ನವದೆಹಲಿ: 75ನೇ ಸಂವಿಧಾನ ದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ (President Droupadi Murmu) ಮುರ್ಮು ಅವರಿಂದು 9 ಭಾಷೆಗಳಲ್ಲಿ ಭಾರತದ ಸಂವಿಧಾನದ ಡಿಜಿಟಲ್ ಆವೃತ್ತಿ ಬಿಡುಗಡೆಗೊಳಿಸಿದರು.
ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುರ್ಮು ಅವರಿಂದು ಮಲಯಾಳಂ, ಮರಾಠಿ, ನೇಪಾಳಿ, ಪಂಜಾಬಿ, ಬೋಡೋ, ಕಾಶ್ಮೀರಿ, ತೆಲುಗು, ಒಡಿಯಾ ಮತ್ತು ಅಸ್ಸಾಮಿ ಭಾಷೆಗಳಲ್ಲಿ ಭಾರತದ ಸಂವಿಧಾನದ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಇದೇ ವೇಳೆ “ಭಾರತ್ ಕೆ ಸಂವಿಧಾನ್ ಮೈ ಕಲಾ ಔರ್ ಕ್ಯಾಲಿಗ್ರಫಿ” ಎಂಬ ಸ್ಮರಣಾರ್ಥ ಕಿರುಪುಸ್ತಕವನ್ನು ಸಹ ಬಿಡುಗಡೆ ಮಾಡಿದರು. ಇದನ್ನೂ ಓದಿ:ಬರ್ತಿದೆ `ಸೆನ್ಯಾರ್’ ಚಂಡಮಾರುತ – ತಮಿಳುನಾಡು, ಕೇರಳ ಸೇರಿ ಕೆಲ ರಾಜ್ಯಗಳಿಗೆ ಮಳೆ ಮುನ್ನೆಚ್ಚರಿಕೆ: IMD
ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ, ಕೇಂದ್ರ ಸಚಿವರಾದ ಜೆಪಿ ನಡ್ಡಾ ಮತ್ತು ಕಿರಣ್ ರಿಜಿಜು ಮತ್ತು ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಉಪಸ್ಥಿತರಿದ್ದರು. ಸಂಸತ್ತಿನ ಉಭಯ ಸದನಗಳ ಹಲವಾರು ಕೇಂದ್ರ ಸಚಿವರು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಸಂವಿಧಾನವು ರಾಷ್ಟ್ರದ ಗುರುತಿನ ಮೂಲಾಧಾರ. ವಸಾಹತುಶಾಹಿ ಮನಸ್ಥಿತಿಯನ್ನು ತ್ಯಜಿಸಿ ರಾಷ್ಟ್ರೀಯತಾವಾದಿ ಚಿಂತನೆಯನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶಿ ದಾಖಲೆಯಾಗಿದೆ. ನಮ್ಮ ಸಂವಿಧಾನವು ರಾಷ್ಟ್ರದ ಹೆಮ್ಮೆಯ ದಾಖಲೆಯಾಗಿದೆ. ಇದೊಂದು ನಮ್ಮ ರಾಷ್ಟ್ರದ ಗುರುತು ಎಂದು ತಿಳಿಸಿದ್ದಾರೆ.
President Droupadi Murmu graced the Constitution Day Celebrations, organised by the Supreme Court of India in New Delhi. The President said that the Constitution is the source of peaceful social, economic, and political revolution in the world’s largest democracy. It is also the… pic.twitter.com/I7W85UzERB
— President of India (@rashtrapatibhvn) November 26, 2025
ಸಂವಿಧಾನ ನಿರ್ಮಾತೃಗಳು ನಮ್ಮ ವೈಯಕ್ತಿಕ, ಪ್ರಜಾಪ್ರಭುತ್ವ ಹಕ್ಕುಗಳನ್ನು ಯಾವಾಗಲೂ ರಕ್ಷಿಸಬೇಕೆಂದು ಬಯಸಿದ್ದರು. ಅದರಂತೆ ಮಹಿಳೆಯರು, ಯುವಕರು, ಎಸ್‌ಸಿ, ಎಸ್‌ಟಿ, ರೈತರು, ಮಧ್ಯಮ ವರ್ಗ, ಹೊಸ ಮಧ್ಯಮ ವರ್ಗದವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದಾರೆ. ಇದೆಲ್ಲದರ ಫಲವಾಗಿ ಇಂದು 25 ಕೋಟಿ ಜನರು ಬಡತನದಿಂದ ಹೊರಬಂದಿದ್ದು, ದೇಶದ ದೊಡ್ಡ ಸಾಧನೆಗಳಲ್ಲಿ ಒಂದು ಎಂದು ಹೇಳಿದ್ದಾರೆ.
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮಾತನಾಡಿ, ನಮ್ಮ ಸಂವಿಧಾನದ ಆತ್ಮವು ಭಾರತ ಒಂದೇ ಎಂದು ಹಾಗೂ ಅದು ಶಾಶ್ವತವಾಗಿ ಒಂದೇ ಆಗಿರುತ್ತದೆ ಎಂದು ಸಾಬೀತುಪಡಿಸಿದೆ. ಕಳೆದ ಏಳು ದಶಕಗಳಲ್ಲಿ, ಸಾಮಾಜಿಕ ನ್ಯಾಯ ಮತ್ತು ಸಮಗ್ರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ನಾವು ನೀತಿ ಮತ್ತು ಕಾನೂನುಗಳನ್ನು ರೂಪಿಸಿದ್ದೇವೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಪಾನ್ ಮಸಾಲಾ ಉದ್ಯಮಿಯ ಸೊಸೆ ನೇಣು ಬಿಗಿದುಕೊಂಡು ಆತ್ಮಹತ್ಯೆ

