-ಯುವಕರಿಂದ ಮುದುಕರವರೆಗೂ ವೀಡಿಯೋ ಇದೆ, ಅದೇ ಅಪರಾಧ ಅಂದ್ರೆ ಹೇಗೆ?
– ನಮ್ಮ ಕಾರ್ಯಕರ್ತರ ವಿಚಾರ ಬಂದ್ರೆ ಬೆನ್ನು ತೋರಿಸಿ ಹೋಗಲ್ಲ
Advertisement
ಬೆಂಗಳೂರು: ಹಾಸನದಲ್ಲಿ ಯುವಕರಿಂದ ಮುದುಕರವರೆಗೂ ಎಲ್ಲರ ಬಳಿಯೂ ಪ್ರಜ್ವಲ್ ಪ್ರಕರಣದ ವೀಡಿಯೋ (Prajwal Revanna Pendrive case) ಇದೆ. ಎಲ್ಲರನ್ನೂ ಬಂಧನ ಮಾಡೋಕಾಗುತ್ತಾ? ನಮ್ಮ ಕಚೇರಿಯಲ್ಲಿ 24 ವರ್ಷದ ಅಮಾಯಕ ಯುವಕನ ಬಳಿ ಅದೇ ರೀತಿ ವೀಡಿಯೋ ಬಂದಿದೆ. ಅದನ್ನೇ ಅಪರಾಧ ಅಂದ್ರೆ ಹೇಗೆ? ವೀಡಿಯೋ ನೋಡಿದವರೆಲ್ಲ ತಪ್ಪಿತಸ್ಥರು ಅಂದ್ರೆ ಹಾಸನದ 15 ಲಕ್ಷ ಜನ ತಪ್ಪಿತಸ್ಥರಾಗ್ತಾರೆ. ತನಿಖೆ ಸರಿಯಾದ ರೀತಿಯಲ್ಲಿ ಆಗಬೇಕು ಎಂದು ಮಾಜಿ ಶಾಸಕ ಪ್ರೀತಂಗೌಡ (Preetham Gowda) ಹೇಳಿದ್ದಾರೆ.
Advertisement
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರಜ್ವಲ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ. ಈ ಬಗ್ಗೆ ಚರ್ಚೆಯನ್ನೂ ನಾನು ಮಾಡಿಲ್ಲ. ನಮ್ಮ ಕಾರ್ಯಕರ್ತರ ಬಂಧನ ಆಗಿದ್ದಕ್ಕೆ ಮಾತನಾಡುತ್ತಿದ್ದೇನೆ. ನಮಗೂ ವೀಡಿಯೋಗೂ ಸಂಬಂಧ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಸುಪ್ರೀಂನಿಂದಲೂ ರಿಲಿಫ್ – ಸಿಎಂ ಸ್ಥಾನದಿಂದ ಕೇಜ್ರಿವಾಲ್ ಪದಚ್ಯುತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
Advertisement
Advertisement
ಹಾಸನದಲ್ಲಿ ಹೀಗಾಗಬಾರದಿತ್ತು ಎಂದು ಹಲವರು ಮಾತಾನಾಡುತ್ತಿದ್ದಾರೆ. ನಾನು ಯಾರೇ ಸಿಕ್ಕಿದ್ರೂ ವೀಡಿಯೋ ಇದ್ರೆ ಹಂಚಬೇಡಿ, ಇಟ್ಕೋಬೇಡಿ, ಅದು ನೀಚ ಕೆಲಸ ಎಂದಿದ್ದೇನೆ. ನಮಗೆ ಜವಾಬ್ದಾರಿ ಇದೆ, ವೀಡಿಯೋ ಹಂಚಬೇಡಿ, ಡಿಲೀಟ್ ಮಾಡಿ ಎಂದೇ ನಮ್ಮ ಕಾರ್ಯಕರ್ತರಿಗೂ ಹೇಳಿದ್ದೇನೆ ಎಂದರು.
ನಮ್ಮ ಕಾರ್ಯಕರ್ತರ ವಿಚಾರ ಬಂದಾಗ ನಾನು ಬೆನ್ನು ತೋರಿಸಿ ಹೋಗುವುದಿಲ್ಲ. ಭಾನುವಾರ ಬಂಧಿತರಾದವರು ಅಮಾಯಕರು, ಅಮಾಯಕರ ಬಂಧನವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಯಾವ ಕಾರಣಕ್ಕೂ ಸರ್ಕಾರವನ್ನ ಆಪರೇಷನ್ ಮಾಡೋಕೆ ಆಗಲ್ಲ: ಸಿದ್ದರಾಮಯ್ಯ