ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ವರ್ಷದ ಭವಿಷ್ಯವಾಣಿ ಮೈಲಾರಲಿಂಗೇಶ್ವರನ (Mylaralingeshwar) ಕಾರ್ಣಿಕೋತ್ಸವ ನಡೆಯಿತು. 15 ಅಡಿ ಬಿಲ್ಲನ್ನೇರಿದ ರಾಮಪ್ಪ ಗೊರವಯ್ಯ ಸದ್ದಲೇ ಎನ್ನುತ್ತಲೆ ಅಂಬಲಿ ಹಳಿಸಿತು, ಕಂಬಳಿ ಬೀಸಿತಲೆ ಪರಾಕ್ ಎಂದು ಈ ವರ್ಷದ ಕಾರ್ಣಿಕ (prediction) ನುಡಿದಿದ್ದಾರೆ.
ಸುಮಾರು ವರ್ಷಗಳಿಂದ ವರ್ಷಕ್ಕೊಮ್ಮೆ ನಡೆಯುವ ಕಾರ್ಣಿಕವನ್ನು ಕೇಳಲು ಲಕ್ಷಾಂತರ ಜನ ಭಕ್ತರು ಜಮಾಯಿಸುತ್ತಾರೆ. ಭಾರತ ಹುಣ್ಣಿಮೆಯ ಸಮಯದಲ್ಲಿ ನಡೆಯುವ ಜಾತ್ರೆಯ ವೇಳೆ ರಾಮಪ್ಪ ಗೊರವಯ್ಯ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಿಲ್ಲನ್ನೇರಿ ಡೆಂಕನಮರಡಿಯಲ್ಲಿ ಸದ್ದಲೇ ಅನ್ನುತ್ತ ಕಾರ್ಣಿಕ ನುಡಿಯುತ್ತಾರೆ.
Advertisement
Advertisement
ಗೊರವಯ್ಯ ನುಡಿಯುವ ಕಾರ್ಣಿಕವನ್ನು ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಣೆ ಮಾಡುತ್ತಾರೆ. ಈ ವರ್ಷ ಗೊರವಯ್ಯ ನುಡಿದ ಕಾರ್ಣಿಕವಾಣಿ ಅಂಬಲಿ ಹಳಸಿತು ಕಂಬಳಿ ಬೀಸಿತಲೆ ಪರಾಕ್ ಎನ್ನುವುದನ್ನು ದೇಶದ ಅನ್ನದಾತರು ಹಾಗೂ ರಾಜಕಾರಣದ ದೈವನುಡಿಯನ್ನು ವಿಶ್ಲೇಷಣೆ ಮಾಡಿದರು. ರೈತರಿಗೆ ರಾಜ್ಯದಲ್ಲಿ ಮಳೆ ಬೆಳೆ ಜಾಸ್ತಿ ಆಗಿ, ಸಮೃದ್ಧಿಯಾಗಲಿದೆ. ಇದರ ಜೊತೆಗೆ ಮಳೆ ಜಾಸ್ತಿಯಾಗಿ ಬೆಳೆ ಹಾನಿಯಾಗಲಿದೆ. ರೈತರಿಗೆ ಬೆಳೆದ ಬೆಳೆ ಸಿಗುತ್ತದೆ. ಈ ಸೂಚನೆ ಮೈಲಾರಲಿಂಗೇಶ್ವರನ ವಾಣಿಯಿಂದ ಸಿಕ್ಕಿದೆ.
Advertisement
ರಾಜಕೀಯವಾಗಿ 2023ರಲ್ಲಿ ನ್ಯಾಯಯುತವಾಗಿರುವ ನಾಯಕ ಮುಖ್ಯಮಂತ್ರಿ ಆಗಲಿದ್ದಾರೆ. ಪ್ರಾಮಾಣಿಕವಾಗಿ ನಿಷ್ಠೆಯಿಂದ ಇರುವ ವ್ಯಕ್ತಿ ರಾಜ್ಯ ಹಾಗೂ ರಾಷ್ಟ್ರವನ್ನು ಆಳುತ್ತಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ನಿಷ್ಠೆಯಿಂದ ಇರುವ ನಾಯಕರಿಗೆ ರಾಜ್ಯದ ಪಟ್ಟ ಸಿಗಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರ್ಣಿಕ ವಿಶ್ಲೇಷಿಸಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k