ಬಾಲಿವುಡ್ (Bollywood) ಬ್ಯೂಟಿ ಪ್ರೀತಿ ಜಿಂಟಾ (Preity Zinta) ಇದೀಗ ಅವಳಿ ಮುದ್ದು ಮಕ್ಕಳ ಆರೈಕೆಯಲ್ಲಿದ್ದಾರೆ. ಸಿನಿಮಾಗೆ ಬ್ರೇಕ್ ಕೊಟ್ಟು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಸದ್ಯ ಅವಳಿ ಮಕ್ಕಳಿಗೆ 1 ವರ್ಷ ತುಂಬಿದ ಸಂತಸದಲ್ಲಿ, ಮಕ್ಕಳ ಫೋಟೋ ಶೇರ್ ಮಾಡಿ ಪ್ರೀತಿಯಿಂದ ಮೇರಿ ಜಾನ್ ಎಂದು ವಿಶ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಹಿಂದಿ ಚಿತ್ರರಂಗದಲ್ಲಿ ಸೂಪರ್ ಸ್ಟಾರ್‌ಗಳ ಜೊತೆ ನಾಯಕಿಯಾಗಿ ಮಿಂಚಿದ್ದ ನಟಿ ಈಗ ಸಿನಿಮಾಗೆ ಗುಡ್ ಬೈ ಹೇಳಿದ್ದಾರೆ. ಮದುವೆ, ಮಕ್ಕಳು ಅಂತಾ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಅವಳಿ ಮಕ್ಕಳಿಗೆ ಪ್ರೀತಿ ವಿಶ್ ಮಾಡಿರುವ ರೀತಿ ನೆಟ್ಟಿಗರ ಗಮನ ಸೆಳೆದಿದೆ. ನಾನು ನಿಮಗಾಗಿ ಪ್ರಾರ್ಥಿಸಿದ್ದೆ, ನಾನು ನಿನಗೆ ಹಾರೈಸಿದ್ದೆ. ಇಂದು ನಿಮಗೆ ಒಂದು ವರ್ಷವಾಗಿದೆ. ನನ್ನ ಹೃದಯ ತುಂಬಿ ಬಂದಿದೆ. ನಿಮ್ಮ ನಗು, ನಿಮ್ಮ ಬೆಚ್ಚಗಿನ ಅಪ್ಪುಗೆ ಮತ್ತು ನನ್ನ ಜೀವನದಲ್ಲಿ ನಿಮ್ಮ ಉಪಸ್ಥಿತಿ. ನನ್ನ ಪುಟ್ಟ ಗಿಯಾ ನಿನಗೆ ಜನ್ಮ ದಿನದ ಶುಭಾಶಯಗಳು. ನಾನು ನಿರೀಕ್ಷಿಸಿದ್ದೆಲ್ಲವೂ ನೀನೆ. ನಿನ್ನ ಜೀವನವೂ ಯಾವಾಗಲೂ ಸಂತಸದಿಂದ ತುಂಬಿರಲಿ ಎಂದು ಬರೆದುಕೊಂಡಿದ್ದಾರೆ.
View this post on Instagram
ನಾನು ನಿರ್ವಹಿಸಿದ ಪಾತ್ರಗಳಲ್ಲಿ ಯಾವದೂ ನಿಮ್ಮ ತಾಯಿಗೆ ಹತ್ತಿರವಾಗುವುದಿಲ್ಲ. ನಾನು ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ ಹುಟ್ಟು ಹಬ್ಬದ ಶುಭಾಶಯಗಳು ಮೇರಿ ಜಾನ್, ನಿನ್ನ ಮುಂದಿನ ಜೀವನವು ಖುಷಿಯಿಂದ ಕೂಡಿರಲಿ ಎಂದು ಜೈಗೆ ಪ್ರೀತಿ ಶುಭಕೋರಿದ್ದಾರೆ. ಇದನ್ನೂ ಓದಿ:ಡಾಲಿ ಧನಂಜಯ್ ಜೊತೆ ರಮ್ಯಾ ಮಾತ್ರವಲ್ಲ, ‘ಕಾಂತಾರ’ ಸಪ್ತಮಿ ಕೂಡ ಡುಯೆಟ್
View this post on Instagram
2016ರಲ್ಲಿ ಪ್ರೀತಿ ಜಿಂಟಾ ಅವರು ಜೀನ್ ಗುಡೆನಫ್ ಅವರನ್ನು ಮದುವೆಯಾದರು. ಈಗ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಅವರು ಸೆಟಲ್ ಆಗಿದ್ದಾರೆ. ಅವರು ಆಗಾಗ ಭಾರತಕ್ಕೆ ಬಂದು ಹೋಗುತ್ತಾರೆ. ಕಳೆದ 2021ರಲ್ಲಿ ಬಾಡಿಗೆ ತಾಯ್ತತನದ ಮೂಲಕ ಮಗು ಪಡೆದಿದ್ದರು. ಈಗ ಮಕ್ಕಳಿಗೆ 1 ವರ್ಷ ತುಂಬಿರುವ ಸಂತಸದಲ್ಲಿ ಶುಭ ಹಾರೈಸಿದ್ದಾರೆ.