ಭೋಪಾಲ್: ಆಂಬುಲೆನ್ಸ್ ಲಭ್ಯವಿರದ ಹಿನ್ನೆಲೆಯಲ್ಲಿ ಗರ್ಭಿಣಿಯೊಬ್ಬರು 20 ಕಿಲೋಮೀಟರ್ ದೂರದ ಆಸ್ಪತ್ರೆಗೆ ನಡೆದುಕೊಂಡು ಹೋಗ್ತಿದ್ದ ವೇಳೆ ಪ್ರಸವ ವೇದನೆ ತಾಳದೇ ದಾರಿ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆ ಮಧ್ಯಪ್ರದೇಶದ ಕತ್ನಿ ಜಿಲ್ಲೆಯಲ್ಲಿ ನಡೆದಿದೆ.
ಆದ್ರೆ ದುರಾದೃಷ್ವವೆಂಬಂತೆ ನವಜಾತ ಹೆಣ್ಣು ಮಗು ಸಾವನ್ನಪ್ಪಿದೆ. ಇಲ್ಲಿನ ಬರ್ಮಾನಿ ಗ್ರಾಮದ ನಿವಾಸಿ ಬೀನಾ ಅವರಿಗೆ ಪ್ರಸವ ವೇದನೆ ಕಾಣಿಸಿಕೊಂಡಿತ್ತು. ಆದ್ರೆ ಸಕಾಲಕ್ಕೆ ಆಂಬುಲೆನ್ಸ್ ಬರದ ಕಾರಣ 20 ಕಿ.ಮೀ ದೂರದಲ್ಲಿದ್ದ ಬಾರ್ಹಿ ಕಮ್ಯುನಿಟಿ ಹೆಲ್ತ್ ಸೆಂಟರ್‍ಗೆ ಗಂಡನ ಜೊತೆಯಲ್ಲಿ ನಡೆದುಕೊಂಡೇ ಹೋಗಲು ನಿರ್ಧರಿಸಿದ್ರು.
Advertisement
ಕಮ್ಯುನಿಟಿ ಹೆಲ್ತ್ ಸೆಂಟರ್‍ಗೆ ಆಂಬುಲೆನ್ಸ್ ಗಾಗಿ ಕರೆ ಮಾಡಲಾಗಿತ್ತು. ಆದ್ರೆ ಆಂಬುಲೆನ್ಸ್ ಬರಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ಧಾರೆ.
Advertisement
ಇದನ್ನೂ ಓದಿ: ಗರ್ಭಿಣಿಯನ್ನ ಜೋಳಿಗೆಯಲ್ಲೇ 16 ಕಿ.ಮೀ ಹೊತ್ತೊಯ್ದರು!
Advertisement
ಗರ್ಭೀಣಿ ಬೀನಾ ಬಾರ್ಹಿ ನಗರ ತಲುಪುತ್ತಿದ್ದಂತೆ ಪೊಲೀಸ್ ಠಾಣೆಯೊಂದರ ಬಳಿ ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದ್ರೆ ಮಗು ನೆಲದ ಮೇಲೆ ಬಿದ್ದ ಕಾರಣ ಅಲ್ಲೇ ಸಾವನ್ನಪ್ಪಿತು ಎಂದು ಕುಟುಂಬದವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement
ಆದರೂ ಮಗು ಅವಧಿಗೂ ಮುನ್ನ ಅಂದ್ರೆ 7 ತಿಂಗಳಿಗೆ ಜನಿಸಿರುವ ಕಾರಣ ಅದು ಬದುಕುಳಿಯುವ ಸಂಭವ ಇರಲಿಲ್ಲ ಎಂದು ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಅಶೋಕ್ ಅವಾಧಿಯಾ ಹೇಳಿದ್ದಾರೆ.
ಆಂಬುಲೆನ್ಸ್ ಯಾಕೆ ಕಳಿಸಿರಲಿಲ್ಲ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, ಬಾರ್ಹಿ ಕಮ್ಯುನಿಟಿ ಹಲ್ತ್ ಸೆಂಟರ್‍ನಲ್ಲಿ ಅಂಬುಲೆನ್ಸ್ ಲಭ್ಯವಿಲ್ಲ ಅಂದ್ರು. ಜನನಿ ಎಕ್ಸ್ ಪ್ರೆಸ್(ಗರ್ಭಿಣಿಯರಿಗಾಗಿ ಆಂಬುಲೆನ್ಸ್ ಸೇವೆ) ನಮ್ಮ ನಿಯಂತ್ರಣದಡಿ ಇಲ್ಲ. ಭೋಪಾಲ್ ಮೂಲಕ ಲಭ್ಯವಿರುತ್ತದೆ ಅಂದ್ರು. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಅಂತ ಅವರು ಹೇಳಿದ್ರು.