-ಮಹಿಳೆಯರಿಗೆ ನಿತ್ಯ ಕಿರುಕುಳ, ಸಂಚಾರಕ್ಕೆ ಹಿಂದೇಟು
-5 ಸಾವಿರ ಬಸ್‍ಗಳಿಗೆ ಸಿಸಿಟಿವಿ ಅಳವಡಿಸಲು ಸಜ್ಜು
-5 ಸಾವಿರ ಬಸ್‍ಗಳಿಗೆ ಸಿಸಿಟಿವಿ ಅಳವಡಿಸಲು ಸಜ್ಜು
ಬೆಂಗಳೂರು: ಬಿಎಂಟಿಸಿಯಲ್ಲಿ ಪ್ರಯಾಣಿಕರ ಸುರಕ್ಷತೆ, ಭದ್ರತೆಗೆ ಅಂತ ಇರಬೇಕಾದ ಸಿಸಿ ಕ್ಯಾಮರಾಗಳೇ ಬಸ್‍ಗಳಲ್ಲಿ ಇಲ್ಲ. ಇದರಿಂದ ನಿತ್ಯ ಮಹಿಳೆಯರು ಬಸ್‍ಗಳಲ್ಲಿ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಮಾತ್ರವಲ್ಲ, ಪರ್ಸ್, ಮೊಬೈಲ್, ಹಣ ಇತರೆ ವಸ್ತುಗಳು ಕಳುವಾಗುತ್ತಿವೆ. ಪ್ರಯಾಣಿಕರ ಸೋಗಿನಲ್ಲಿ, ಬೆಲೆ ಬಾಳುವ ವಸ್ತುಗಳನ್ನ ಕಳ್ಳರು ದೋಚುತ್ತಿದ್ದಾರೆ.
Advertisement
ಹೌದು, ಬಿಎಂಟಿಸಿ ಬಸ್‍ಗಳಲ್ಲಿ ಮಹಿಳೆಯರು ನಿತ್ಯ ಕಿರುಕುಳವನ್ನ ಅನುಭವಿಸುತ್ತಿದ್ದಾರೆ. ಸೀಟ್ ವಿಚಾರವಾಗಿ ಗಲಾಟೆಗಳು ಹಾಗೂ ಬಸ್ ರಶ್ ಇದ್ದಾಗ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವಂತಹ ಘಟನೆಗಳು ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೇ ಸಿಸಿಕ್ಯಾಮೆರಾ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡಿರೋ ಕಳ್ಳರು ಬಸ್‍ನಲ್ಲಿ ತಮ್ಮ ಕೈಚಳವನ್ನು ತೋರಿಸುತ್ತಿದ್ದಾರೆ. ಇದರಿಂದ ಹೆದರಿರುವ ಪ್ರಯಾಣಿಕರು, ಬಿಎಂಟಿಸಿಯಲ್ಲಿ ಸಂಚಾರ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಬಸ್‍ಗಳಲ್ಲಿ ಮೊಬೈಲ್ ಕಳೆದುಕೊಂಡ ಸಂತ್ರಸ್ಥರು ತ್ವರಿತಗತಿಯಲ್ಲಿ ಸಿಸಿಟಿವಿ ಅಳವಡಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಕಸದ ವಾಹನಗಳ ಮೇಲೆ BBMP ನಾಮಫಲಕ ಹಾಕುವಂತಿಲ್ಲ – ಹೆಸರು ಹಾಕಿದ ವಾಹನಗಳ ಮೇಲೆ ಕ್ರಿಮಿನಲ್ ಕೇಸ್
Advertisement
Advertisement
ಸದ್ಯ ಪ್ರಯಾಣಿಕರ ಸುರಕ್ಷತೆಗೆ ಬಿಎಂಟಿಸಿ ಮುಂದಾಗಿದೆ. ನಾಲ್ಕು ವರ್ಷಕ್ಕೆ ಮೊಬೈಲ್ ಆಪ್ ವಿತ್ ವುಮೆನ್ ಸೇಫ್ಟಿ ಫೀಚರ್ ಅಂಡ್ ಸರ್ವೆಲೆನ್ಸ್ ಯೋಜನೆಯಡಿ, 5 ಸಾವಿರ ಬಸ್‍ಗಳಿಗೆ ಸಿಸಿಟಿವಿ ಅಳವಡಿಸಲು 37 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಇದು ನವೆಂಬರ್ ತಿಂಗಳೊಳಗೆ ಕಾರ್ಯರೂಪಕ್ಕೆ ಬರಲಿದೆ. ಒಟ್ಟಾರೆ ಬೆಂಗಳೂರಿನಲ್ಲಿ ಆರೂವರೆ ಸಾವಿರ ಬಸ್‍ಗಳು, ನಗರದ ಹಲವು ಮಾರ್ಗಗಳಿಗೆ ಸಂಚರಿಸುತ್ತಿವೆ. ಈಗಾಗಲೇ ಹೊಸ ಬಸ್‍ಗಳಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿದ್ದು ಕೆಲವು ಕಾರ್ಯನಿರ್ವಹಿಸುತ್ತಿದ್ದರೆ, ಇನ್ನೂ ಕೆಲವು ಪ್ರದರ್ಶನಕ್ಕಿಟ್ಟಂತಿದೆ. ಇದನ್ನೂ ಓದಿ: ಅಗ್ನಿಪಥ್ ಪ್ರತಿಭಟನೆಗಳಿಂದ ರೈಲ್ವೇ ಇಲಾಖೆಗೆ 259 ಕೋಟಿ ಲಾಸ್
Advertisement
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]