ಮಾಜಿ ಸಚಿವ ರಾಮದಾಸ್ ಪ್ರೇಮ ಪ್ರಕರಣದಲ್ಲಿ ಸುದ್ದಿಯಾಗಿದ್ದ ಪ್ರೇಮಕುಮಾರಿ 2018ರ ಚುನಾವಣೆಗೆ ನಿಲ್ತಾರಂತೆ

Public TV
1 Min Read
prema kumari

ಮೈಸೂರು: ಮಾಜಿ ಸಚಿವ ರಾಮದಾಸ್ ಪ್ರಕರಣದಲ್ಲಿ ಸುದ್ದಿಯಾಗಿದ್ದ ಪ್ರೇಮಕುಮಾರಿ 2018ರ ಚುನಾವಣೆಗೆ ನಿಲ್ಲಲು ಮುಂದಾಗಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಸ್ವತಃ ಪ್ರೇಮಕುಮಾರಿಯವರೇ ಸ್ಪಷ್ಟಪಡಿಸಿದ್ದಾರೆ.

ramdas 1

ಮಾಜಿ ಸಚಿವ ರಾಮದಾಸ್ ನನ್ನ ರಾಜಕೀಯ ಗುರುಗಳು. ಅವರೇ ನನ್ನ ಗಂಡ. ಅವರೇ ನನ್ನ ವೆಲ್‍ವಿಷರ್. ಅವರ ನಿರ್ಧಾರದ ಮೇಲೆ ನನ್ನ ರಾಜಕೀಯ ಭವಿಷ್ಯ ಇದೆ. ಅನಿವಾರ್ಯ ಬಿದ್ದರೆ ಅವರ ವಿರುದ್ಧವೂ ಸ್ಪರ್ಧೆ ಮಾಡ್ತೀನಿ ಎಂದು ಹೇಳಿದ್ದಾರೆ.

prema kumari 2

ಅಲ್ಲದೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರಲಿಲ್ಲ. ಸರ್ಕಾರಿ ಕೆಲಸದಲ್ಲಿ ಇದ್ದಾಗ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ ಅಷ್ಟೇ. ಆದ್ರೆ ಮುಂದಿನ ದಿನಗಳಲ್ಲಿ ಯಾವ ಪಕ್ಷದಿಂದ ಸ್ಪರ್ಧೆ ಮಾಡ್ತೀನಿ ಅಂತ ಹೇಳ್ತೀನಿ. ನನ್ನ ಮತ್ತು ರಾಮದಾಸ್ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಆ ಪ್ರಕರಣ ಮುಗಿದ ಮೇಲೆ ನಾನು ರಾಜಕೀಯಕ್ಕೆ ಬರ್ತೀನಿ ಎಂದು ಪ್ರೇಮಕುಮಾರಿ ಸ್ಪಷ್ಟಪಡಿಸಿದ್ರು.

prema kumari 3

prema kumari 1

Share This Article
Leave a Comment

Leave a Reply

Your email address will not be published. Required fields are marked *