ಕಾಲ್ತುಳಿತ ತನಿಖೆಗೆ ಇನ್ನೊಂದು ವಾರ ಗಡುವು ಕೇಳಲು ಚಿಂತನೆ – ಸಿಸಿಟಿವಿ ಫೂಟೇಜ್ ನೀಡುವಂತೆ ಡಿಸಿ ಪತ್ರ

Public TV
1 Min Read
Chinnaswamy Stadium Stampede

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ (Chinnaswamy Stampede) ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ ತನಿಖೆ ಚುರುಕು ಗೊಳಿಸಿದ ಜಿಲ್ಲಾಧಿಕಾರಿ ಜಗದೀಶ್ ಟೆಕ್ನಿಕಲ್ ಎವಿಡೆನ್ಸ್ ಮೇಲೆ ಕಣ್ಣಿಟ್ಟಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಸಂಪೂರ್ಣ ಸಿಸಿಟಿವಿ (CCTV) ದೃಶ್ಯಾವಳಿ ನೀಡುವಂತೆ ಪತ್ರ ಬರೆದಿದ್ದು, ಸ್ಟೇಡಿಯಂ ಹೊರ ಭಾಗ, ಒಳಭಾಗದ ಫೂಟೇಜ್ ಒದಗಿಸಲು ಸೂಚನೆ ನೀಡಲಾಗಿದೆ. ಆದರೆ ಎಲ್ಲಾ ಸಿಸಿಟಿವಿ ವೀಡಿಯೋ ಸಿಐಡಿ ವಶಕ್ಕೆ ಪಡೆದುಕೊಂಡಿದ್ದು, ಸಿಸಿಟಿವಿ ಬಗ್ಗೆ ಸಿಐಡಿ ಜೊತೆಗೂ ಡಿಸಿ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡ | ಅರಬ್ಬಿ ಸಮುದ್ರದಲ್ಲಿ ಭಾರೀ ಅಲೆ ಸಾಧ್ಯತೆ – ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಚಿನ್ನಸ್ವಾಮಿ ಮುಂಭಾಗ ರಸ್ತೆಯಲ್ಲಿದ್ದ ಬಹುತೇಕ ಸುಮಾರು 30ಕ್ಕು ಹೆಚ್ಚು ಫೂಟೇಜ್‌ಗಳನ್ನು ಪಡೆದು ದೃಶ್ಯಾವಳಿ ಪರಿಶೀಲನೆ ನಡೆಸಿ ಘಟನೆ ಕುರಿತು ವಿಶ್ಲೇಷಣೆ ನಡೆಸಲಾಗುತ್ತಿದೆ. ಭದ್ರತಾ ವ್ಯವಸ್ಥೆ, ಪೊಲೀಸರ ನಿಯೋಜನೆ, ಪೊಲೀಸ್ ಸಿಬ್ಬಂದಿ ಸಂಖ್ಯೆ, ಜನರ ಕ್ರೌಡ್ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಇದೇ ವೇಳೆ ಕಾಲ್ತುಳಿತ ಸಂಬಂಧ 70ಕ್ಕೂ ಹೆಚ್ಚು ಮಂದಿಯಿಂದ ಕಾಲ್ತುಳಿತ, ನೂಕು ನುಗ್ಗಲು ಬಗ್ಗೆ ಹೇಳಿಕೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: 6 ಲಕ್ಷ ಹಣ ನೀಡುವಂತೆ ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್‌ಗೆ ಬೆದರಿಕೆ – ಎನ್‌ಸಿಆರ್ ದಾಖಲು

ಮೃತರ ಕುಟುಂಬದವರು, ಗಾಯಾಳುಗಳು, ಪ್ರತ್ಯಕ್ಷದರ್ಶಿಗಳು, ಕೆಎಸ್‌ಸಿಎ, ಆರ್‌ಸಿಬಿ, ಡಿಎನ್‌ಎ, ಬಿಬಿಎಂಪಿ, ಪೊಲೀಸ್ ಅಧಿಕಾರಿಗಳ ಸುಮಾರು 70 ಮಂದಿಯ ಹೇಳಿಕೆ ಪಡೆದು ಕಾಲ್ತುಳಿತ ಸಂಬಂಧ ಸವಿವರವಾಗಿ ವರದಿ ತಯಾರಿ ಮಾಡಲಾಗುತ್ತಿದೆ. ಸದ್ಯ ಇನ್ನೂ ಕೆಲವರ ಹೇಳಿಕೆ ಬಾಕಿ ಹಿನ್ನೆಲೆ ಒಂದು ವಾರ ಅವಧಿ ವಿಸ್ತರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲು ಚಿಂತನೆ ನಡೆಸಲಾಗಿದೆ. ಇದನ್ನೂ ಓದಿ: ಬಿಸಿಯೂಟ ತಯಾರಕರಿಗೆ ಮಾಸಿಕ ಗೌರವ ಸಂಭಾವನೆ 1,000 ರೂ. ಹೆಚ್ಚಳ

Share This Article