ನವದೆಹಲಿ: ಕೊರೊನಾ ಕಾರಣದಿಂದಾಗಿ ನಷ್ಟದ ಹಾದಿಯಲ್ಲಿರುವ ದೇಶದ ಆರ್ಥಿಕತೆಯನ್ನು ಸರಿ ದಾರಿಗೆ ತರುವ ಲೆಕ್ಕಾಚಾರದಲ್ಲಿರುವ ಮೋದಿ ಸರ್ಕಾರ ಮತ್ತಷ್ಟು ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಮುಂದಾಗಿದೆ. ಮುಂದಿನ ಮಾರ್ಚ್ ವೇಳೆಗೆ 13 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
Advertisement
ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಅಧ್ಯಕ್ಷ ಸಂಜೀವ್ ಕುಮಾರ್ ಹೇಳಿಕೆಯನ್ನು ಆಧರಿಸಿ ಈ ವರದಿ ಮಾಡಿದ್ದು, 7 ಸಣ್ಣ ಮತ್ತು 6 ದೊಡ್ಡ ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಚಿಂತಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ರೇವಣ್ಣ DCM ಆಗ್ತಾನೆಂದು ಬಿಎಸ್‍ವೈಗೆ ಅಧಿಕಾರ ಬಿಟ್ಟು ಕೊಡಲಿಲ್ಲ, ನನ್ನ ಬಳಿ ವೀಡಿಯೋ ದಾಖಲೆ ಇದೆ: ಜಮೀರ್
Advertisement
ಈಗಾಗಲೇ ವಿಮಾನ ನಿಲ್ದಾಣಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಈ ಪಟ್ಟಿಯನ್ನು ಏರ್ ಪೋರ್ಟ್ ಅಥಾರಟಿ ಆಫ್ ಇಂಡಿಯಾ ನಾಗರಿಕರ ವಾಯುಯಾನ ಸಚಿವಾಲಯಕ್ಕೆ ರವಾನಿಸಿದೆ. ಈ ಪಟ್ಟಿಯಲ್ಲಿ ಕುಶಿನಗರ ಗಯಾ, ಕಾಂಗ್ರಾ, ಅಮೃತಸರ, ತಿರುಪತಿ, ಭುವನೇಶ್ವರ, ಔರಂಗಾಬಾದ್, ರಾಯ್ಪುರ್, ಜಬಲ್‍ಪುರ, ಇಂದೋರ್, ಹುಬ್ಬಳ್ಳಿ, ತಿರುಚಿ ಒಳಗೊಂಡಿದೆ.
Advertisement
Advertisement
PPP (ಸಾರ್ವಜನಿಕ-ಖಾಸಗಿ ಪಾಲುದಾರಿಕೆ) ಮೇಲೆ ಬಿಡ್‍ಗೆ ಚಿಂತನೆ ನಡೆದಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಒಟ್ಟು 25 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಕ್ಕೆ ಕೇಂದ್ರವು ಯೋಜಿಸುತ್ತಿದೆ ಎಂದು ಅಧ್ಯಕ್ಷ ಸಂಜೀವ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಎರಡೂ ಉಪಚುನಾವಣೆಯಲ್ಲಿ ಜೆಡಿಎಸ್ ಲೆಕ್ಕಕ್ಕೆ ಇಲ್ಲ: ಜಮೀರ್
2019 ರಲ್ಲಿ ಮೋದಿ ಸರ್ಕಾರವು ಅಹಮದಾಬಾದ್, ಜೈಪುರ, ಲಕ್ನೋ, ತಿರುವನಂತಪುರಂ, ಮಂಗಳೂರು ಮತ್ತು ಗುವಾಹಟಿಯನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಖಾಸಗೀಕರಣಗೊಳಿಸಿತ್ತು. ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಈ ಬಿಡ್ ಗೆದ್ದುಕೊಂಡಿತ್ತು.
ಕೊರೊನಾ ಕಾರಣದಿಂದಾಗಿ ಏರ್ ಪೋರ್ಟ್ ಅಥಾರಟಿ ಆಫ್ ಇಂಡಿಯಾದ ಆದಾಯ ಭಾರೀ ಕುಸಿತ ಕಂಡಿತ್ತು. 2021ರ ಆರ್ಥಿಕ ವರ್ಷದಲ್ಲಿ 1962 ಕೋಟಿ ನಷ್ಟ ಅನುಭವಿಸಿತು. ಎಎಐ ನಿರ್ವಹಣೆ ಮತ್ತು ಸಿಬ್ಬಂದಿ ಸಂಬಳಕ್ಕಾಗಿ ಎಸ್‍ಬಿಐ ಬ್ಯಾಂಕಿನಿಂದ 1500 ಕೋಟಿ ಸಾಲ ಪಡೆದಿತ್ತು. 2024ರ ವೇಳೆಗೆ ವಿಮಾನ ನಿಲ್ದಾಣಗಳಿಂದ 3,660 ಕೋಟಿ ರೂಪಾಯಿಗಳ ಖಾಸಗಿ ಹೂಡಿಕೆಯನ್ನು ತರುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.