ಚೆನ್ನೈ: ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟ ಗರ್ಭಿಣಿ ಪತ್ನಿಯ ಅಂಗಾಂಗವನ್ನು ಪ್ರೇಮಿಗಳ ದಿನದಂದೇ ಪತಿ ದಾನ ಮಾಡಿ ಮಾನವೀಯತೆ ತೋರಿದ ಘಟನೆ ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.
ಕೋಕಿಲಾ(24) ಮೃತಪಟ್ಟ ಮಹಿಳೆ. ಕೋಕಿಲಾ ಕಡಕೂರಿನ ಭುವನಗಿರಿ, ಬಾಗಲಂತೇನ್ ನಿವಾಸಿಯಾಗಿದ್ದು, ಕಳೆದ ವರ್ಷ ಮೇ ತಿಂಗಳಿನಲ್ಲಿ ಗೌತಮ್ ರಾಜ್‍ರನ್ನು ಮದುವೆಯಾಗಿದ್ದರು. ಕೋಕಿಲಾ ಗರ್ಭಿಣಿ ಆಗಿದ್ದು, ತಮ್ಮ ಮೊದಲನೇ ಮಗುವಿಗೆ ಜನ್ಮ ನೀಡಲು ಫೆ.4ರಂದು ಹೆರಿಗೆಗಾಗಿ ಸಿಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
Advertisement
ಕೋಕಿಲಾ ಗರ್ಭಿಣಿ ಆದ ಬಳಿಕ ದೇಹದ ತೂಕ ಕಡಿಮೆ ಆಗುತ್ತಿತ್ತು. ಇದರಿಂದ ಕೋಕಿಲಾ ಆರೋಗ್ಯ ಹದಗೆಟ್ಟಿತ್ತು. ಫೆ. 7ರಂದು ಕೋಕಿಲಾಳಿಗೆ ರಕ್ತಸ್ರಾವ ಶುರುವಾಗಿದೆ. ಆಗ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೆಣ್ಣು ಮಗುವನ್ನು ಹೊರ ತೆಗೆದಿದ್ದಾರೆ.
Advertisement
Advertisement
ಹೆಣ್ಣು ಮಗು ಕೂಡ ತುಂಬಾ ವೀಕ್ ಆಗಿದ್ದ ಕಾರಣ ಮಗುವನ್ನು ಇನ್‍ಕ್ಯೂಬೇಟರ್ ಗೆ ಹಾಕಲಾಗಿತ್ತು. ಮೆದುಳಿನಲ್ಲಿ ರಕ್ತಸ್ರಾವದಿಂದಾಗಿ ಕೋಕಿಲಾಗೆ ಪ್ರಜ್ಞೆ ಇರಲಿಲ್ಲ. ಫೆ.14 ಅಂದರೆ ಪ್ರೇಮಿಗಳ ದಿನದಂದು ಬೆಳಗ್ಗೆ 3.37ಕ್ಕೆ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಫೋಷಿಸಿದರು.
Advertisement
ಈ ಶಾಕಿಂಗ್ ಸುದ್ದಿ ಕೇಳಿದ ಬಳಿಕ ಪತಿ ಗೌತಮ್ ರಾಜ್ ತನ್ನ ಪತ್ನಿ ಕೋಕಿಲಾಳ ದೇಹದ ಅಂಗಾಂಗವನ್ನು ದಾನ ಮಾಡಲು ನಿರ್ಧರಿಸಿದರು. ಹೃದಯ ಹಾಗೂ ಶ್ವಾಸಕೋಶವನ್ನು ಚೆನ್ನೈನ ಫೋರ್ಟಿಸ್ ಮಲಾರ್ ಆಸ್ಪತ್ರೆಗೆ ಸಾಗಿಸಲಾಯಿತು. ಕಣ್ಣು, ಕಿಡ್ನಿ ಹಾಗೂ ಲಿವರ್ ಸಿಎಂಸಿ ಆಸ್ಪತ್ರೆಗೆ ನೀಡಿದರು. ಇಂದು ಕೋಕಿಲಾ ತವರೂರಾದ ಪೊಲೂರಿನಲ್ಲಿ ಅಂತ್ಯಕ್ರಿಯೆ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv