ಪ್ಯಾರಿಸ್: ಬೇಟೆಗೆ ಹೋಗಿದ್ದ ಆರು ತಿಂಗಳ ಗರ್ಭಿಣಿಯನ್ನು ನಾಯಿಗಳು ಕಚ್ಚಿ ಕಚ್ಚಿ ತಿಂದ ಘಟನೆ ಫ್ರೆಂಚ್ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಫ್ರಾನ್ಸ್ ನಿವಾಸಿ ಅಲಿಸಾ ಪಿಲಾಸ್ರ್ಕಿ (29) ಮೃತ ಗರ್ಭಿಣಿ. ಪ್ಯಾರಿಸ್‍ನಿಂದ ಈಶಾನ್ಯಕ್ಕೆ 90 ಕಿ.ಮೀ ದೂರದಲ್ಲಿರುವ ವಿಲ್ಲರ್ಸ್-ಕೌಚರ್ ಪಟ್ಟಣದ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದ್ದು, ಶನಿವಾರ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಮಗುವನ್ನು ಕಚ್ಚಿ ಕಚ್ಚಿ ತಿಂದ ನಾಯಿಗಳು
Advertisement
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಸಿಕ್ಯೂಟರ್ ಫ್ರೆಡೆರಿಕ್ ಟ್ರಿನ್ಹ್, ಅನೇಕ ನಾಯಿಗಳು ಕಚ್ಚಿದ ಪರಿಣಾಮ ಮಹಿಳೆ ಅಧಿಕ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಮಹಿಳೆಯನ್ನು ಕಚ್ಚಿದ ನಾಯಿಗಳ ಸಂಖ್ಯೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಸುಮಾರು 93 ನಾಯಿಗಳನ್ನು ಪರೀಕ್ಷಿಸಲಾಗಿದೆ. ಮಹಿಳೆಯ 5 ಸಾಕು ನಾಯಿಗಳನ್ನು ಸಹ ಪರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
ಅರಣ್ಯ ಪ್ರದೇಶಕ್ಕೆ ಬೇಟೆಯಾಡಲು ಹೋಗಿದ್ದ ಪತ್ನಿ ಅಲಿಸಾ ಕಾಡು ನಾಯಿಗಳು ದಾಳಿಗೆ ಗಾಬರಿಗೊಂಡಿದ್ದಳು. ತಕ್ಷಣವೇ ಫೋನ್ ಮಾಡಿ ರಕ್ಷಣೆಗೆ ಬರುವಂತೆ ತಿಳಿಸಿದ್ದಳು. ಇದರಿಂದಾಗಿ ನಾನು ಮನೆಯಿಂದ ಹೊರಟಿದ್ದೆ. ಆದರೆ ಅಲ್ಲಿಗೆ ತಲುಪುವ ಹೊತ್ತಿಗೆ ಕಾಡು ನಾಯಿಗಳು ಅಲಿಸಾಳ ಮೇಲೆ ದಾಳಿ ಮಾಡಿ ಕಚ್ಚಿ ಕಚ್ಚಿ ತಿಂದಿದ್ದವು. ಜೊತೆಗೆ ಸಾಕು ನಾಯಿ ಗಾಯಗೊಂಡಿತ್ತು ಎಂದು ಅಲಿಸಾ ಪತಿ ಪೊಲೀಸ್‍ಗೆ ಮಾಹಿತಿ ನೀಡಿದ್ದಾರೆ.