ಜಕಾರ್ತ: ವಿವಾಹಪೂರ್ವ ಸೆಕ್ಸ್ ತಡೆಯಲು ಇಂಡೋನೇಷ್ಯಾ ಸರ್ಕಾರ (Indonesia Government) ಹೊಸ ಕ್ರಿಮಿನಲ್ ಕಾನೂನು (Criminal Law) ಜಾರಿಗೆ ತರಲು ಸಜ್ಜಾಗಿದೆ. ಅದಕ್ಕಾಗಿ ಕರಡನ್ನೂ ಸಿದ್ಧಪಡಿಸಿದೆ.
ಹೊಸ ಕ್ರಿಮಿನಲ್ ಕಾನೂನು (Criminal Law) ಪ್ರಕಾರ ವಿವಾಹ (Marriage) ಪೂರ್ವ ಸೆಕ್ಸ್ ಮಾಡಿದ್ರೆ ಅಂತಹವರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು ಎಂದು ಸರ್ಕಾರ ಹೇಳಿದೆ. ಇದನ್ನೂ ಓದಿ: ಕ್ಯಾಂಪಸ್‌ನಲ್ಲಿ ಲವ್‌ಜಿಹಾದ್‌ಗೆ ಉತ್ತೇಜನ, ಸೇನೆಗೆ ಅಪಮಾನ – 6 ಶಿಕ್ಷಕರಿಗೆ ಪಾಠ ಮಾಡದಂತೆ ಸೂಚನೆ
ಇಂಡೋನೇಷ್ಯಾ ತನ್ನ ದೇಶದ ಮೌಲ್ಯಗಳಿಗೆ ತಕ್ಕಂತೆ ಕ್ರಿಮಿನಲ್ ಕಾನೂನು ರೂಪಿಸಿರುವುದು ನಮ್ಮ ಹೆಮ್ಮೆ. ಮುಂದಿನ ಸಂಸತ್ತಿನಲ್ಲಿ ಹೊಸ ಶಾಸನವಾಗಿ ಈ ಕ್ರಿಮಿನಲ್ ಕೋಡ್ ಅಂಗೀಕಾರವಾಗುವ ನಿರೀಕ್ಷೆಯಿದೆ ಎಂದು ಉಪ ಕಾನೂನು ಮಂತ್ರಿ ಎಡ್ವರ್ಡ್ ಒಮರ್ ಷರೀಫ್ ಹೇಳಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಬಿಎಸ್‌ವೈ ಭಾಗಿ
ಈ ಕಾನೂನು ವಿಶ್ವದ ಮುಸ್ಲಿಂ (Muslims Nation) ಬಹುಸಂಖ್ಯಾತ ದೇಶದ ಜನರ ಮೇಲೆ ಪರಿಣಾಮ ಬೀರಬಹುದು. ದಂಪತಿ ವಿವಾಹಪೂರ್ವವಾಗಿ ಅಕ್ರಮ ಸಂಬಂಧ ಹೊಂದಿದ್ದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಆದರೆ ಇಂಡೋನೇಷ್ಯಾದಲ್ಲಿ ಸಲಿಂಗ ಕಾಮ ಅನುಮತಿಸಿದ ಕಾರಣ, ಆಗ್ನೇಯ ಏಷ್ಯಾದ ರಾಷ್ಟ್ರದ ಸಣ್ಣ LGBT (ಲೆಸ್ಬಿಯನ್, ಗೇ ಸೇಕ್ಸ್ ಮಾಡುವರು) ಗುಂಪುಗಳನ್ನು ಶಿಕ್ಷಿಸಬಹುದೆಂಬ ಆತಂಕ ವ್ಯಕ್ತಪಡಿಸಿದೆ.
ಪತಿ ಅಥವಾ ಪತ್ನಿ ಸಂಬಂಧ ಇಲ್ಲದವರೊಂದಿಗೆ ಸಂಭೋಗಿಸಿದರೆ, ಅದನ್ನು ವ್ಯಬಿಚಾರವೆಂದು ಪರಿಗಣಿಸಿ ಆರ್ಟಿಕಲ್ 413ರಲ್ಲಿ ಉಲ್ಲೇಖಿಸಿ ಗರಿಷ್ಠ 1 ವರ್ಷ ಜೈಲು ಶಿಕ್ಷೆ ಅಥವಾ ಗರಿಷ್ಠ ದಂಡವನ್ನು ವಿಧಿಸಲಾಗುತ್ತದೆ ಎಂದು ಇಂಡೋನೇಷ್ಯಾ ಸರ್ಕಾರ ತಿಳಿಸಿದೆ.