ಬಾಲಿವುಡ್ ಬ್ಯೂಟಿ ಸೋನಮ್ ಕಪೂರ್ ತಾಯಿಯಾಗಿದ್ದಾರೆ. ತನ್ನ ಹೊಸ ಬೇಬಿ ಬಂಪ್ ಫೋಟೋಶೂಟ್ಗಳಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಇದೀಗ ಸೋನಮ್ ಹೊಸ ಬೇಬಿ ಬಂಪ್ ಲುಕ್ಗ ಗಮನ ಸೆಳೆಯುತ್ತಿದೆ.
View this post on Instagram
ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ಸೋನಮ್, ಇದೀಗ ಸಿನಿಮಾ ವಿಚಾರಕ್ಕಿಂತ ತಮ್ಮ ಖಾಸಗಿ ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ಆನಂದ್ ಆಹುಜಾ ಜತೆ ಖುಷಿಯಿಂದ ಸೋನಮ್ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲೂ ಆಕ್ಟೀವ್ಯಿರುವ ಸೋನಮ್ ತಾವು ತಾಯಿಯಾಗುತ್ತಿರುವ ವಿಚಾರವನ್ನ ಅಭಿಮಾನಿಗಳಿಗೆ ತಿಳಿಸಿದ್ದರು. ಬಳಿಕ ಇದೀಗ ತಮ್ಮ ಭಿನ್ನ ಬೇಬಿ ಬಂಪ್ ಫೋಟೋಶೂಟ್ನಿಂದ ಗಮನ ಸೆಳೆದಿದ್ದರು. ಇದನ್ನೂ ಓದಿ: ಕೆಜಿಎಫ್ 2 ಸಿನಿಮಾ ನಂತರ ಇದೀಗ ಚಾರ್ಲಿ 777 ಸಿನಿಮಾದ ಇಮೋಜಿ
ರಾಣಿಯಂತೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದ ಸೋನಮ್, ಬಳಿಕ ಬ್ಲಾಕ್ ಕಲರ್ ಧಿರಿಸಿನಲ್ಲಿ ಬೇಬಿ ಬಂಪ್ ಶೂಟ್ನಲ್ಲಿ ಕಾಣಿಸಿಕೊಂಡರು. ಈಗ ಕನ್ನಡಿಯಲ್ಲಿ ಸೆಲ್ಫಿ ತೆಗೆದುಕೊಂಡು ತಮ್ಮ ಸದ್ಯ ಬೇಬಿ ಬಂಪ್ ಲುಕ್ ರಿವೀಲ್ ಮಾಡಿದ್ದಾರೆ. ಸೋನಮ್ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.