– ಹೆಚ್.ಡಿ.ರೇವಣ್ಣ ವಿರುದ್ಧ ಪರೋಕ್ಷ ವಾಗ್ದಾಳಿ
ಹಾಸನ: ಶ್ರೇಯಸ್ ಅವರೊಂದಿಗೆ ಹೊಳೆನರಸೀಪುರದ (Holenarasipura) ಶ್ರೇಯಸ್ಸು ಕೂಡ ಅಡಗಿದೆ ಎಂದು ಮಾಜಿ ಶಾಸಕ ಪ್ರೀತಂ ಗೌಡ ಹೇಳಿದರು.
ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಭುವನೇಶ್ವರಿ ರಥ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಶ್ರೇಯಸ್ ಅವರೊಂದಿಗೆ ಹೊಳೆನರಸೀಪುರದ ಶ್ರೇಯಸ್ಸು ಕೂಡ ಅಡಗಿದೆ. ಅದರ ಶ್ರೇಯಸ್ಸು ಶ್ರೇಯಸ್ ಪಟೇಲ್ ಅವರಿಗೆ ಸಲ್ಲುತ್ತದೆ. ನಿಮ್ಮನ್ನೆಲ್ಲಾ ನೋಡಿದ ಮೇಲೆ ಹೊಳೆನರಸೀಪುರಕ್ಕೆ ಸ್ವಾತಂತ್ರ‍್ಯ ಸಿಕ್ಕಿದೆ ಅನ್ನಿಸಿದೆ. 2024ರ ನಂತರ ವಾಸ್ತು, ದಿಕ್ಕು, ದಿಸೆ ಎಲ್ಲಾ ಬದಲಾಗಿದೆ ಎಂದು ಹೇಳಿದರು.ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ 2,900 ಎಕ್ರೆಗೆ ವಕ್ಫ್ ನೋಟಿಸ್; ಬಿಎಸ್‌ವೈಗೆ ಮುಖಭಂಗ ಮಾಡಲು ಯತ್ನಾಳ್ ಹೋರಾಟ: ಪರಮೇಶ್ವರ್
ಇಲ್ಲಿಯ ತನಕ ಯಾವುದೇ ಕಾರ್ಯಕ್ರಮ ನಡೆಯುವಾಗ ಯಾವುದೋ ಒಂದು ಮನೆಗೆ ಅಥವಾ ಒಂದು ತೋಟದಲ್ಲಿ ಲೈಟ್ ಇರುತ್ತಿತ್ತು. ಇಡೀ ಹೊಳೆನರಸೀಪುರದಲ್ಲಿ ಲೈಟ್ ಇರುವುದನ್ನು ನೋಡಿರಲಿಲ್ಲ. ಈಗ ಹೊಳೆನರಸೀಪುರ ಶ್ರೇಯಸ್ ಪಟೇಲ್ ಅವರ ತಾತನ ಕಾಲಕ್ಕೆ ಕೊಂಡ್ಯೊಯ್ದಿದೆ. ಪುಟ್ಟಸ್ವಾಮಿಗೌಡರನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ ಎಂದರು.
ರಾಜಕಾರಣ ಬರುತ್ತದೆ. ಹೋಗುತ್ತದೆ. ನಾನು ಒಂದು ಪಕ್ಷದ ಪ್ರಮುಖ ಹುದ್ದೆಯಲ್ಲಿದ್ದೇನೆ. ಶ್ರೇಯಸ್ ಪಟೇಲ್ ಬೇರೆ ಪಕ್ಷದಿಂದ ಸಂಸದರಾಗಿದ್ದಾರೆ. ಮಾನವೀಯತೆ ಎನ್ನುವುದು ಬಹಳ ಮುಖ್ಯವಾದ್ದದ್ದು. ಇದೇ ರೀತಿ ಮುಂದುವರಿದುಕೊಂಡು ಹೋಗಲಿ. ಹೊಳೆನರಸೀಪುರವನ್ನು ಮಾದರಿಯನ್ನಾಗಿ ಮಾಡೋಣ. ಎಲ್ಲಿಯ ತನಕ ಶ್ರೇಯಸ್ ಪಟೇಲ್ ಅವರಿಗೆ ಅಧಿಕಾರ ಕೊಡುತ್ತೀರೊ ನಾನು ಯಾವುದೇ ಪಕ್ಷದಲ್ಲಿರಲಿ ಇದೇ ತರ ಪ್ರತಿ ವರ್ಷ ಬರುತ್ತೇನೆ ಎಂದು ತಿಳಿಸಿದರು.ಇದನ್ನೂ ಓದಿ: ಓವರ್‌ಲೋಡ್‌ನಿಂದ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ – ಓರ್ವ ಸಾವು