ರಾಮನಗರ: ಗಂಡನ ಕಿರುಕುಳ ತಾಳಲಾರದೇ ತವರು ಮನೆಯಲ್ಲಿ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ ಮಂಜುನಾಥನಗರ ಬಡಾವಣೆಯಲ್ಲಿ ನಡೆದಿದೆ.
ಮೃತ ಗರ್ಭಿಣಿಯನ್ನು ಜಾನ್ಹವಿ (23) ಎಂದು ಗುರುತಿಸಲಾಗಿದ್ದು, ಇವರು 5 ತಿಂಗಳ ಗರ್ಭಿಣಿಯಾಗಿದ್ದರು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಕರ್ಣ ಅವರ ಜೊತೆ 9 ತಿಂಗಳ ಹಿಂದೆ ಜಾನ್ಹವಿ ವಿವಾಹವಾಗಿದ್ದರು. ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ ಬುದ್ಧದೇವ್ ಭಟ್ಟಾಚಾರ್ಯ
ಜಾನ್ಹವಿಗೆ ಪ್ರತಿನಿತ್ಯ ಪತಿ ಕರ್ಣ ಹೊಡೆದು ಬಡೆದು ಚಿತ್ರ ಹಿಂಸೆ ನೀಡುತ್ತಿದ್ದನು. ಹೀಗಾಗಿ ಹಿಂಸೆ ತಾಳಲಾಗದೇ ಒಂದು ತಿಂಗಳ ಹಿಂದೆ ಜಾನ್ಹವಿ ತವರು ಮನೆಗೆ ಬಂದಿದ್ದಳು. ಆದರೂ ಫೋನ್ ಮಾಡಿ ಜಾನ್ಹವಿಗೆ ಹಿಂಸೆ ನೀಡುತ್ತಿದ್ದ, ಈ ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ಯಾರೂ ಇಲ್ಲದ ವೇಳೆ ಜಾನ್ಹವಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಘಟನೆ ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಇದೀಗ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೆದ್ದಾರಿಯನ್ನು ಅಡವಿಟ್ಟು ಸಾಲ ಪಡೆದ ಪಾಕಿಸ್ತಾನ