ಲಕ್ನೋ: ಗರ್ಭಿಣಿಯೊಬ್ಬಳು ತನ್ನ ಮೂವರು ಮಕ್ಕಳನ್ನು ಬೀದಿನಾಯಿಗಳ ದಾಳಿಯಿಂದ ರಕ್ಷಿಸಿದ ಘಟನೆ ಲಕ್ನೋದಲ್ಲಿ ನಡೆದಿದೆ.
ಗರ್ಭಿಣಿ ಸೀಮಾ ಮನೆಯಲ್ಲಿ ಅಡುಗೆ ಮಾಡುತ್ತಿದ್ದಳು. ಹೊರಗೆ ಆಕೆಯ ಮೂವರು ಮಕ್ಕಳ ಆಟವಾಡುತ್ತಿದ್ದರು. ಈ ವೇಳೆ ಬೀದಿ ನಾಯಿಗಳು ದಾಳಿ ಮಾಡಿವೆ. ಈ ವೇಳೆ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ ಆಕೆ ನಾಯಿಗಳನ್ನು ಓಡಿಸಲು ಪ್ರಯತ್ನಿಸಿದ್ದಾಳೆ. ಇದನ್ನೂ ಓದಿ: ಬೀದಿನಾಯಿಗಳ ಬಾಯಿಗೆ ಪುಟ್ಟ ಬಾಲಕಿ ಬಲಿ
Advertisement
Advertisement
ಐದು ವರ್ಷದ ಮಗಳ ಮೇಲೆ ಸುಮಾರು 6 ಬೀದಿ ನಾಯಿಗಳು ಮತ್ತು ಮತ್ತೆರಡು ನಾಯಿಗಳು ಗಂಡುಮಕ್ಕಳಾದ ಹತ್ತು ವರ್ಷದ ಅನುಜ್ ಮತ್ತು ಮೂರು ವರ್ಷದ ಮೋನು ಮೇಲೆ ದಾಳಿ ಮಾಡಿವೆ. ಇದನ್ನು ಕಂಡು ಸೀಮಾ ಏಕಾಂಗಿಯಾಗಿ ಹೋರಾಡಿ ನಾಯಿಗಳನ್ನು ಅಲ್ಲಿಂದ ಓಡಿಸಿದ್ದಾಳೆ. ಇದನ್ನೂ ಓದಿ: ಮಂಗ, ಶ್ವಾನಗಳ ವಾರ್‌ನಲ್ಲಿ ಪ್ರಾಣ ಕಳೆದುಕೊಂಡ 80 ನಾಯಿಮರಿಗಳು
Advertisement
Advertisement
ಈ ವೇಳೆ ಶ್ವಾನಗಳು ಕೂಡಾ ಸೀಮಾಳ ಮೇಲೆ ದಾಳಿ ಮಾಡಿವೆ. ಮಕ್ಕಳಿಗೂ ಗಾಯಗಳಾಗಿದ್ದು, ಆಕೆಯ ಐದು ವರ್ಷದ ಮಗಳ ಸ್ಥಿತಿ ಗಂಭೀರವಾಗಿದ್ದು, ತಾಯಿ ಸೀಮಾಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆ ನಡೆದ ವೇಳೆ ಸೀಮಾಳ ಪತಿ ದನ್ವೀರ್ ಸಿಂಗ್ ಕೆಲಸಕ್ಕೆ ಹೋಗಿದ್ದನು. ಘಟನೆ ತಿಳಿದ ನಂತರ ಪಾಲಿಕೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದು, ಬೀದಿ ನಾಯಿಗಳನ್ನು ಹಿಡಿಯುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.