ಬಿ.ಸಿದ್ದಲಿಂಗಯ್ಯ ಅವರು ನಿರ್ಮಿಸುತ್ತಿರುವ ಹಾಗೂ ಎಸ್.ಪ್ರದೀಪ್ ವರ್ಮ (S Pradeep Varma) ಅವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕಾಗಿ ನಿಖಿಲ್ ರಾಜ್ ಶೆಟ್ಟಿ ಬರೆದಿರುವ, ಚೇತನ್ ಗಂಧರ್ವ ಹಾಡಿರುವ ಹಾಗೂ ಪ್ರದೀಪ್ ವರ್ಮ ಸಂಗೀತ ನೀಡಿರುವ “ಮನಸ್ಸು ಏನೋ ಕಾಡಿದೆ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸುಮಧುರ ಗೀತೆಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಗುರುಗಳಾದ ಚಿಂತಲಪಲ್ಲಿ ಶ್ರೀನಿವಾಸ ಹಾಡು ಬಿಡುಗಡೆ ಮಾಡಿ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ (Film Team) ಸದಸ್ಯರು ಮಾತನಾಡಿದರು.

ನಟನೆ ಬಗ್ಗೆ ಆಸಕ್ತಿಯುಳ್ಳ ಅದ್ವಿಕ್ ಈ ಚಿತ್ರದ ಮೂಲಕ ನಾಯಕನಾಗಿ ಚಂದನವನಕ್ಕೆ ಅಡಿ ಇಡುತ್ತಿದ್ದಾರೆ. ಅವರ ತಂದೆ ಸಿದ್ದಲಿಂಗಯ್ಯ ಅವರೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ತಾಯಿ ಅಕ್ಕಮಹಾದೇವಿ ಅವರು ಕಥೆ ಬರೆದಿದ್ದಾರೆ. ಮಗನ ಆಸೆಗೆ ಅಪ್ಪ – ಅಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ. ಅಕ್ಕಮಹಾದೇವಿಯ ಅವರು ಖ್ಯಾತ ಲೇಖಕಿ ಟಿ.ಗಿರಿಜಾ ಅವರ ಸಹೋದರಿ. ನೈಜ ಕಥೆ ಆದರಿಸಿದ ಈ ಚಿತ್ರ ಪ್ರೇಮ ಕಥಾಹಂದರ ಹೊಂದಿದೆ. ಪ್ರೇಮಕಥೆಯೇ ಪ್ರಧಾನವಾದರೂ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಯ “ಪ್ರೇಮಿ” ಚಿತ್ರದಲ್ಲಿದೆ. ಜ್ಯೋತಿಷ್ಯದ ಕುರಿತದ ವಿಷಯವೂ ಇದರಲ್ಲಿದೆ. ಐದು ಹಾಡುಗಳ ಪೈಕಿ ಮೊದಲ ಹಾಡು ಇಂದು ಬಿಡುಗಡೆಯಾಗಿದೆ. ನಾನೇ ಸಂಗೀತ ನಿರ್ದೇಶನದ ಜೊತೆಗೆ ನಿರ್ದೇಶನವನ್ನು ಮಾಡಿದ್ದೇನೆ. ಖಳನಾಯಕನಾಗೂ ಅಭಿನಯಿಸಿದ್ದೇನೆ ಎಂದು ಪ್ರದೀಪ್ ವರ್ಮ ಹೇಳಿದರು. ಇದನ್ನೂ ಓದಿ: ಒಟಿಟಿಗೆ ಬಂತು ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’ ಸಿನಿಮಾ

ಬಾಲ್ಯದಿಂದಲೂ ನಟನಾಗಬೇಕೆಂಬ ಕನಸು. ಅದು ಈಗ ಈಡೇರಿದೆ. ಅಪ್ಪ – ಅಮ್ಮ ನನ್ನ ಆಸೆಗೆ ಆಸರೆಯಾದರು. ಪ್ರದೀಪ್ ವರ್ಮ ಅವರು ನನ್ನ ಮೊದಲ ಚಿತ್ರ ನಿರ್ದೇಶನ ಮಾಡಿದ್ದಾರೆ. ಸಂಗೀತ ನಿರ್ದೇಶಕರು ಅವರು ಅಂತ ಮೊದಲ ತಿಳಿದಿತ್ತು. ಪ್ರದೀಪ್ ವರ್ಮ ಅವರ ನಿರ್ದೇಶನದ “ಕುರುಡು ಕಾಂಚಾಣ” ಚಿತ್ರದ ಕಥೆ ಕೇಳಿ ಈ ಚಿತ್ರವನ್ನು ಅವರಿಂದಲೇ ನಿರ್ದೇಶಿಸಬೇಕೆಂದು ತೀರ್ಮಾನ ಮಾಡಲಾಯಿತು. ಚಿತ್ರತಂಡದ ಸಹಕಾರದಿಂದ “ಪ್ರೇಮಿ” ಒಂದೊಳ್ಳೆ ಚಿತ್ರವಾಗಿ ಮೂಡಿಬಂದಿದೆ. ಸದ್ಯದಲ್ಲೇ ಬಾಕಿಯಿರುವ ಹಾಡುಗಳು, ಟೀಸರ್ ಹಾಗೂ ಟ್ರೇಲರ್ ಅನಾವರಣವಾಗಲಿದೆ ಎಂದರು ನಾಯಕ ಅದ್ವಿಕ್. ಇದನ್ನೂ ಓದಿ: `ರಾಯರೆ ನನ್ನ ಉಸಿರು’ ಅಂತ ಭಾವುಕರಾದ ನಟ ಜಗ್ಗೇಶ್
ನಾನು ಜನಪ್ರಿಯ ಲೇಖಕಿ ಟಿ.ಗಿರಿಜಾ ಅವರ ಸಹೋದರಿ. ವೃತ್ತಿಯಲ್ಲಿ ಶಿಕ್ಷಕಿ. ಹಲವು ಕಥೆಗಳನ್ನು ಬರೆದಿದ್ದೇನೆ. ಪ್ರೇಮಕಥೆಗಳೆ ಹೆಚ್ಚು. ಇದು ನೈಜ ಕಥೆ. ಈ ಕಥೆ ಸಿನಿಮಾ ರೂಪ ಪಡೆದುಕೊಂಡು ನನ್ನ ಮಗನೇ ನಾಯಕನಾಗಿರುವುದು ಖುಷಿಯಾಗಿದೆ ಎಂದು ಅಕ್ಕಮಹಾದೇವಿ ತಿಳಿಸಿದರು. ನಾನು ಹೋಟೆಲ್ ಉದ್ಯಮಿ. ಸಿನಿಮಾ ರಂಗ ಹೊಸತು. ಮಗನಿಗಾಗಿ ಸಿನಿಮಾ ನಿರ್ಮಾಣ ಮಾಡಿರುವುದಾಗಿ ನಿರ್ಮಾಪಕ ಸಿದ್ದಲಿಂಗಯ್ಯ ಹೇಳಿದರು. ಈ ಚಿತ್ರಕ್ಕೆ ಸಂಭಾಷಣೆ ಬರೆದವರು ಎನ್ ಎಮ್ ವಿಮಲ್ ರಾಜ್ ಹಾಗೂ ಸಂಕಲನ ಸಂಜೀವ್ ರೆಡ್ಡಿ ಮತ್ತು ಅಸೋಸಿಯೇಟ್ ಡೈರೆಕ್ಟರ್ ಪೂರ್ಣಚಂದ್ರ ದೇವಾನಂದ್ ನನ್ನ ಪಾತ್ರ ಚೆನ್ನಾಗಿದೆ. ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ ಎಂದರು ನಾಯಕಿ ಸಾತ್ವಿಕ. ಎರಡನೇ ನಾಯಕಿಯಾಗಿ ಅಭಿನಯಿಸಿರುವ ಶೋಭಿತ, ಕಲಾವಿದರಾದ, ದ್ವಿತ ಕೆ ಗೌಡ, “ಪ್ರೇಮ ಲೋಕ” ಸುರೇಶ್ S, ರಾಘವೇಂದ್ರ, ಕಿರಣ್ ರಾಜ್, ಹರ್ಷಿತಾ, ಹರೀಶ್ ಉಕ್ಕಡಗಾತ್ರಿ, ವೀರೇಶ್ ಹಿರೇಮಠ್ , ಮಾಸ್ಟರ್ ಸಂತೃಪ್ತಿ, ಮಾಸ್ಟರ್ ಹರ್ಷಲ್ ಹಾಗೂ ಛಾಯಾಗ್ರಾಹಕ ಗೌತಮ್ ಮಟ್ಟಿ ಮುಂತಾದವರು “ಪ್ರೇಮಿ’ ಚಿತ್ರದ ಕುರಿತು ಮಾತನಾಡಿದರು. ಇದನ್ನೂ ಓದಿ: ವಿಶ್ವ ಚಾಂಪಿಯನ್ ಖಾಜಿಮಾ ಬಯೋಪಿಕ್‌ಗೆ ಚಾಲನೆ

