ಬೆಂಗಳೂರು: ನಾಳೆ ದೇಶದೆಲ್ಲೆಡೆ ಸ್ವಾತಂತ್ರ್ಯ ದಿನದ ಸಂಭ್ರಮ. ಇತ್ತ ಚಾಮರಾಜಪೇಟೆ ಈದ್ಗಾ ಮೈದಾನದಲ್ಲೂ ನಾಳೆಯ ಸ್ವಾತಂತ್ರ್ಯ ದಿನಾಚರಣೆಗೆ ಸಾರ್ವಜನಿಕರಿಗೆ ಪಾಸ್ ಕೊಡುವ ಚಿಂತನೆ ನಡೆಯುತ್ತಿದೆ.
ವಂದೇ ಮಾತರಂ ಮತ್ತು ಭಾರತ್ ಮಾತಾಕಿ ಜೈ ಅಂತ ಎರಡೇ ಘೋಷಣೆ ಕೂಗಬೇಕು. ಅದನ್ನು ಹೊರತುಪಡಿಸಿ ಪಕ್ಷ, ಸಂಘಟನೆ ಬೇರೆ ಯಾವುದೇ ರೀತಿಯ ಘೋಷಣೆಗಳನ್ನ ಮೈದಾನದ ಬಳಿ ಕೂಗುವಂತಿಲ್ಲ. ಮಕ್ಕಳನ್ನ ಹೊರತುಪಡಿಸಿ ಸಾರ್ವಜನಿಕರಿಗೆ ಪ್ರತ್ಯೇಕ ಗೇಟ್ ಮೂಲಕ ಎಂಟ್ರಿ ಇರಲಿದೆ. ಕಂದಾಯ ಇಲಾಖೆ ಅಧಿಕಾರಿಗಳು ಈಗಾಗಲೇ ಧ್ವಜಾರೋಹಣ ಸ್ಥಂಭದ ಮಾರ್ಕ್ ಮಾಡಿದ್ದಾರೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಇನ್ಮುಂದೆ ಒಬ್ಬ ಶಾಸಕನಿಗೆ ಒಂದೇ ಬಾರಿ ಪಿಂಚಣಿ – 100 ಕೋಟಿ ಉಳಿತಾಯಕ್ಕೆ ಸಿಎಂ ಪ್ಲ್ಯಾನ್
ಮಧ್ಯಾಹ್ನದ ವೇಳೆಗೆ ಮೈದಾನದಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ಮಧ್ಯಾಹ್ನ ಸಮಯಕ್ಕೆ ಆರ್ ಎಎಫ್ ಪಡೆಯಿಂದ ಚಾಮರಾಜಪೇಟೆಯಲ್ಲಿ ಪರೇಡ್ ನಡೆಯಲಿದೆ. ಇದೇ ಮೊದಲ ಬಾರಿಗೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಹಿನ್ನೆ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಲು ಕಂದಾಯ ಇಲಾಖೆ ಸಿದ್ಧತೆ ನಡೆಸುತ್ತಿದೆ. ಮಾಣಿಕ್ ಷಾ ಮೈದಾನದಲ್ಲಿ ಸಿಎಂ ಧ್ವಜಾರೋಹಣ ಮಾಡುವ ಸಮಯಕ್ಕೆ ಈದ್ಗಾದಲ್ಲಿಯೂ ಧ್ವಜರೋಹಣ ನಡೆಯಲಿದೆ.
ಗಣ್ಯರಿಗೆ ವೇದಿಕೆ ಮಾಡಲಿದ್ದು, ಕುರ್ಚಿ ವ್ಯವಸ್ಥೆಯನ್ನ ಸಹ ಮಾಡಲಿದ್ದಾರೆ. ಒಟ್ಟಿನಲ್ಲಿ ನಾಳೆಮೈದಾನವಿಡೀ ಖಾಕಿ ಸರ್ಪಗಾವಲಿನಲ್ಲಿರಲಿದೆ.