ಎಲ್ರೂ ರಾಜಕೀಯಕ್ಕೆ ಹೋದ್ರೆ, ಮನೆ ನೋಡ್ಕೊಳ್ಳೋರು ಯಾರು: ದೊಡ್ಡ ಗೌಡ್ರ ಕುಟುಂಬಕ್ಕೆ ಪ್ರೀತಂ ಗೌಡ ಪ್ರಶ್ನೆ

Public TV
1 Min Read
hassan bjp

ಹಾಸನ: ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣಾ ಕಾವು ಏರುತ್ತಿದ್ದು, ಚನ್ನರಾಯಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಹಾಸನದ ಶಾಸಕ ಪ್ರೀತಮ್ ಗೌಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

hassan bjp1

ಜಿಲ್ಲೆಯಲ್ಲಿ ದೇವೇಗೌಡರ ಕುಟುಂಬ ರಾಜಕಾರಣ ಮಿತಿಮೀರಿದೆ. ದೇವೇಗೌಡರನ್ನು ತುಮಕೂರಿಗೆ ಕಳುಹಿಸಿದ್ದರು. ಹೊಳೆನರಸೀಪುರದಲ್ಲಿ ಮಗ-ಸೊಸೆ, ಇಬ್ಬರು ಮಕ್ಕಳು ಸೇರಿ ನಮ್ಮ ಗೌಡರನ್ನು ಸೋಲಿಸಿಬಿಟ್ಟರು. ಹೀಗಾಗಿ ಅವರನ್ನು ರಾಜ್ಯಸಭೆಗೆ ಕಳಿಸಲಾಯಿತು. ಮತ್ತೆ ಇನ್ನೊಬ್ಬರನ್ನು ಹಾಸನದ ಲೋಕಸಭೆಗೆ ಕಳುಹಿಸಲಾಯಿತು. ಇದೀಗ ಮತ್ತೊಬ್ಬ ಮೊಮ್ಮಗ ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ಒಂದೇ ಮನೆಯವರು ಎಲ್ಲಾ ಕಡೆ ಇರಬೇಕು ಅಂತ ಹೇಳಿ ದೊಡ್ಡಗೌಡರು ತೀರ್ಮಾನ ಮಾಡಿದಂತಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಭವಿಷ್ಯದಲ್ಲಿ ಮುರುಗೇಶ ನಿರಾಣಿ ಸಿಎಂ ಆಗಬಹುದು: ಹಾಲಪ್ಪ ಆಚಾರ್

ವಿಧಾನ ಪರಿಷತ್ ಸ್ಥಾನ ಖಾಲಿ ಇದೆ. ಆದ್ದರಿಂದ ಸೂರಜ್ ಅವರನ್ನು ವಿಧಾನ ಪರಿಷತ್ ಅಭ್ಯರ್ಥಿಯನ್ನಾಗಿ ಮಾಡಿರಬೇಕು ಎಂದು ಜೆಡಿಎಸ್ ಕಾರ್ಯಕರ್ತರು ನನ್ನ ಬಳಿ ಹೇಳಿಕೊಂಡಿದ್ದಾರೆ. ʼಎಲ್ಲರನ್ನೂ ನಾಲ್ಕು ಮನೆಗೂ ಕಳುಹಿಸಿದ್ದೇವೆ. ಹಾಗಾದರೆ ಇವರು ಇರೋ ಹೊಳೆನರಸೀಪುರ ಮನೆ ಖಾಲಿಯಾಗಿಬಿಡುತ್ತದೆ. ಮನೆ ನೋಡ್ಕೊಳ್ಳೋಕೆ ಯಾರಾದರೂ ಒಬ್ಬ ಮಗ ಇರಲೇಬೇಕಲ್ಲವೇʼ ಅಂತ ನಾನು ಪ್ರಶ್ನಿಸಿದ್ದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ರಾಜಕೀಯದಲ್ಲಿ ಇಂತದೆಲ್ಲಾ ಇದೆ ಎಂದು ಗೊತ್ತಾಗಿದ್ದರೆ ದೇವರಾಣೆ ರಾಜಕೀಯಕ್ಕೆ ಬರುತ್ತಿರಲಿಲ್ಲ: ಕೆಜಿಎಫ್ ಬಾಬು

HDD DEVEGOWDA

ದೆಹಲಿಗೆ ತಾತ ಹೋಗಿದ್ದಾರೆ. ಲೋಕಸಭೆಗೆ ಅಂತ ಮೊಮ್ಮಗ ದೆಹಲಿಗೆ ಹೋಗುತ್ತಾರೆ. ಇನ್ನು ಪಾಪ ರೇವಣ್ಣ ಅವರು ವಿಧಾನಸಭೆಗೆ ಹೋಗಲೇಬೇಕು. ಭವಾನಿ ಅಕ್ಕ ಜಿಲ್ಲಾ ಪಂಚಾಯಿತಿ ಗೆದ್ದಿದ್ದರೂ ಹಾಸನಕ್ಕೆ ಬರ್ತಾ ಇರಬೇಕು. ಮನೆ ಅನಾಥ ಆಗಬಾರದು. ಆದ ಕಾರಣ ಮನೆಗೆ ಒಬ್ಬ ಮಗ ಇರಲಿ. ನಿಮ್ಮ ಸೂರಜ್ ರೇವಣ್ಣ ಅವರನ್ನು ಮನೆ ಮಗನಾಗಿ ಇಟ್ಟುಕೊಳ್ಳಲಿ. ಆದ್ದರಿಂದ ವಿಶ್ವನಾಥ್‌ ಅವರಿಗೆ ವೋಟು ಹಾಕಿ ಅಂತ ಜೆಡಿಎಸ್ ಕಾರ್ಯಕರ್ತರಲ್ಲಿ ಕೇಳಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *