ಹಾಸನ: ನೀವು ನನಗೆ ಚುನಾವಣೆಯಲ್ಲಿ ಮತ ಹಾಕುವುದಿಲ್ಲ, ಆದರೂ ನಿಮಗೆ ನಾನು ಕೆಲಸ ಮಾಡಿ ಕೊಡುತ್ತೇನೆ ಎಂದು ಶಾಸಕ ಪ್ರೀತಂಗೌಡ ಹೇಳಿದರು.
ನಗರದ 30-31 ನೇ ವಾರ್ಡ್ಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 40 ವರ್ಷಗಳಿಂದ ನೆಲೆಸಿರುವ ಜನರಿಗೆ ಹಕ್ಕುಪತ್ರ ಸಂಬಂಧ ಹಾಗೂ ಅವರ ಸಮಸ್ಯೆ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆ ಇದಾಗಿತ್ತು. ಕಳೆದ ಬಾರಿ ಚುನಾವಣೆಯಲ್ಲಿ ನೀವು ನನಗೆ ಮತ ಹಾಕಿಲ್ಲ. ಮುಂದಿನ ಚುನಾವಣೆಯಲ್ಲೂ ಮತ ಹಾಕುತ್ತೀರಿ ಎಂಬ ನಂಬಿಕೆ ನನಗಿಲ್ಲ. ಆದರೂ ನಾನು ನಿಮಗೆ ಕೆಲಸ ಮಾಡಿಕೊಡುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: 40 ವರ್ಷಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ- ಸಿಧು ಜೊತೆಗಿನ ಮೊದಲ ಭೇಟಿ ನೆನೆದ ರಾಗಾ
ನೀವು 2023ರ ಚುನಾವಣೆಯಲ್ಲಿ ಮತ ಹಾಕದಿದ್ದರೂ 2028ಕ್ಕೆ ಆದರೂ ಮತ ಹಾಕುತ್ತೀರಿ. ನನಗೇನು ತುರ್ತು ಮತ ಹಾಕೋದು ಏನೂ ಬೇಡ. ನನಗೆ ಅಥವಾ ಬಿಜೆಪಿಗೆ ಮತ ಹಾಕುವುದಿಲ್ಲವೇ ಬೇಡ. ಆದರೆ ಪ್ರೀತಂಗೌಡ ಅಥವಾ ಬಿಜೆಪಿ ಹೆಸರು ತೋರಿಸಿ ಅವರಿಗೆ ವಿರುದ್ಧವಾಗಿ ಮತ ಕೇಳುವವರಿಗೆ ಮಾತ್ರ ಮತ ಹಾಕಬೇಡಿ. ನಿಮ್ಮ ಕಷ್ಟಕ್ಕೆ ಆದವರಿಗೆ ನೀವು ಮತ ಹಾಕಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಿಜೆಪಿ ಶಾಸಕನಿಗೆ ಮಹಿಳೆಯಿಂದ ಬ್ಲ್ಯಾಕ್ಮೇಲ್ – ತಮಿಳುನಾಡಿನಲ್ಲಿ ನಾಲ್ವರು ವಶ
ಪ್ರೀತಂ ಗೌಡ ವಿರುದ್ಧ ಮತ ಹಾಕಿ ಅನ್ನುವವರನ್ನು ನಿಮ್ಮ ಹತ್ತಿರ ಸೇರಿಸಬೇಡಿ. ಇದನ್ನೇ 3 ಸಾರಿ ಹೇಳುತ್ತಿದ್ದೇನೆ ಎಲ್ಲರಿಗೂ ತಲೆಗೆ ಹೋಗಲಿ ಅಂತ ತಾಕೀತು ಮಾಡುತ್ತಿದ್ದೇನೆ. ಹಕ್ಕು ಪತ್ರ ನೀಡಿ ಪರೋಕ್ಷವಾಗಿ ಬೇರೆಯವರಿಗೆ ಮತ ಹಾಕಬಾರದು ಅಂತ ತಾಕೀತು ಮಾಡುತ್ತಿದ್ದೇನೆ ಎಂದರು.