‘ಪ್ರೇಮಲು’ ಚಿತ್ರ ಪ್ರೇಕ್ಷಕರಿಗೆ ಗುಡ್ ನ್ಯೂಸ್- ಸೀಕ್ವೆಲ್‌ಗೆ ಸಿದ್ಧತೆ

Public TV
1 Min Read
premalu 1

ಮಾಲಿವುಡ್ ಸೂಪರ್ ಹಿಟ್ ‘ಪ್ರೇಮಲು’ (Premalu) ಚಿತ್ರ ಫೆ.9ರಂದು ರಿಲೀಸ್ ಆಗಿ ಸಕ್ಸಸ್ ಕಂಡಿದೆ. 100 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿದೆ. ಇದೀಗ ಒಟಿಟಿಯಲ್ಲಿ ಬಿಡುಗಡೆಯಾದ್ಮೇಲೆ ಕೂಡ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಪ್ರೇಮಲು ಪಾರ್ಟ್ 2 ಬರುತ್ತಾ ಎಂಬುದಕ್ಕೆ ಚಿತ್ರದ ನಿರ್ದೇಶಕ ಗಿರೀಶ್ ಎ.ಡಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ನಟನೆಯನ್ನು ಹೊಗಳಿದ ಮಾನುಷಿ ಚಿಲ್ಲರ್

premalu

‘ಪ್ರೇಮಲು’ ಸಿನಿಮಾದ ಸೀಕ್ವೆಲ್‌ಗೆ ‘ಪ್ರೇಮಲು 2’ (Premalu 2) ಎಂದು ಟೈಟಲ್ ಇಡಲಾಗಿದೆ. ಈ ಬಗ್ಗೆ ನಿರ್ದೇಶಕ ಗಿರಿಶ್ ಎ.ಡಿ ಚಿತ್ರದ ಸಕ್ಸಸ್‌ ಮೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ‘ಪ್ರೇಮಲು ಚಿತ್ರಕ್ಕಿಂತ ಹೆಚ್ಚಿನ ಫನ್ ಹಾಗೂ ಎನರ್ಜಿ’ ಸಿಗಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಈ ಸಿನಿಮಾ 2025ರಲ್ಲಿ ರಿಲೀಸ್ ಆಗಲಿದೆಯಂತೆ. ಈ ಚಿತ್ರದ ಪ್ರಮುಖ ನಿರ್ಮಾಪಕ ಫಹಾದ್ ಫಾಸಿಲ್ (Fahad Fasil) ಅವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ.

mamitha baiju

ಚಿತ್ರದಲ್ಲಿ ನಸ್ಲೆನ್, ಮಮಿತಾ ಬೈಜು (Mamitha Baiju) ಲೀಡ್ ರೋಲ್‌ನಲ್ಲಿ ನಟಿಸಿದ್ದರು. ‘ಪ್ರೇಮಲು’ ಸಿನಿಮಾದ ಪ್ರೇಮಕಥೆಗೆ ಅಭಿಮಾನಿಗಳು ಫಿದಾ ಆಗಿದ್ದರು. ವಿಭಿನ್ನ ಪ್ರೇಮಕಥೆಯನ್ನು ತೋರಿಸುವ ಮೂಲಕ ಚಿತ್ರತಂಡ ಗೆದ್ದಿದ್ದಾರೆ. ಇದೀಗ ಪ್ರೇಮಲು ಪಾರ್ಟ್‌ 2ಗೂ ಕೂಡ ಭಿನ್ನ ಕಥೆಯನ್ನೇ ಆಯ್ಕೆ ಮಾಡಿದ್ದಾರೆ. ಸಿನಿಮಾ ಬರುವವರೆಗೂ ಕಾಯಬೇಕಿದೆ.

ಇದೀಗ ‘ಪ್ರೇಮಲು’ ಸಿನಿಮಾವನ್ನು ಮೆಚ್ಚಿ ಕೊಂಡಾಡಿದ್ದ ಫ್ಯಾನ್ಸ್‌ಗೆ ಇದರ ಸೀಕ್ವೆಲ್ ಬಗ್ಗೆ ಅಪ್‌ಡೇಟ್ ನೀಡುವ ಮೂಲಕ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Share This Article