Connect with us

Davanagere

ಹರಿಜನಕ್ಕೆ ಸೇರಿದ ಸಹಾಯಕಿ ಅಡುಗೆ ತಯಾರಿಸ್ತಾರೆಂದು ಊಟಕ್ಕೆ ಬರ್ತಿಲ್ಲ ಗರ್ಭಿಣಿಯರು

Published

on

ದಾವಣಗೆರೆ: ರಾಜ್ಯದಲ್ಲಿ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಾಗಿದೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾದಂತಿದೆ. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡತಿ ಕ್ಯಾಂಪ್ ನ ಅಂಗನವಾಡಿ ಕೇಂದ್ರದಲ್ಲಿ ಹರಿಜನಕ್ಕೆ ಸೇರಿದ ಸಹಾಯಕಿ ಅಡುಗೆ ತಯಾರಿಸುತ್ತಾರೆ ಅಂತ ಗರ್ಭಿಣಿಯರು ಊಟಕ್ಕೆ ಬರುತ್ತಿಲ್ಲ.

ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ನೀಡಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಮಾತೃಪೂರ್ಣ ಯೋಜನೆ ಜಾರಿಗೆ ತಂದು ಅಂಗನವಾಡಿ ಕೇಂದ್ರಗಳ ಮೂಲಕ ಅಡುಗೆ ಮಾಡಿ ಗರ್ಭಿಣಿಯರಿಗೆ ಬಡಿಸಲು ಮುಂದಾಗಿದೆ. ಈ ಮೊದಲು ಗರ್ಭಿಣಿಯರಿಗೆ ರೇಷನ್ ಬರುತ್ತಿತ್ತು. ಈಗ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಮಾಡಿ ಉಣಬಡಿಸುವ ಯೋಜನೆ ಜಾರಿಯಲ್ಲಿದೆ.

ಈ ವ್ಯವಸ್ಥೆಗೆ ಗ್ರಾಮದ ಮಹಿಳೆಯರು ಸ್ಪಂದಿಸುತ್ತಿಲ್ಲ. ಹರಿಜನಕ್ಕೆ ಸೇರಿದ ಸಹಾಯಕಿ ಅಡುಗೆ ತಯಾರಿಸುತ್ತಾರೆಂದು ಊಟಕ್ಕೆ ಬರುತ್ತಿಲ್ಲ. ಆದ ಕಾರಣ ಅಂಗನವಾಡಿ ಸಹಾಯಕಿಯನ್ನು ಬದಲಾವಣೆ ಮಾಡಿ ಅಥವಾ ಈ ಹಿಂದಿನ ಪದ್ಧತಿಯಂತೆ ರೇಷನ್ ಕೊಡಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *