ಚಿಕ್ಕಮಗಳೂರು: ಹೆರಿಗೆ ನಂತರ ತೀವ್ರ ರಕ್ತಸ್ರಾವದಿಂದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಜಿಲ್ಲೆಯ ಕೊಪ್ಪ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ನರ್ಸ್‍ಗಳ ನಿರ್ಲಕ್ಷ್ಯದಿಂದ ಚೊಚ್ಚಲ ಹೆರಿಗೆಯಾಗಿದ್ದ ತಾಯಿ ತೀವ್ರ ರಕ್ತಸ್ರಾವಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇದೀಗ ಅಮ್ಮನಿಲ್ಲದೆ ಹಸುಗೂಸು ತಬ್ಬಲಿಯಾಗಿದೆ.
Advertisement
Advertisement
ಸೋಮವಾರ ರಾತ್ರಿ ಕೊಪ್ಪ ತಾಲೂಕಿನ ನಾರ್ವೆ ಸಮೀಪದ ಹುಲುಗಾರು ಗ್ರಾಮದ ನಿವಾಸಿ 24 ವರ್ಷದ ಉಷಾ ಎಂಬವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಕುಟುಂಬಸ್ಥರು ಉಷಾರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವವಹಿಸುತ್ತಿದ್ದ ಡಾ. ಬಾಲಕೃಷ್ಣ ಅವರ ಬೇಜವಾಬ್ದಾರಿಯಿಂದಲೇ ಗರ್ಭಿಣಿ ಮೃತಪಟ್ಟಿರುವುದು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
Advertisement
ವೈದ್ಯರಲ್ಲಿ ಎಷ್ಟೇ ವಿನಂತಿಸಿಕೊಂಡರು ಎಚ್ಚರ ವಹಿಸದೇ ನರ್ಸ್‍ಗಳ ಕೈಯಲ್ಲಿ ಹೆರಿಗೆ ಮಾಡಿಸಿದ್ದಾರೆ. ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವದಿಂದ ಉಷಾ ಸಾವನ್ನಪ್ಪಿದ್ದಾರೆ. ಮಹಿಳೆಗೆ ರಕ್ತ ಸ್ರಾವ ಹೆಚ್ಚಾಗಿದ್ದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಮಹಿಳೆಯನ್ನ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ಉಷಾರ ಸಂಬಂಧಿಕರು ವೈದ್ಯರ ವಿರುದ್ಧ ದೂರು ನೀಡಿ, ಬಾಲಕೃಷ್ಣ ಅವರ ಅಮಾನತ್ತಿಗೆ ಒತ್ತಾಯಿಸಿದ್ದಾರೆ.