– ವೈದ್ಯ ಜೋಡಿ ವಿರುದ್ಧ ಭಾರೀ ಆಕ್ರೋಶ
ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಪ್ರಿ-ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ಗಳು ವಿಭಿನ್ನ ರೀತಿಯಲ್ಲಿ ನಡೆಯುತ್ತವೆ. ಅಂತೆಯೇ ಚಿತ್ರದುರ್ಗದ (Chitradurga) ಜಿಲ್ಲಾಸ್ಪತ್ರೆಯಲ್ಲಿ ವೈದ್ಯರೊಬ್ಬರು ಪ್ರಿ-ವೆಡ್ಡಿಂಗ್ ವೀಡಿಯೋ ಶೂಟ್ ಮಾಡಿ ಎಡವಟ್ಟು ಮಾಡಿಕೊಂಡ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
Advertisement
ಭರಮಸಾಗರ ಮೂಲದ ಜಿಲ್ಲಾಸ್ಪತ್ರೆಯ ಗುತ್ತಿಗೆ ಅಧಾರಿತ ವೈದ್ಯ ಡಾ.ಅಭಿಷೇಕ್ ಎಡವಟ್ಟು ಮಾಡಿಕೊಂಡವರು. ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯನ್ನೇ ವೆಡ್ಡಿಂಗ್ ಶೂಟ್ (Pre-Wedding Shoot in Hospital) ಲೋಕೇಶನ್ ಮಾಡಿಕೊಂಡಿರುವ ಅಭಿಷೇಕ್, ರೋಗಿಯೊಬ್ಬರನ್ನು ಬೆಡ್ ಮೇಲೆ ಮಲಗಿಸಿ, ಆಪರೇಷನ್ ಮಾಡುವಂತೆ, ಇನ್ನೊಂದೆಡೆ ಭಾವಿ ಪತ್ನಿ ಅಭಿಷೇಕ್ಗೆ ಸಹಾಯ ಮಾಡುವಂತೆ ಚಿತ್ರೀಕರಿಸಿದ್ದಾರೆ. ಅಂತಿಮವಾಗಿ ಆಪರೇಷನ್ ಮುಗಿಯಿತು ಅಂದ ಬಳಿಕ ರೋಗಿ ಎದ್ದು ಕುಳಿತುಕೊಳ್ಳುತ್ತಾನೆ. ಈ ಎಲ್ಲಾ ದೃಶ್ಯಗಳನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
Advertisement
Advertisement
ಸದ್ಯ ಡಾ.ಅಭಿಷೇಕ್ ಜೋಡಿಯ ಪ್ರಿ-ವೆಡ್ಡಿಂಗ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ವೈದ್ಯರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ದುರ್ಬಳಕೆ ಬಗ್ಗೆ ಜನ ಕಿಡಿಕಾರುತ್ತಿದ್ದಾರೆ. ಇದನ್ನೂ ಓದಿ: ಕೆರಗೋಡು ಬಂದ್ಗೆ ಉತ್ತಮ ಪ್ರತಿಕ್ರಿಯೆ – ಶಾಸಕ ಗಣಿಗ ರವಿ ಮನೆಗೆ ಭದ್ರತೆ ಹೆಚ್ಚಳ