ಅಮರಾವತಿ: 9 ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂದು ನಿಂದಿಸುವ ಜನರಿಂದ ತಪ್ಪಿಸಿಕೊಳ್ಳಲು, ಮಹಿಳೆ 9 ತಿಂಗಳು ಕುಟುಂಬಸ್ಥರನ್ನೇ ಮೂರ್ಖರನ್ನಾಗಿ ಮಾಡಿರುವ ಸುದ್ದಿಯಾಗಿದೆ.
ಮಹಿಳೆಯೊಬ್ಬರು 9 ವರ್ಷಗಳ ಹಿಂದೆ ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದರು. ಮದುವೆಯಾಗಿ 9 ವರ್ಷಗಳು ಕಳೆದ್ರೂ ಮಕ್ಕಳಾಗಿರಲಿಲ್ಲ. ಮಕ್ಕಳಿಲ್ಲವಾ ಎಂದು ನೆರೆಹೊರೆಯವರು, ಕುಟುಂಬಸ್ಥರು, ಸ್ನೇಹಿತರು ಕೇಳುತ್ತಿದ್ದರು. ಈ ವಿಚಾರವಾಗಿ ಮಾನಸಿಕವಾಗಿ ನೊಂದಿದ್ದ ಮಹಿಳೆ ಖತರ್ನಾಕ್ ಉಪಾಯವನ್ನು ಮಾಡಿ ಸಿಕ್ಕಿ ಬಿದ್ದಿದ್ದಾಳೆ.
ಗರ್ಭಧರಿಸಿದ್ದೇನೆ ಎಂದು ಅತ್ತೆಗೆ ಸುಳ್ಳು ಹೇಳಿ ತವರು ಮನೆಗೆ ಹೆರಿಗೆಗೆ ಹೋಗಿದ್ದಾಳೆ. ತನ್ನ ತಾಯಿಯೊಂದಿಗೆ 9 ತಿಂಗಳು ಗರ್ಭಿಣಿಯಂತೆಯೇ ನಟಿಸಿದ್ದಾಳೆ. ಪ್ರತಿ ತಿಂಗಳು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದಾಳೆ. ವೈದ್ಯರು ತನ್ನ ಹೆರಿಗೆಯ ದಿನಾಂಕವನ್ನು ಜನವರಿ 5 ಬುಧವಾರದಂದು ನೀಡಿದ್ದಾರೆ ಎಂದು ಎಲ್ಲರಿಗೂ ತಿಳಿಸಿದ್ದಾಳೆ. ಒಂದು ದಿನ ಮಧ್ಯರಾತ್ರಿ ತನಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಕುಟುಂಬದವರಿಗೂ ತಿಳಿಸಿದ್ದಾಳೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ
ಹೆರಿಗೆಯನ್ನೂ ಮಾಡಿಕೊಂಡಂತೆ ನಟನೆ ಕೂಡಾ ಮಾಡಿದ್ದಾಳೆ. ಬಳಿಕ ಮಗು ನೋಡಲು ಬಂದ ಮನೆಯವರಿಗೆ ಕಥೆ ಕಟ್ಟಿದ್ದಾಳೆ. ಹೆರಿಗೆಗೆ ಸಹಾಯ ಮಾಡಲು ಬಂದ ಇಬ್ಬರು ವ್ಯಕ್ತಿಗಳು ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾಳೆ. ಮಹಿಳೆಯ ಮಾತಿನ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಈ ವಿಚಾರವಾಗಿ ಪೊಲೀಸರು ಆಕೆಯನ್ನು ವಿಚಾರಿಸಿದಾಗ ನಿಜ ಗೊತ್ತಾಗಿದೆ. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ