ತಿರುವನಂತಪುರಂ: ಗರ್ಭಿಣಿಯಾಗದೇ ಪತಿಯ ಮನೆಯವರನ್ನು ನಂಬಿಸಿ, ಹೆರಿಗೆಂದು ಆಸ್ಪತ್ರೆಗೆ ಬಂದು ನಂತರ ನಾಪತ್ತೆಯಾಗಿ ಹೈಡ್ರಾಮ ಮಾಡಿದ್ದ ಮಹಿಳೆಯನ್ನು ಕೊನೆಗೂ ಪತ್ತೆಹಚ್ಚುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಮದವೂರ್ ಸಮೀಪದ ಪಲ್ಲಿಕಲ್ ನ ನಿವಾಸಿ ಅನ್ಶಾದ್ ಪತ್ನಿ ಶಾಮ್ನಾ ಹೈಡ್ರಾಮ ಸೃಷ್ಟಿಸಿದ್ದ ಮಹಿಳೆ. ಈಕೆ ಗರ್ಭಿಣಿ ಆಗದಿದ್ದರೂ ಪತಿಯ ಮನೆಯವರಿಗೆ ತಾನು ಗರ್ಭಿಣಿ ಎಂದು ನಂಬಿಸಿದ್ದಾಳೆ. ನಂತರ ಅವರು ಬುಧವಾರ ನಗರದ ಎಸ್‍ಎಟಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ಕುರಿತು ವೈದ್ಯರು ಸೂಚಿಸಿದ್ದರು.
Advertisement
ಇದರಂತೆ ಮಂಗಳವಾರ ಶಾಮ್ನಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶಾಮ್ನಾ ತಾನು ಗರ್ಭಿಣಿ ಆಗಿಲ್ಲ ಎನ್ನುವುದು ಕುಟುಂಬದವರಿಗೆ ತಿಳಿಯುತ್ತದೆ ಎಂದು ಭಯಗೊಂಡು ಮಂಗಳವಾರ ಮಧ್ಯಾಹ್ನದ ವೇಳೆಗೆ ಇದ್ದಕ್ಕಿದಂತೆ ಆಸ್ಪತ್ರೆಯಿಂದ ಕಣ್ಮರೆಯಾಗಿದ್ದಾಳೆ.
Advertisement
Advertisement
ಈ ಬಗ್ಗೆ ಕುಟುಂಬದವರು ಮೆಡಿಕಲ್ ಕಾಲೇಜ್ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹುಡುಕಾಟವನ್ನು ಆರಂಭಿಸಿದ್ದಾರೆ. ಶಾಮ್ನಾ ಮಂಗಳವಾರ ಬೆಳಿಗ್ಗೆ ಪರೀಕ್ಷೆಗಾಗಿ ಹೊರ ರೋಗಿ ವಿಭಾಗಕ್ಕೆ ಬಂದಿದ್ದಾಳೆ. ಆದರೆ ಮಧ್ಯಾಹ್ನ 1.30 ರ ವೇಳೆಗೆ ಆಕೆ ಅಲ್ಲಿಂದ ಕಾಣೆಯಾಗಿದ್ದಳು.
Advertisement
ಆಸ್ಪತ್ರೆಯ ಸಿಬ್ಬಂದಿ, ಪತಿ, ಅವರ ಮನೆಯವರು ಸೇರಿ ಇಡೀ ಆಸ್ಪತ್ರೆಯಲ್ಲಿ ಹುಡುಕಾಟ ನಡೆಸಿದರೂ ಆಕೆ ಮಾತ್ರ ಪತ್ತೆಯಾಗಿರಲಿಲ್ಲ. ಪೊಲೀಸರು ಆಕೆ ಮೊಬೈಲ್ ಫೋನ್ ಟವರ್ ಟ್ರೇಸ್ ಮಾಡಿದ್ದಾರೆ. ಮಂಗಳವಾರ ರಾತ್ರಿ ಆಕೆ ಕೇರಳದ ಎರ್ನಾಕುಲಂ ನಲ್ಲಿ ಇರುವುದು ಗೊತ್ತಾಗಿದೆ. ನಂತರ ಅಲ್ಲಿದ್ದ ಎಲ್ಲಾ ಆಸ್ಪತ್ರೆಯಲ್ಲಿ ಹುಡಕಾಟ ನಡೆಸಿದ್ದಾರೆ. ಅಲ್ಲೂ ಪತ್ತೆಯಾಗಿಲ್ಲ.
ಪೊಲೀಸರು, ಪೋಷಕರು ಹುಡುಕುತ್ತಿದ್ದರೂ ಶಾಮ್ನಾ, ಸಂಬಂಧಿಗೆ ಕರೆ ಮಾಡಿ ನಾನು ಸೇಫಾಗಿ ಇದ್ದೀನಿ. ಭಯಪಡಬೇಡಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾಳೆ.
ಪೊಲೀಸರು ಮತ್ತೆ ಆಕೆಯ ಫೋನ್ ಟ್ರೇಸ್ ಮಾಡಿ ನೋಡಿದಾಗ ವೆಲ್ಲೂರಿನಲ್ಲಿ ಪತ್ತೆಯಾಗಿದೆ. ಸದ್ಯ ಶಾಮ್ನಾ ಮೊಬೈಲ್ ಕರೆ ಆಧರಿಸಿ ಪೊಲೀಸರು ಪತ್ತೆಕಾರ್ಯ ನಡೆಸಿದ್ದಾರೆ. ಕೊನೆಗೆ ಕರುಣಗಪ್ಪಲ್ಲಿಯಲ್ಲಿ ಪತ್ತೆಯಾಗಿದ್ದಾಳೆ.
ಪೊಲೀಸರು ಮಹಿಳೆಯನ್ನ ವೈದ್ಯರ ಬಳಿ ಪರೀಕ್ಷಿಸಿದಾಗ ಆಕೆ ಗರ್ಭಿಣಿಯಾಗಿಲ್ಲ ಎಂಬ ಸತ್ಯ ಹೊರಬಂದಿದೆ. ಬಳಿಕ ಆಕೆಯನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ಮಾಡಿದಾಗ ತಾನು ಗರ್ಭಿಣಿಯಲ್ಲ ಅದಕ್ಕಾಗಿ ಈ ರೀತಿ ನಾಟಕ ಮಾಡಿದೆ ಎಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.