Advertisements

ಗಂಡ, ಮಗನನ್ನ ಪೂಜೆಗೆ ಕೂರಿಸಿ ಮಹಿಳೆ ಮೇಲೆ ಅತ್ಯಾಚಾರ ಯತ್ನ- ಪೂಜಾರಿಗೆ ಗ್ರಾಮಸ್ಥರಿಂದ ಧರ್ಮದೇಟು

ತುಮಕೂರು: ಮನೆಯಲ್ಲಿ ಶಾಂತಿಯಿಲ್ಲ, ನೆಮ್ಮದಿಯಿಲ್ಲ, ಒಂದು ಪೂಜೆ ಮಾಡಿ ಅಂತ ಪೂಜಾರಿಯನ್ನ ಮನೆಗೆ ಕರೆಸಿದ್ರು. ಆದ್ರೆ ಅದೇ ಪೂಜಾರಿ ಮನೆಗೆ ಬಂದು ಪೂಜೆಗೆ ಕರೆಸಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದು ಗೂಸಾ ತಿಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisements

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಅಕ್ಕಳಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾಗಮಂಗಲ ತಾಲೂಕಿನ ಮುಳಕಟ್ಟಮ್ಮ ದೇವಾಲಯದ ಸ್ವಯಂ ಘೋಷಿತ ಪೂಜಾರಿ, ಮಹೇಶ್ ಪೂಜಾರ್ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಕಳೆದ ಶುಕ್ರವಾರ ಅಕ್ಕಳಸಂದ್ರ ಗ್ರಾಮದ ಗೃಹಿಣಿ ಮನೆಗೆ ಪೂಜಾರಿ ಕಟ್ಟಲೇ ಮಾಡಲು ಬಂದಿದ್ದ. ಮೊದಲು ಮಹಿಳೆಯ ಗಂಡ ಹಾಗೂ ಮಗನನ್ನ ಕರ್ಪೂರ ಬೆಳಗುತ್ತಾ ಕುಳಿತಿರಬೇಕು ಅಂತ ಕೂರಿಸಿದ್ದಾನೆ. ನಂತರ ಗೃಹಿಣಿಗೆ ಕಟ್ಟಲೆ ಪೂಜೆ ಮಾಡಿಸೋಕೆ ಸ್ನಾನ ಮಾಡ್ಬೇಕು, ನಾನೇ ನೀರು ಹಾಕ್ಬೇಕು ಅಂತ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

Advertisements

ವಿಷಯ ತಿಳಿಯುತ್ತಿದ್ದಂತೆ ಜೋರು ಗಲಾಟೆ ಆಗಿದೆ. ಆಮೇಲೆ ಊರಿನ ಜನರೆಲ್ಲಾ ಸೇರಿ ಪೂಜಾರಿ ಮಹೇಶ್‍ಗೆ ಚೆನ್ನಾಗಿ ಥಳಿಸಿದ್ದಾರೆ. ಕೊನೆಗೆ ಗ್ರಾಮದಲ್ಲಿ ಪಂಚಾಯ್ತಿ ಮಾಡಿ ಆರೋಪಿ ಪೂಜಾರಿಗೆ 5 ಲಕ್ಷ ದಂಡವನ್ನೂ ವಿಧಿಸಿದ್ದಾರೆ. ಆದ್ರೆ ಚೆಕ್ ಕೊಟ್ಟು ಹೋಗಿದ್ದ ಆರೋಪಿ ಹಣ ಸಂದಾಯ ಮಾಡಿಲ್ಲ. ಹೀಗಾಗಿ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಮಹೇಶ್ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಆರೋಪದಡಿ ಪ್ರಕರಣ ದಾಖಲಾಗಿದೆ.

Advertisements
Exit mobile version