– ಆರ್‌ಎಸ್‌ಎಸ್ ದೇಶವನ್ನು ಕಟ್ಟಲು ಯುವಕರನ್ನು ಬೆಳೆಸುವ ಕಾರ್ಖಾನೆ
ಹಾಸನ: ಅಧಿಕಾರಕ್ಕಾಗಿ ಜೆಡಿಎಸ್ ಜೊತೆ ರಾಜಿಯಾಗಿ, ಅವರ ಮುಲಾಜಿಗೆ ಒಳಗಾಗಿ ಅವರು ಹೇಳಿದ್ದನ್ನೆಲ್ಲಾ, ಕೇಳುವಂತಹ ಪರಿಸ್ಥಿತಿ ನಮ್ಮ ಪಕ್ಷಕ್ಕೆ ಆಗಲಿ, ನಾಯಕರಿಗಾಗಲಿ, ಸಂಘಟನೆಗಾಗಲಿ ಬರಬಾರದು ಎನ್ನುವುದು ನನ್ನ ದಿಟ್ಟ ನಿಲುವು ಎಂದು ಶಾಸಕ ಪ್ರೀತಂಗೌಡ ಸ್ವಪಕ್ಷದ ನಾಯಕರಿಗೇ ಕಿವಿಮಾತು ಹೇಳಿದ್ದಾರೆ.
ಆರ್‌ಎಸ್‌ಎಸ್ ಬಗ್ಗೆ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಟೀಕೆ ಮಾಡಿರುವ ವಿಚಾರಕ್ಕೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್ ದೇಶವನ್ನು ಕಟ್ಟಲು ಯುವಕರನ್ನು ಬೆಳೆಸುವ ಕಾರ್ಖಾನೆ. ದೇಶ ಕಟ್ಟುವುದೇ ತಪ್ಪು ಎನ್ನುವುದಾದರೆ ಸಾರ್ವಜನಿಕರು ಯೋಚನೆ ಮಾಡಬೇಕಾದ ಸಮಯ ಇದು. ಇದರಲ್ಲಿ ಯಾರ್ಯಾರ ಮನಸ್ಥಿತಿ ಏನು ಎಂಬುದು ಗೊತ್ತಾಗುತ್ತೆ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ನಿಮ್ಮ ಪಕ್ಷದ ಫ್ಯಾಮಿಲಿ ಬ್ಯುಸಿನೆಸ್‍ಗೆ ಸಂಘದಲ್ಲಿಯೇ ತರಬೇತಿ ನೀಡಲಾಗ್ತಿದೆಯೇ: ಕಟೀಲ್‍ಗೆ ಹೆಚ್.ಕೆ.ಕುಮಾರಸ್ವಾಮಿ ಪ್ರಶ್ನೆ
ಇದೇ ವೇಳೆ ಮುಖ್ಯಮಂತ್ರಿ ಸೇರಿದಂತೆ ಸ್ವಪಕ್ಷದ ಕೆಲವು ನಾಯಕರು ಜೆಡಿಎಸ್ ಜೊತೆ ಸಾಫ್ಟ್ ಕಾರ್ನರ್ ಹೊಂದಿರುವ ಬಗ್ಗೆಯೂ ವಿರೋಧಿಸಿದ ಅವರು, ಬಿಜೆಪಿ ಯಾವುದೋ ಒಂದು ಭಾಗದಲ್ಲಿ ಅಧಿಕಾರ ಹಿಡಿಯಲು ಸಾಫ್ಟ್ ಕಾರ್ನರ್ ತೋರಿಸಿದೆ. ಜೆಡಿಎಸ್ ಅನ್ನು ರಾಜಕೀಯವಾಗಿ ಒಂದು ಮೈಲಿ, ಒಂದು ಕಿಲೋಮೀಟರ್, ಒಂದು ಮೀಟರ್ ದೂರ ಇಡಬೇಕು. ನಮ್ಮನ್ನು ಬಳಸಿಕೊಂಡು ಅವರ ಬೇಳೆಯನ್ನು ಬೇಯಿಸಿಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಅಧಿಕಾರ ಹಿಡಿಯಲು ಅವರನ್ನು ಓಲೈಕೆ ಮಾಡಲು ಹೋದ್ರೆ ನಮ್ಮ ಬುಡಕ್ಕೆ ಬರುತ್ತೆ. ಅಧಿಕಾರ ಹಿಡಿಯಲು ಐದಲ್ಲ ಹತ್ತು ವರ್ಷ ಕಾಯೋಣ. ನಮ್ಮ ರಾಜ್ಯ ನಾಯಕರು, ರಾಜ್ಯಾಧ್ಯಕ್ಷರು, ಮಂತ್ರಿಗಳು, ಮುಖ್ಯಮಂತ್ರಿಗಳು ಯಾವ್ಯಾವ ಸಂದರ್ಭದಲ್ಲಿ ಜೆಡಿಎಸ್ ಬಗ್ಗೆ ಮೃದು ಧೋರಣೆ ತೋರಿದ್ದರು ಅವರಿಗೆ ಕುಮಾರಸ್ವಾಮಿ ಅವರು ಒಂದು ಸಂದೇಶ ನೀಡಿದ್ದಾರೆ ಎಂದರು. ಇದನ್ನೂ ಓದಿ: ರಾಷ್ಟ್ರೀಯ ಹಸಿರು ನ್ಯಾಯಾಲಯಕ್ಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಅಧಿಕಾರವಿದೆ: ಸುಪ್ರೀಂಕೋರ್ಟ್
ಯಾವುದೋ ಹಾಸನ ಮುನ್ಸಿಪಾಲಿಟಿ ಅಧಿಕಾರಕ್ಕೋಸ್ಕರ ನಾನು ಹೊಂದಾಣಿಕೆ ರಾಜಕೀಯ ಮಾಡಲ್ಲ. ಜೆಡಿಎಸ್ ಅವರ ಮಿಷನ್ ಎಂದರೆ ಬಿಜೆಪಿ-ಕಾಂಗ್ರೆಸ್ ನೂರರ ಮೇಲೆ ಬರಬಾರದು. ಆಗ ಯಾವ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದು ಅವರ ಗುಣ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಬೇರೆಯವರು ಮಾತನಾಡಲ್ಲ, ಪ್ರೀತಂಗೌಡ ನೇರವಾಗಿ ಮಾತನಾಡುತ್ತಾನೆ ಎಂದು ಶಾಸಕರು ಕಿಡಿಕಾರಿದ್ದಾರೆ.
ಆರ್‌ಎಸ್‌ಎಸ್ ಪರ, ವಿರುದ್ಧ ರಾಜಕೀಯ ನಾಯಕರ ಹೇಳಿಕೆಗಳಿಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ