ChikkaballapurDistrictsKarnatakaLatestMain Post

8 ತಿಂಗಳ ಗರ್ಭಿಣಿ ಅನುಮಾನಸ್ಪದವಾಗಿ ಸಾವು – ಗಂಡನ ವಿರುದ್ಧ ಕೊಲೆ ಆರೋಪ

ಚಿಕ್ಕಬಳ್ಳಾಪುರ: ನೇಣು ಬಿಗಿದ ಸ್ಥಿತಿಯಲ್ಲಿ 8 ತಿಂಗಳ ತುಂಬು ಗರ್ಭಿಣಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದ ಅಜಾದ್ ನಗರದಲ್ಲಿ ನಡೆದಿದೆ.

ಮಿಸ್ಬಾ ಕೌಸರ್(22) ಮೃತ ಮಹಿಳೆ. ಕಳೆದ ವರ್ಷವಷ್ಟೇ ಶಿಡ್ಲಘಟ್ಟ ಪಟ್ಟಣದ ಗಾಂಧೀನಗರದ ನಿವಾಸಿಯಾಗಿದ್ದ ಮಿಸ್ಬಾ ಕೌಸರ್ ಹಾಗೂ ಅಸಿಫ್ ಪಾಷಾ ವಿವಾಹವಾಗಿತ್ತು. ಆದರೆ ಬುಧವಾರ ತಡರಾತ್ರಿ ಗಂಡನ ಮನೆಯಲ್ಲಿ ಮಿಸ್ಬಾ ಕೌಸರ್ ಮೃತಪಟ್ಟಿದ್ದಾರೆ. ಇದನ್ನೂ ಓದಿ:  ಯಾವಾಗ ಸಿಎಂ ಸ್ಥಾನಕ್ಕೆ ಕೂರ್ತೀವಿ ಎಂದು ಕನಸು ಕಾಣ್ತಿದ್ದಾರೆ: ಡಿಕೆಶಿಗೆ ಟಾಂಗ್ ಕೊಟ್ಟ ಬಿ.ವೈ.ವಿಜಯೇಂದ್ರ

ವೇಲ್‍ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಇತ್ತ ಗಂಡ ಹಾಗೂ ಗಂಡನ ಮನೆಯವರು ಆತ್ಮಹತ್ಯೆ ಅಂತ ಹೇಳುತ್ತಿದ್ದರೆ, ಅತ್ತ ಕೌಸರ್ ಪೋಷಕರು ಕೊಲೆ ಮಾಡಲಾಗಿದೆ ಅಂತ ಆರೋಪಿಸಿದ್ದಾರೆ. ಶಿಡ್ಲಘಟ್ಟ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ:  ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗೆ ಸಕಾಲಕ್ಕೆ ಸಿಗದ ಚಿಕಿತ್ಸೆ

Leave a Reply

Your email address will not be published.

Back to top button