ರಾಯಚೂರು: ಅಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯನ್ನ ಟಂಟಂನಲ್ಲಿ ಸಾಗಿಸಿದ ಘಟನೆ ರಾಯಚೂರು ತಾಲೂಕಿನ ಚಂದ್ರಬಂಡದಲ್ಲಿ ನಡೆದಿದೆ.
ಇಲ್ಲಿನ ಕಟ್ಲಾಟಕೂರ್ ಗ್ರಾಮದ ಸರಸ್ವತಿ ಹೆರಿಗೆ ನೋವಿನಿಂದ ನರಳುತ್ತಿದ್ದಳು. ಚಂದ್ರಬಂಡಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ವೈದ್ಯರು, ಅಂಬುಲೆನ್ಸ್ ಇಲ್ಲದೆ ಗರ್ಭಿಣಿ ಪರಸ್ಥಿತಿ ಗಂಭೀರವಾಗಿತ್ತು. ರಕ್ತದೊತ್ತಡ ಹೆಚ್ಚಾಗಿದ್ದ ಕಾರಣ ನರ್ಸ್ ಗೆ ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಟಂಟಂನಲ್ಲೇ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಗರ್ಭಿಣಿಯನ್ನ ದಾಖಲಿಸಲಾಗಿದೆ.
Advertisement
Advertisement
ಎಷ್ಟು ಬಾರಿ ಕರೆ ಮಾಡಿದರು ಅಂಬುಲೆನ್ಸ್ ಬಾರದೆ ಇರುವುದು ಜಿಲ್ಲೆಯಲ್ಲಿ ಆರೋಗ್ಯ ಸೌಲಭ್ಯಗಳು ಎಷ್ಟರ ಮಟ್ಟಿಗೆ ಇವೆ ಅನ್ನೋದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಒಡಿಸ್ಸಾ ಮೂಲದ ಗಿರಿಧಾರಿ ಹಾಗೂ ಸರಸ್ವತಿ ದಂಪತಿ ಕಟ್ಲಾಟಕೂರ್ ಗ್ರಾಮದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದರು. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಡ ಕೂಲಿ ಕಾರ್ಮಿಕ ದಂಪತಿ ಚಂದ್ರಬಂಡಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದಾರೆ. ಆದರೆ ಅಲ್ಲಿ ಸಮರ್ಪಕ ಚಿಕಿತ್ಸೆ ಸಿಕ್ಕಿಲ್ಲ.
Advertisement
ಆರೋಗ್ಯ ಸಚಿವ ಶ್ರೀರಾಮುಲು ಉಸ್ತುವಾರಿ ಜಿಲ್ಲೆಯಲ್ಲಿನ ಅಂಬುಲೆನ್ಸ್ ಹಾಗೂ ವೈದ್ಯರ ಕೊರತೆ ರೋಗಿಗಳನ್ನ ಪರದಾಡುವಂತೆ ಮಾಡಿದೆ. ಸದ್ಯ ರಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಗರ್ಭಿಣಿ ಸರಸ್ವತಿ ಚಿಕಿತ್ಸೆ ಪಡೆಯುತ್ತಿದ್ದಾಳೆ.