ಬೆಂಗಳೂರು : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(SSLC ಬೋರ್ಡ್) ಹೊಸ ವಿವಾದಕ್ಕೆ ಸಿಲುಕಿಕೊಂಡಿದೆ. ಇಷ್ಟು ದಿನ ಮಂಡಳಿಯೇ ನಡೆಸುತ್ತಿದ್ದ ಪೂರ್ವ ಸಿದ್ಧತಾ ಪರೀಕ್ಷೆ ಜವಾಬ್ದಾರಿಯನ್ನ ಕೈ ಬಿಟ್ಟಿದ್ದು, ಹೊಸದಾಗಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಪ್ರಾಂಶುಪಾಲರ ಸಂಘಕ್ಕೆ ಪರೀಕ್ಷೆಯ ಜವಾಬ್ದಾರಿಯನ್ನ ವಹಿಸಿ ವಿವಾದಕ್ಕೆ ಕಾರಣವಾಗಿದೆ.
Advertisement
ಇಷ್ಟು ದಿನ ಎಸ್.ಎಸ್.ಎಲ್.ಸಿ ಬೋರ್ಡ್ ಪ್ರತಿ ವರ್ಷ ಜನವರಿ- ಫೆಬ್ರವರಿಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸುತ್ತಿತ್ತು. ಪ್ರಶ್ನೆ ಪತ್ರಿಕೆ ತಯಾರಿಯಿಂದ ಹಿಡಿದು ಎಲ್ಲಾ ಪರೀಕ್ಷಾ ವ್ಯವಸ್ಥೆಯನ್ನು ಬೋರ್ಡ್ ನೋಡಿಕೊಳ್ಳುತ್ತಿತ್ತು. ಆದ್ರೆ ಈ ಬಾರಿ ಎರಡು ಪೂರ್ವ ಸಿದ್ಧತಾ ಪರೀಕ್ಷೆ ಮಾಡಲು ಇಲಾಖೆ ಮುಂದಾಗಿದೆ. 2ನೇ ಪೂರ್ವ ಸಿದ್ಧತಾ ಪರೀಕ್ಷೆಯನ್ನ ಪ್ರೌಢಶಾಲಾ ಪ್ರಾಂಶುಪಾಲರ ಸಂಘ ನಡೆಸಲು ಅನುಮತಿ ನೀಡಿದೆ. ಇಲಾಖೆಯ ಈ ಕ್ರಮಕ್ಕೆ ಇಲಾಖಾ ಮಟ್ಟದಲ್ಲಿ ವಿರೋಧಗಳು ಕೇಳಿ ಬರ್ತಿದೆ.
Advertisement
Advertisement
ಬೋರ್ಡ್ ಪರೀಕ್ಷೆ ನಡೆಸೋದ್ರೀಂದ ಉತ್ತಮವಾಗಿ ಪರೀಕ್ಷೆಗಳು ನಡೆಯುತ್ತವೆ. ಪ್ರಶ್ನೆಪತ್ರಿಕೆ ಲೀಕ್, ಪರೀಕ್ಷಾ ಅಕ್ರಮ ಇದ್ಯಾವುದು ಆಗೋದಿಲ್ಲ. ಆದ್ರೆ ಪ್ರಾಂಶುಪಾಲರ ಸಂಘ ಪರೀಕ್ಷೆ ನಡೆಸೊದರಿಂದ ಅಕ್ರಮ ನಡೆಯೋ ಸಾಧ್ಯತೆ ಇದೆ. ಪ್ರಶ್ನೆ ಪತ್ರಿಕೆ ಸಂಘವೇ ತಯಾರು ಮಾಡೊದರಿಂದ ಅಕ್ರಮ ನಡೆಯೋ ಸಾಧ್ಯತೆ ಇದೆ. ಅಲ್ಲದೆ ಸರಿಯಾದ ವ್ಯವಸ್ಥೆಯಲ್ಲಿ ಪರೀಕ್ಷೆ ನಡೆಯುತ್ತಾ ಅನ್ನೋ ಪ್ರಶ್ನೆ ಕೂಡಾ ಉದ್ಭವವಾಗಿದೆ. ಹೀಗಿರುವಾಗ ಎಸ್‍ಎಸ್‍ಎಲ್‍ಸಿ ಬೋರ್ಡ್ ಪರೀಕ್ಷೆ ಜವಾಬ್ದಾರಿಯನ್ನ ಯಾಕೆ ಪ್ರಾಂಶುಪಾಲರ ಸಂಘಕ್ಕೆ ಕೊಡ್ತು ಅನ್ನೋದು ಯಕ್ಷ ಪ್ರಶ್ನೆಯಾಗಿದೆ.