ಬೆಂಗಳೂರು: ಮಾತೃ ಪೂರ್ಣ ಯೋಜನೆಯ ಅವ್ಯವಸ್ಥೆಯಿಂದಾಗಿ ಗರ್ಭಿಣಿ ಮತ್ತು ಮಕ್ಕಳು ಬಯಲಲ್ಲೇ ಊಟ ಮಾಡುತ್ತಿರುವ ಶೋಚನಿಯ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಪುಟ್ಟೇಗೌಡನಪಾಳ್ಯದಲ್ಲಿ ವರದಿಯಾಗಿದೆ.
ನೆಲಮಂಗಲ ವಿಧಾನ ಸಭಾ ಕ್ಷೇತ್ರದ ಪುಟ್ಟೇಗೌಡನಪಾಳ್ಯದಲ್ಲಿ ಮನಕಲುಕುವ ಘಟನೆ ನಡೆದಿದ್ದು, ಮಾತೃ ಪೂರ್ಣ ಯೋಜನೆ ಊಟ ವಿತರಣೆಯು ಅವ್ಯವಸ್ಥೆಯ ಆಗರವಾಗಿದೆ. ಅಂಗನವಾಡಿ ಕೇಂದ್ರದಲ್ಲಿ ನೀಡುವ ಮಾತೃಪೂರ್ಣ ಯೋಜನೆಯ ಊಟಕ್ಕಾಗಿ ಗರ್ಭಿಣಿ ಮತ್ತು ಮಕ್ಕಳು ಪರಿಪಾಟಲು ನಡೆಸುತ್ತಿದ್ದಾರೆ.
Advertisement
ಗ್ರಾಮದಲ್ಲಿ ಸಾಕಷ್ಟು ವರ್ಷದಿಂದ ಸೂಕ್ತ ಸೂರಿಲ್ಲದೆ ಗರ್ಭಿಣಿ ಮತ್ತು ಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಮೊದಲು ಗರ್ಭಿಣಿಯರಿಗೆ ಹಾಗೂ ಪುಟಾಣಿ ಮಕ್ಕಳಿಗೆ ನೇರವಾಗಿ ಮನೆಗೆ ಧವಸ-ಧಾನ್ಯ ನೀಡುತಿದ್ದರು. ಆದರೆ ಈಗ ಮಾತೃ ಪೂರ್ಣ ಯೋಜನೆಯ ಮೂಲಕ ಅಂಗನವಾಡಿ ಕೇಂದ್ರದಲ್ಲಿ ಊಟ ನೀಡುವ ವ್ಯವಸ್ಥೆಯಿಂದಾಗಿ ಅವ್ಯವಸ್ಥೆಗೆ ಕಾರಣವಾಗಿದೆ.
Advertisement
ಜೆಡಿಎಸ್ ಶಾಸಕ ಆಯ್ಕೆಯಾಗಿರುವ ಕ್ಷೇತ್ರದಲ್ಲಿ ಬಯಲಲ್ಲಿ ಊಟ ಮಾಡುವ ಪರಿಸ್ಥಿತಿ ಎದುರಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ನಿಮಗೆ ಮತ ನೀಡಿರುವ ಕ್ಷೇತ್ರದ ದುಸ್ಥಿತಿ ಹಾಗೂ ನೆಲಮಂಗಲ ಜೆಡಿಎಸ್ ಶಾಸಕ ಶ್ರೀನಿವಾಸ ಮೂರ್ತಿಯವರು ಇತ್ತ ಕಡೆ ಗಮನ ಹರಿಸಬೇಕೆಂದು ಗ್ರಾಮಸ್ಥರು ಮನವಿಮಾಡಿಕೊಂಡಿದ್ದಾರೆ.