ಹೈದರಾಬಾದ್: ಬಾಲಿವುಡ್‍ನ ಬೇಡಿಕೆಯ ನಟಿ ಕರೀನಾ ಕಪೂರ್ ಗರ್ಭಿಣಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ಅಸಲಿಗೆ ಅವರು ತಮ್ಮ ಮುಂದಿನ ‘ಗುಡ್ ನ್ಯೂಸ್’ ಸಿನಿಮಾದಲ್ಲಿ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು..ಇತ್ತೀಚೆಗೆ ಕರೀನಾ ಅವರು ‘ಗುಡ್ ನ್ಯೂಸ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅವರು ಶೂಟಿಂಗ್‍ನಲ್ಲಿ ಬೂದು ಬಣ್ಣದ ಟಾಪ್ ಮತ್ತು ಟ್ರ್ಯಾಕ್ ಪ್ಯಾಂಟನ್ನ ಧರಿಸಿದ್ದು, ಉದ್ದನೆಯ ಒಂದು ಶರ್ಟ್ ಧರಿಸಿದ್ದಾರೆ. ಈ ಉಡುಪಿನಲ್ಲಿ ಅವರು ಗರ್ಭಿಣಿ ರೀತಿ ಕಾಣಿಸಿಕೊಂಡಿದ್ದಾರೆ. ಇದನ್ನೂ ನೋಡಿದ ಅಭಿಮಾನಿಗಳು ಅವರು ಮತ್ತೆ ಗರ್ಭಿಣಿಯಾಗಿದ್ದಾರೆ ಎಂದು ವೈರಲ್ ಮಾಡುತ್ತಿದ್ದಾರೆ.
Advertisement
Advertisement
ಈ ಸಿನಿಮಾವನ್ನು ಕರಣ್ ಜೋಹರ್, ಅಕ್ಷಯ್ ಕುಮಾರ್ ಹಾಗೂ ವಯಕಾಮ್ ಮೋಷನ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ನಟ ಅಕ್ಷಯ್ ಕುಮಾರ್, ದಿಲ್‍ಜಿತ್ ದೋಸನ್‍ಜ್ ಹಾಗೂ ಕೈರಾ ಅಡ್ವಾಣಿ ಸಿನಿಮಾದಲ್ಲಿ ಇದ್ದಾರೆ. ರಾಜ್ ಮೆಹ್ತಾ ನಿರ್ದೇಶನದಲ್ಲಿ ‘ಗುಡ್‍ನ್ಯೂಸ್’ ಚಿತ್ರವನ್ನು ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಇದೇ ವರ್ಷ ಸೆಪ್ಟೆಂಬರ್ 6 ರಂದು ಬಿಡುಗಡೆಯಾಗಲಿದೆ.
Advertisement
ಸದ್ಯಕ್ಕೆ ಕರೀನಾ ಕಪೂರ್ ಗುಡ್‍ನ್ಯೂಸ್ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಬಳಿಕ ಕರಣ್ ಜೋಹರ್ ನಿರ್ದೇಶನದ ‘ತಾಕ್ತ್’ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಈ ಸಿನಿಮಾದಲ್ಲಿ ರಣ್‍ವೀರ್ ಸಿಂಗ್, ಅಲಿಯಾ ಭಟ್, ವಿಕಿ ಕೌಶಲ್, ಅನಿಲ್ ಕಪೂರ್, ಭೂಮಿ ಪಡ್ನೇಕರ್ ಮತ್ತು ಜಾಹ್ನವಿ ಕಪೂರ್ ಕೂಡ ನಟಿಸಲಿದ್ದಾರೆ.
Advertisement
ನಟಿ ಕರೀನಾ ಕಪೂರ್ ಅವರಿಗೆ ಈಗಾಗಲೇ ಎರಡು ವರ್ಷದ ತೈಮೂರ್ ಅಲಿ ಖಾನ್ ಮಗನಿದ್ದಾನೆ. ತಾಯಿಯಾಗಿದ್ದರೂ ಕರೀನಾ ಅವರು ದೇಹದ ಸೌಂದರ್ಯವನ್ನು ವರ್ಕೌಟ್ ಮೂಲಕ ಹಾಗೆಯೇ ಉಳಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv