ರಾಯಚೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಶಾಸಕ ಎನ್.ಎಸ್.ಬೋಸರಾಜು ಫೌಂಡೇಶನ್ ಮತ್ತೆ ವಿವಾದಕ್ಕೆ ಒಳಗಾಗಿದೆ. ರಾಯಚೂರಿನ ವಾಲ್‍ಕಾಟ್ ಮೈದಾನದಲ್ಲಿ ವಿಜಯ ದಶಮಿ ದಿನ ರಾವಣಾಸುರ ದಹನಕ್ಕೆ ಮುಂದಾಗಿರುವ ಎನ್.ಎಸ್.ಬೋಸರಾಜು ಫೌಂಡೇಶನ್ ಕಾರ್ಯಕ್ಕೆ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ದಲಿತರ, ಹಿಂದುಳಿದವರ ಪಾಲಿಗೆ ದೇವರಾಗಿರುವ ರಾವಣನನ್ನ ದಹನ ಮಾಡುವುದು ತಪ್ಪು ಅಂತ ಆಕ್ರೋಶ ವ್ಯಕ್ತಪಡಿಸಿವೆ. ಒಂದು ಕಡೆ ರಾಜ್ಯ ಕಾಂಗ್ರೆಸ್ ಸರ್ಕಾರ ಮೌಢ್ಯ ನಿಷೇಧ ಕಾಯಿದೆ ಜಾರಿಗೆ ಮುಂದಾಗಿರುವ ಹೊತ್ತಲ್ಲಿ ರಾವಣ ದಹನ ಮಾಡುವುದು ಸರಿಯಲ್ಲ. ಜನಾಂಗಗಳ ನಡುವೆ ದ್ವೇಷ ಹೆಚ್ಚಿಸಿ ರಾಜಕೀಯ ಲಾಭ ಪಡೆಯಲು ಬೋಸರಾಜು ಮುಂದಾಗಿದ್ದಾರೆ ಅಂತ ಹೋರಾಟಗಾರರು ಪ್ರತಿಭಟನೆ ಕೈಕೊಂಡಿದ್ದಾರೆ.
ಈ ಹಿಂದೆ ಬಕ್ರೀದ್ ವೇಳೆ ಮುಸ್ಲಿಂ ಬಾಂಧವರಿಗೆ ಚಿಕನ್, ಅಕ್ಕಿ, ಬೇಳೆ ಕೊಟ್ಟು ಬೋಸರಾಜು ಫೌಂಡೇಷನ್ ಮುಸ್ಲಿಂ ಬಾಂಧವರಿಂದಲೇ ಛೀಮಾರಿ ಹಾಕಿಸಿಕೊಂಡಿತ್ತು.