ನವದೆಹಲಿ: ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ (Sudha Murty) ಹಾಗೂ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ (SL Bhyrappa) ಅವರಿಗೆ ಪದ್ಮ ಭೂಷಣ (Padma Bhushan) ಪ್ರಶಸ್ತಿ ಲಭಿಸಿದೆ.
President Droupadi Murmu presents Padma Bhushan to Smt Sudha Murty for Social Work. A philanthropist, renowned author and Chairperson of Murty Foundation, she has initiated many projects in the fields of healthcare, education, art & culture, animal welfare and women’s empowerment pic.twitter.com/qQJeEjnKfY
— President of India (@rashtrapatibhvn) April 5, 2023
Advertisement
ಇಲ್ಲಿನ ರಾಷ್ಟ್ರಪತಿ ಭವನದಲ್ಲಿ ಭಾನುವಾರ ನಡೆದ ಪ್ರಧಾನ ಸಮಾರಂಭದಲ್ಲಿ ರಾಷ್ಟ್ರಪತಿ (President Of India) ದ್ರೌಪದಿ ಮುರ್ಮು (Droupadi Murmu) ಅವರು ವಿವಿಧ ಕ್ಷೇತ್ರದ ಸಾಧಕರಿಗೆ 2023ನೇ ಸಾಲಿನ ಪದ್ಮಶ್ರೀ, ಪದ್ಮ ವಿಭೂಷಣ ಹಾಗೂ ಪದ್ಮಭೂಷಣ ಪ್ರಶಸ್ತಿಗಳನ್ನ ಪ್ರದಾನ ಮಾಡಿದರು. ಇದನ್ನೂ ಓದಿ: Delhi Metro Girl: ನಾನೂ ಸಂಪ್ರದಾಯಸ್ಥ ಹುಡ್ಗಿ, ಏನ್ ಬೇಕಾದ್ರೂ ಧರಿಸ್ತೀನಿ ಎಂದ ಬಿಕಿನಿ ಗರ್ಲ್
Advertisement
ಸಮಾಜ ಸೇವೆ, ಮಹಿಳಾ ಸಬಲೀಕರಣ, ಶಿಕ್ಷಣ, ಕಲೆ ಮತ್ತು ಸಂಸ್ಕೃತಿ, ವನ್ಯಜೀವಿ ಅಭಿವೃದ್ಧಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಹಿರಿಯ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಸರ್ಕಾರವನ್ನು ಟೀಕಿಸಿದ ಮಾತ್ರಕ್ಕೆ ಮಾಧ್ಯಮ ನಿಯಂತ್ರಿಸಲು ಸಾಧ್ಯವಿಲ್ಲ: ಕೇಂದ್ರಕ್ಕೆ ಸುಪ್ರೀಂ ತರಾಟೆ
Advertisement
President Droupadi Murmu presents Padma Bhushan to Dr S.L. Bhyrappa for Literature & Education. A retired Professor of Philosophy, Dr Bhyrappa is a widely acclaimed Kannada author whose works have been translated in many languages. pic.twitter.com/62sszyVoSi
— President of India (@rashtrapatibhvn) April 5, 2023
Advertisement
ಇದೇ ವೇಳೆ ಕೆಜಿಎಫ್-2 ನಟಿ ರವೀನಾ ಟಂಡನ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು.