ನವದೆಹಲಿ: ಪೆಟ್ರೋಲ್, ಡೀಸೆಲ್ ಕೊರತೆ ವದಂತಿ ಬೆನ್ನಲ್ಲೇ ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ ಜನತೆಗೆ ಮತ್ತೆ ಶಾಕ್ ಕೊಟ್ಟಿದೆ. ಕಳೆದ 15 ದಿನಗಳಲ್ಲಿ ಮೂರು ಬಾರಿ ದರ ಏರಿಕೆ ಮಾಡಿದ್ದ ಶೆಲ್ ಇದೀಗ ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದೆ. ಈ ಬೆನ್ನಲ್ಲೇ ಪ್ರೀಮಿಯಂ ಪೆಟ್ರೋಲ್ (Premium Petrol) ಮತ್ತು ಜೆಟ್ ಇಂಧನಗಳ ಬೆಲೆಯೂ ಹಿಂದೆಂದಿಗಿಂತಲೂ ಹೆಚ್ಚು ಏರಿಕೆ ಕಂಡಿದೆ.
ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್ನಿಂದಾಗಿ ವಿಮಾನ ಇಂಧನ ಬೆಲೆ ದುಪ್ಪಟ್ಟಾಗಿದೆ (Jet Fuel Price Hike). ಜೆಟ್ ಇಂಧನ ಪ್ರತಿ ಕಿಲೋಲೀಟರ್ 2,07,341.22 ರೂ.ಗೆ ಏರಿಕೆಯಾಗಿದೆ. 1 ತಿಂಗಳ ಹಿಂದೆ ಪ್ರತಿ ಕಿಲೋಲೀಟರ್ ಬೆಲೆ 96,638.14 ರೂ. ಇತ್ತು. ಇದನ್ನೂ ಓದಿ: ಮುಂದಿನ 2-3 ವಾರಗಳಲ್ಲಿ ಇರಾನ್ ವಿರುದ್ಧದ ಯುದ್ಧ ಅಂತ್ಯ: ಡೊನಾಲ್ಡ್ ಟ್ರಂಪ್

ದೆಹಲಿಯಲ್ಲಿ ಇಂಡಿಯನ್ ಆಯಿಲ್ XP100 ಪೆಟ್ರೋಲ್ (ಪ್ರೀಮಿಯಂ ರೂಪಾಂತರ) ಮತ್ತು ಎಕ್ಸ್ಟ್ರಾ ಗ್ರೀನ್ (ಪ್ರೀಮಿಯಂ ಡೀಸೆಲ್) ಬೆಲೆಗಳನ್ನು ಹೆಚ್ಚಿಸಿದೆ. XP100 ಪೆಟ್ರೋಲ್ ಬೆಲೆಯನ್ನು 149 ರೂ. ನಿಂದ 160 ರೂ.ಗಳಿಗೆ ಹೆಚ್ಚಿಸಲಾಗಿದೆ. XP100 ಭಾರತದ ಮೊದಲ 100-ಆಕ್ಟೇನ್ ಪ್ರೀಮಿಯಂ ಪೆಟ್ರೋಲ್ ಆಗಿದೆ. ಐಷಾರಾಮಿ ಕಾರುಗಳು ಮತ್ತು ಸೂಪರ್ ಬೈಕ್ಗಳಿಗೆ ವಿನ್ಯಾಸಗೊಳಿಸಲಾದ ಪೆಟ್ರೋಲ್ ಇದಾಗಿದ್ದು, ಉತ್ತಮ ಎಂಜಿನ್ ಕಾರ್ಯಕ್ಷಮತೆ ಹೊಂದಿದೆ. ಅದೇ ರೀತಿ, ಎಕ್ಸ್ಟ್ರಾ ಗ್ರೀನ್ (ಪ್ರೀಮಿಯಂ ಡೀಸೆಲ್) ಅನ್ನು 91.49 ರೂ. ನಿಂದ 92.99 ರೂ.ಗಳಿಗೆ ಗೆಚ್ಚಿಸಲಾಗಿದೆ.
ಪ್ರೀಮಿಯಂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೆಚ್ಚಳಕ್ಕೆ (Petrol Diesel Prices Hike) ಇಂಡಿಯನ್ ಆಯಿಲ್ ನಿರ್ದಿಷ್ಟ ಕಾರಣ ತಿಳಿಸದಿದ್ದರೂ, ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದ ಉಂಟಾಗುತ್ತಿರುವ ತೈಲ ಕೊರತೆಯೇ ಕಾರಣ ಎಂದು ನಂಬಲಾಗಿದೆ. ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಿಸುವ ಯೋಜನೆಗೆ ಇರಾನ್ ಒಪ್ಪಿಗೆ – ಅಮೆರಿಕ, ಇಸ್ರೇಲ್ ಹಡಗುಗಳಿಗೆ ನಿಷೇಧ
ಜೆಟ್ ಇಂಧನ ಬೆಲೆ 2.07 ಲಕ್ಷ ರೂ.ಗಳಿಗೆ ಏರಿಕೆ
ಕಚ್ಚಾ ತೈಲ ಬೆಲೆ ಏರಿಕೆ ಬೆನ್ನಲ್ಲೇ ಜೆಟ್ ಇಂಧನ ಬೆಲೆಯನ್ನ ಏಕಾಏಕಿ 2 ಪಟ್ಟು ಹೆಚ್ಚಿಸಲಾಗಿದೆ. 96,638.14 ರೂ. ನಷ್ಟಿದ್ದ ಇಂಧನ ಬೆಲೆಯನ್ನು ದೆಹಲಿಯಲ್ಲಿ ಎಟಿಎಫ್ 2,07,341.22 ರೂ.ಗಳಿಗೆ ಹೆಚ್ಚಿಸಿದೆ. ಇದಕ್ಕೂ ಮುನ್ನ ಮಾರ್ಚ್ 1 ರಂದು ಇಂಧನ ಬೆಲೆಯನ್ನ ಶೇ.5.7 ರಷ್ಟು ಅಂದ್ರೆ 5,244.75 ರೂ. ನಷ್ಟು ಹೆಚ್ಚಿಸಲಾಗಿತ್ತು. ಇದೀಗ ತೈಲಬಿಕ್ಕಟ್ಟು ಎದುರಾಗುತ್ತಿರುವ ಹೊತ್ತಿನಲ್ಲೇ ಎರಡು ಪಟ್ಟು ಹೆಚ್ಚಿಸಲಾಗಿದೆ. ಇನ್ನೂ ದೇಶೀಯ ಎಟಿಎಫ್ ಬೆಲೆಯನ್ನ ಶೇ.8.6 ರಷ್ಟು ಹೆಚ್ಚಿಸಿದ್ದು, ಪ್ರತಿ ಕಿಲೋಲೀಟರ್ 1.04 ಲಕ್ಷ ರೂ.ಗಳಿಗೆ ತಲುಪಿದೆ.

