ಬೆಂಗಳೂರು: ಜುಲೈ 27ಕ್ಕೆ ನಡೆಯವ ಚಂದ್ರ ಗ್ರಹಣಕ್ಕೆ ದಿನಗಣನೆ ಶುರುವಾಗಿದೆ. ನಭೋಮಂಡಲದಲ್ಲಿ ಉಂಟಾಗುವ ಕೌತುಕವನ್ನು ವೀಕ್ಷಿಸಲು ಪ್ರಪಂಚದ ಜನರೆಲ್ಲಾ ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ತುಂಬು ಗರ್ಭಿಣಿಯರಿಗೆ ಗ್ರಹಣದ ಭಯ ಶುರುವಾಗಿದೆ.
ಜುಲೈ 27 ರ ರಕ್ತಚಂದ್ರ ಗ್ರಹಣಕ್ಕೆ ಬೆದರಿರುವ ಗರ್ಭಿಣಿಯರು ಡೆಲಿವರಿ ದಿನಾಂಕವನ್ನು ಬೇರೆ ದಿನಾಂಕಕ್ಕೆ ಬದಲಿ ಮಾಡಿಕೊಡುವಂತೆ ವೈದ್ಯರಿಗೆ ದುಂಬಾಲು ಬೀಳುತ್ತಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿ ಲಭ್ಯವಾಗಿವೆ. ಇದನ್ನೂ ಓದಿ: ಶುಕ್ರವಾರ ಕೇತುಗ್ರಸ್ಥ ಚಂದ್ರಗ್ರಹಣ – ಭಕ್ತರಿಗೆ ದೇಗುಲಗಳಿಂದಲೇ ನೋಟಿಸ್
Advertisement
Advertisement
ಗ್ರಹಣದ ಮುನ್ನಾ ದಿನ, ಗ್ರಹಣದ ದಿನ ಅಥವಾ ಗ್ರಹಣ ನಂತರದ ಒಂದು ದಿನ ಅಷ್ಟು ದಿನವೂ ಡೆಲಿವರಿ ಮಾಡಿಸದಂತೆ ವೈದ್ಯರಿಗೆ ಗರ್ಭಿಣಿಯರು ಮತ್ತು ಕುಟುಂಬದವರು ಮನವಿ ಮಾಡಿಕೊಳ್ಳುತ್ತಿದ್ದಾರಂತೆ. ವೈದ್ಯರಿಗೆ ಗ್ರಹಣದ ಧರ್ಮಸಂಕಟ ಶುರುವಾಗಿದ್ದು, ನಾರ್ಮಲ್ ಡೆಲಿವರಿಯಾದ್ರೇ ಏನು ಮಾಡೋದಕ್ಕೆ ಸಾಧ್ಯವಿಲ್ಲ. ಆದರೆ ಸಿಸೇರಿಯನ್ ಕೇಸ್‍ನಲ್ಲಿ ಎರಡು ಮೂರು ದಿನ ಕಾಯಬಹುದು ಅಂತಾ ವೈದ್ಯರು ಕುಟುಂಬಳಿಗಳಿಗೆ ತಿಳಿಹೇಳುವ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಜುಲೈ 27ರ ಚಂದ್ರಗ್ರಹಣ – ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ?
Advertisement
ಗ್ರಹಣದ ದಿನ ಮಕ್ಕಳು ಹುಟ್ಟಿದರೆ ಮಗುವಿಗೆ ಕಾಯಿಲೆ ಬರುತ್ತೆ, ಅಂಗವೈಕಲ್ಯ ಇರಬಹುದು ಅನ್ನೋ ಭಯದಿಂದ ಜನರು ಹೀಗೆ ಮಾಡುತ್ತಿದ್ದಾರೆ. ಇದೆಲ್ಲ ವೈಜ್ಞಾನಿಕವಾಗಿ ಸಾಬೀತಾಗದೇ ಇದ್ದರೂ, ಇದೊಂದು ಭಾವನ್ಮಾತಕ ವಿಚಾರವಾಗಿದ್ದು ನಾವು ಸ್ಪಂದಿಸಲೇಬೇಕಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ: ರಾಜ್ಯ ರಾಜಕೀಯದಲ್ಲಿ ಯಾರಿಗೆ ಹಿಡಿಯಲಿದೆ ಗ್ರಹಣ?