LatestNational

ಪಾಕ್ ದಾಳಿಗೆ ಸಾಕ್ಷಿ ಬಿಡುಗಡೆ, ಯಾವುದೇ ದಾಳಿ ಎದುರಿಸಲು ಭಾರತ ಸಿದ್ಧ

ನವದೆಹಲಿ: ಪಾಕಿಸ್ತಾನ ದಾಳಿ ನಡೆಸಿದ ವೇಳೆ ಭಾರತ ವಾಯುಪಡೆ ಹೊಡೆದುರುಳಿಸಿದ್ದ ಪಾಕ್ ಎಫ್-16 ವಿಮಾನದ ಆಮ್ರಾಮ್ ಕ್ಷಿಪಣಿಯ ಅವಶೇಷಗಳನ್ನು ಸೇನೆ ಸಾಕ್ಷಿಯಾಗಿ ನೀಡಿದೆ.

ವಾಯುಪಡೆ, ಭೂ ಸೇನೆ, ನೌಕಾಪಡೆ ಸೇನಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಪಾಕಿಸ್ತಾನ ದಾಳಿಯ ಬಗ್ಗೆ ಮಾಹಿತಿ ನೀಡಿದರ. ಏರ್ ವೈಸ್ ಮಾರ್ಷಲ್ ಆ.ಜಿ.ಕೆ ಕಪೂರ್ ಮಾತನಾಡಿ, ಫೆ.27 ರ ಬೆಳಗ್ಗೆ ಪಾಕಿಸ್ತಾನದ ಜೆಟ್‍ಗಳು ಭಾರತದ ಗಡಿಯನ್ನು ಪ್ರವೇಶ ಮಾಡಿತ್ತು. ಮಿಲಿಟರಿ ನೆಲೆ ಮೇಲೆ ದಾಳಿ ನಡೆಸಲು ಬರುತ್ತಿದೆ ಎನ್ನುವ ಬಗ್ಗೆ ರೇಡಾರ್ ಗಳಿಂದ ಸೂಚನೆ ಬಂದಿತ್ತು. ಪ್ರತಿಯಾಗಿ ವಿಮಾನ ಗಡಿ ದಾಟಿ ಬಂದ ವೇಳೆ ನಮ್ಮ ನೆಲದಲ್ಲಿ ಆಮ್ರಾಮ್ ಕ್ಷಿಪಣಿ ದಾಳಿ ನಡೆಸಿದ್ದು, ಇದರಿಂದ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದರು.

ಪಾಕ್ ದಾಳಿಗೆ ಸಾಕ್ಷಿ ಬಿಡುಗಡೆ, ಯಾವುದೇ ದಾಳಿ ಎದುರಿಸಲು ಭಾರತ ಸಿದ್ಧ

ದಾಳಿಯ ವೇಳೆ ನಾವು ಕೂಡ ಪ್ರತಿ ದಾಳಿ ನಡೆಸಿದ್ದು, ಪರಿಣಾಮ ಪಾಕಿಸ್ತಾನದ ಎಫ್-16 ಜೆಟ್ ಪಾಕ್ ಆಕ್ರಮಿತ ಗಡಿಯಲ್ಲಿ ಉರುಳಿ ಬಿದ್ದಿದೆ. ಈ ವೇಳೆ ಭಾರತ ಮಿಗ್ ಜೆಟ್ ಪೈಲಟ್ ಅಭಿನಂದನ್ ಪಾಕಿಸ್ತಾನದ ಗಡಿಯಾಚೆ ಬಿದ್ದ ಪರಿಣಾಮ ಅವರನ್ನು ಪಾಕ್ ಸೇನೆ ವಶಕ್ಕೆ ಪಡೆದಿದೆ. ಪೈಲಟ್ ಪಾಕಿಸ್ತಾನದ ಬಂಧನದಲ್ಲಿದ್ದಾರೆ. ಜಿನೀವಾ ಒಪ್ಪಂದದ ಪ್ರಕಾರ ಅವರನ್ನು ಹಿಂದಿರುಗಿಸುತ್ತಿರುವುದು ನಮಗೆ ಸಂತಸ ತಂದಿದೆ. ಇದನ್ನು ನಾವು ಜಿನೀವಾ ಒಪ್ಪಂದ ಅನ್ವಯದಂತೆ ಮಾತ್ರ ನೋಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನದಿಂದ ಇಂತಹ ಯಾವುದೇ ದಾಳಿ ನಡೆಸಿದರೂ ಕೂಡ ನಾವು ಪ್ರತ್ಯುತ್ತರ ನೀಡಲು ಸಿದ್ಧರಾಗಿದ್ದೇವೆ ಎಂದು ನೌಕದಳದ ಆಡ್ಮಿರಲ್ ಟಿಎಸ್ ಗುಜ್ರಾಲ್ ಎಚ್ಚರಿಕೆ ರವಾನಿಸಿದರು.

ಪಾಕಿಸ್ತಾನ ಭಾರತ ಮೇಲೆ ದಾಳಿ ನಡೆಸಿದೆ ಎಂಬುವುದಕ್ಕೆ ಹಾಗೂ ನಾವು ಪಾಕ್ ಜೆಟ್ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂಬುವುದಕ್ಕೆ ಸಾಕ್ಷಿ ಇದೆ. ಅದನ್ನು ಮಾಧ್ಯಮಗಳ ಮುಂದೇ ಪ್ರದರ್ಶಿಸುತ್ತಿದ್ದೇವೆ ಎಂದು ಏರ್ ವೈಸ್ ಮಾರ್ಷಲ್ ಆ.ಜಿ.ಕೆ ಕಪೂರ್ ವಿವರಿಸಿದರು. ಅಲ್ಲದೇ ಪಾಕಿಸ್ತಾನ ಜೈಶ್ ಎ ಮೊಹಮದ್ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ ವೇಳೆ ಉಂಟಾದ ಹಾನಿಯ ಕುರಿತ ಪ್ರಶ್ನೆಗೆ ಉತ್ತರಿಸಿ, ಕ್ಯಾಪ್ ಮೇಲೆ ದಾಳಿ ನಡೆಸಿದ ಪರಿಣಾಮ ಅಲ್ಲಿ ಎಷ್ಟು ಹಾನಿಯಾಗಿದೆ ಎಂದು ಈಗಲೇ ನಿರ್ಧಾರ ಮಾಡುವುದು ಕಷ್ಟಸಾಧ್ಯವಾಗುತ್ತದೆ. ಆದರೆ ನಾವು ಗುರಿ ಇಟ್ಟು ದಾಳಿ ನಡೆಸಿದ ಕ್ಯಾಪ್‍ಗಳು ಧ್ವಂಸ ಆಗಿರುವುದು ಖಚಿತ ಎಂದು ಸ್ಪಷ್ಟಪಡಿಸಿದರು.

ಭೂ ಸೇನೆಯ ಜನರಲ್ ಸುರೇಂದ್ರ ಸಿಂಗ್ ಮಹಾಲ್ ಮಾತನಾಡಿ ಪಾಕಿಸ್ತಾನ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸುವವರೆಗೂ ನಾವು ಉಗ್ರರ ನೆಲೆಗಳನ್ನು ಟಾರ್ಗೆಟ್ ಮಾಡಿ ಧ್ವಂಸ ಮಾಡುತ್ತಲೇ ಇರುತ್ತೇವೆ. ಅಷ್ಟೇ ಅಲ್ಲದೇ ಯಾವುದೇ ದಾಳಿಗೆ ಪ್ರತಿ ದಾಳಿ ನಡೆಸಲು ನಮ್ಮ ಸೇನೆ ಸನ್ನದ್ದವಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನೌಕಾ ದಳದ ರೀರ್ ಅಡ್ಮಿರಲ್ ಡಿಎಸ್ ಗುಜ್ರಾಲ್, ಏರ್ ವೈಸ್ ಮಾರ್ಷಲ್ ಆ.ಜಿ.ಕೆ ಕಪೂರ್, ಭೂ ಸೇನೆಯ ಸುರೇಂದರ್ ಸಿಂಗ್ ಮಹಾಲ್ ಹಾಜರಿದ್ದು ಮಾಹಿತಿ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *

Back to top button