನಿಯಮದ ಅನುಸಾರ ಸಂಭಾವ್ಯ ಹಂಚಿಕೆಯನ್ನು ಖಾತ್ರಿಪಡಿಸಲಿದೆ ಮತ್ತು ವೇತನ ಹಾಗೂ ನಿರುದ್ಯೋಗ ಭತ್ಯೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.

ವಿಕೇಂದ್ರೀಕರಣ ಮತ್ತು ಪಂಚಾಯ್ತಿಗಳ ಪಾತ್ರ:

  • ಈ ಕಾಯ್ದೆ ಯೋಜನೆ ಅಥವಾ ಜಾರಿಯನ್ನು ಒಂದೇ ಕಡೆ ಕೇಂದ್ರೀಕರಿಸಿಲ್ಲ. ಸೆಕ್ಷನ್ 16 ರಿಂದ 19ರ ವರೆಗೆ ಯೋಜನೆಗಳನ್ನು ರೂಪಿಸುವುದು, ಅನುಷ್ಠಾನ ಮತ್ತು ಮೇಲ್ವಿಚಾರಣಾ ಅಧಿಕಾರವನ್ನು ಪಂಚಾಯತ್ ಗಳಿಗೆ ನೀಡಲಾಗಿದೆ. ಕಾರ್ಯಕ್ರಮ ಅಧಿಕಾರಿಗಳು ಮತ್ತು ಜಿಲ್ಲಾ ಪ್ರಾಧಿಕಾರಗಳು ಸೂಕ್ತ ಅಧಿಕಾರವನ್ನು ಹೊಂದಿರಲಿದ್ದಾರೆ. ರಾಷ್ಟ್ರಮಟ್ಟದಲ್ಲಿ ಏಕೀಕೃತಗೊಳಿಸಿರುವುದೆಂದರೆ ಸಮನ್ವಯತೆ ಮತ್ತು ಸಹಕಾರ ಇದು ಸ್ಥಳೀಯ ನಿರ್ಧಾರ ಕೈಗೊಳ್ಳುವಿಕೆಯ ಮೇಲೆ ಅನ್ವಯಿಸುವುದಲ್ಲ.

ಉದ್ಯೋಗ ಮತ್ತು ಆಸ್ತಿ ಸೃಷ್ಟಿ:

  • ಕಾಯ್ದೆ, ಕಡ್ಡಾಯ ಜೀವನೋಪಾಯ ಉದ್ಯೋಗ ಖಾತ್ರಿಯನ್ನು 125 ದಿನಗಳಿಗೆ ಹೆಚ್ಚಿಸಿದೆ. ಆ ಮೂಲಕ ಉದ್ಯೋಗ, ಉತ್ಪಾದಕ, ದೀರ್ಘಕಾಲೀನ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವ ಸ್ವತ್ತುಗಳ ಸೃಷ್ಟಿಗೆ ಕೊಡುಗೆ ನೀಡುವುದನ್ನು ಖಾತ್ರಿಪಡಿಸುತ್ತದೆ.
  • ಉದ್ಯೋಗ ಸೃಷ್ಟಿ ಮತ್ತು ಆಸ್ತಿ ಸೃಷ್ಟಿಯನ್ನು ಪರಸ್ಪರ ಪುನರ್ ಸ್ಥಾಪಿಸುವ ಉದ್ದೇಶಗಳನ್ನಾಗಿ ರೂಪಿಸಲಾಗಿದ್ದು, ಅವು ದೀರ್ಘಾವಧಿಯ ಗ್ರಾಮೀಣ ಪ್ರಗತಿ ಮತ್ತು ಸ್ಥಿತಿ ಸ್ಥಾಪಕತ್ವವನ್ನು (ಸೆಕ್ಷನ್ 4(2) ಮತ್ತು ಶೆಡ್ಯೂಲ್ 1)ಕ್ಕೆ ಬೆಂಬಲಿಸುತ್ತದೆ.

ತಂತ್ರಜ್ಞಾನ ಮತ್ತು ಒಳಗೊಳ್ಳುವಿಕೆ:

  • ಕಾಯ್ದೆಯಡಿ ತಂತ್ರಜ್ಞಾನವನ್ನು ಕಾರ್ಯಸಾಧನ ವಿಧಾನವಾಗಿ ಇಡಲಾಗಿದ್ದು, ಅದು ಯಾವುದೇ ರೀತಿಯಲ್ಲೂ ಅಡಚಣೆ ಉಂಟುಮಾಡುವುದಿಲ್ಲ. ಸೆಕ್ಷನ್ 23 ಮತ್ತು 24ರ ಅನ್ವಯ ತಂತ್ರಜ್ಞಾನ ಆಧಾರಿತ ಪಾರದರ್ಶಕತೆಗೆ ಒತ್ತು ನೀಡಲಾಗಿದ್ದು, ಅದರಡಿ ಬಯೋಮೆಟ್ರಿಕ್ ಹಾಜರಾತಿ, ಜಿಯೋ ಟ್ಯಾಗಿಂಗ್ ಮತ್ತು ರಿಯಲ್ ಟೈಮ್ ಡ್ಯಾಶ್ ಬೋರ್ಡ್ ಗಳನ್ನು ಕಡ್ಡಾಯಗೊಳಿಸಲಾಗಿದೆ.
  • ಸೆಕ್ಷನ್ 20ರಡಿ ಗ್ರಾಮ ಸಭೆಗಳ ಸಾಮಾಜಿಕ ಆಡಿಟ್ ಗಳನ್ನು ಬಲವರ್ಧನೆಗೊಳಿಸಿರುವುದೇ ಅಲ್ಲದೆ, ಸಮುದಾಯಗಳ ಮೇಲ್ವಿಚಾರಣೆ, ಪಾರದರ್ಶಕತೆ ಮತ್ತು ಎಲ್ಲರನ್ನೊಳಗೊಳ್ಳುವಿಕೆ ಖಾತ್ರಿಪಡಿಸಲಾಗಿದೆ.

ನಿರುದ್ಯೋಗ ಭತ್ಯೆ:

  • ಈ ಕಾಯ್ದೆಯು ಹಿಂದಿನ ಹಕ್ಕು ನಿರಾಕರಣೆ ನಿಬಂಧನೆಗಳನ್ನು ತೆಗೆದುಹಾಕುತ್ತದೆ ಮತ್ತು ಅರ್ಥಪೂರ್ಣ ಶಾಸನಬದ್ಧ ರಕ್ಷಣೆಯಾಗಿ ನಿರುದ್ಯೋಗ ಭತ್ಯೆಯನ್ನು ಪುನರ್ ಸ್ಥಾಪಿಸುತ್ತದೆ. ನಿಗದಿತ ಅವಧಿಯೊಳಗೆ ಉದ್ಯೋಗ ಒದಗಿಸದಿದ್ದರೆ, ಹದಿನೈದು ದಿನಗಳ ನಂತರ ನಿರುದ್ಯೋಗ ಭತ್ಯೆಯನ್ನು ಪಾವತಿಸಬೇಕಾಗುತ್ತದೆ.

ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಖಾತ್ರಿ (ವಿಬಿ – ಜಿ ರಾಮ್ ಜಿ) ಮಸೂದೆ 2025 ಅನುಮೋದನೆ ಭಾರತದ ಗ್ರಾಮೀಣ ಉದ್ಯೋಗ ಖಾತ್ರಿ ನವೀಕರಣದಲ್ಲಿ ಮಹತ್ವದ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. 125 ದಿನಗಳ ಕಡ್ಡಾಯ ಉದ್ಯೋಗ ಅವಧಿ ವಿಸ್ತರಣೆ, ವಿಕೇಂದ್ರೀಕರಣ, ಯೋಜನೆಯಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ, ಉತ್ತರ ದಾಯಿತ್ವ ಬಲವರ್ಧನೆ ಮತ್ತು ಸಂಸ್ಥೆಗಳ ನಡುವೆ ಸಮನ್ವಯ ಹಾಗೂ ಗರಿಷ್ಠ ಅಭಿವೃದ್ಧಿಯ ಅಂಶಗಳು ಒಳಗೊಂಡಿದ್ದು, ಕಾಯ್ದೆ ಗ್ರಾಮೀಣ ಉದ್ಯೋಗವನ್ನು ಸಬಲೀಕರಣ, ಎಲ್ಲರನ್ನೊಳಗೊಂಡ ಅಭಿವೃದ್ಧಿಗೆ ಕಾರ್ಯತಾಂತ್ರಿಕ ಸಾಧನವನ್ನಾಗಿ ಪುನರ್ ಸ್ಥಾಪಿಸಿದೆ. ಕಾಯ್ದೆ ವಿಕಸಿತ ಭಾರತ @2047 ಮುನ್ನೋಟಕ್ಕೆ ಅನುಗುನವಾಗಿ ಸುಸ್ಥಿರ ಮತ್ತು ಸಮೃದ್ಧ ಗ್ರಾಮೀಣ ಭಾರತವನ್ನು ನಿರ್ಮಿಸಲಿದೆ.ಇದನ್ನೂ ಓದಿ: ಯಶ್ ನಾಯಕಿ ಕಿಯಾರಾ ಫಸ್ಟ್ ಲುಕ್.. ಅಬ್ಬಬ್ಬಾ ಬೆಂಕಿ !

TAGGED:Droupadi MurmuG Ram GMNareganewdelhiVB G Ram Gಜಿ ರಾಮ್ ಜಿದ್ರೌಪದಿ ಮುರ್ಮುನವದೆಹಲಿ
Share This Article
Facebook Whatsapp Whatsapp Telegram

Cinema news

calendar movie
ಕ್ಯಾಲೆಂಡರ್ ಹೆಸರಿನಲ್ಲಿ ಬಂತು ಸಿನಿಮಾ: ಆದರ್ಶ್ ನಾಯಕ
Cinema Latest Sandalwood Top Stories
KGF
7ನೇ ವರ್ಷದ ಸಂಭ್ರಮದಲ್ಲಿ ಕೆಜಿಎಫ್ ಚಾಪ್ಟರ್-1
Cinema Latest Sandalwood Top Stories
Kiara Adwani
ಯಶ್ ನಾಯಕಿ ಕಿಯಾರಾ ಫಸ್ಟ್ ಲುಕ್.. ಅಬ್ಬಬ್ಬಾ ಬೆಂಕಿ !
Cinema Latest Sandalwood Top Stories
jodettu chikkanna
ಹೊಸ ವರ್ಷಕ್ಕೆ ಚಿಕ್ಕಣ್ಣ ನಟನೆಯ ‘ಜೋಡೆತ್ತು’ ಶೂಟಿಂಗ್ ಶುರು
Cinema Latest Sandalwood Top Stories

You Might Also Like

ISRO 2
Latest

ಮೊಬೈಲ್‌ಗೆ ನೇರ ಇಂಟರ್‌ನೆಟ್ ಸೌಲಭ್ಯ – ಮತ್ತೊಂದು ಪರಾಕ್ರಮಕ್ಕೆ ಸಜ್ಜಾದ ಇಸ್ರೋ

Public TV
By Public TV
1 hour ago
DKSHI HDK
Hassan

ಡಿಕೆಶಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಹೆಚ್‌ಡಿಕೆ

Public TV
By Public TV
2 hours ago
Namma Metro Greenline
Bengaluru City

ಮಾದಾವರ-ತುಮಕೂರು ಮೆಟ್ರೋ; ಆರ್‌ವಿ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಲಿಮಿಟೆಡ್‌ಗೆ DPR ಹೊಣೆ

Public TV
By Public TV
2 hours ago
ozempic
Explainer

PublicTV Explainer: ಮಧುಮೇಹಿಗಳು, ಸ್ಥೂಲಕಾಯರಿಗೆ ಗುಡ್ ನ್ಯೂಸ್; ಭಾರತಕ್ಕೆ ಬಂತು ಓಝೆಂಪಿಕ್ – ಏನಿದು ಔಷಧಿ?

Public TV
By Public TV
3 hours ago
U19 Asia Cup Pakistan
Cricket

U19 Asia Cup Final: ಭಾರತ ಮಣಿಸಿ 2ನೇ ಬಾರಿಗೆ ಏಷ್ಯಾ ಕಪ್‌ ಗೆದ್ದ ಪಾಕಿಸ್ತಾನ

Public TV
By Public TV
3 hours ago
Sabarimala Theft Case
Bellary

ಶಬರಿಮಲೆ ಚಿನ್ನ ಕಳ್ಳತನ ಕೇಸ್ – ಆರೋಪಿ ಮಾಸ್ಟರ್ ಪ್ಲ್ಯಾನ್‌ಗೆ ಕೇರಳ SIT ಶಾಕ್

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?