ಬೆಂಗಳೂರು/ ಮಂಡ್ಯ: ಬಿಸಿಲಿನಿಂದ ಬೆಂದ ಜನರಿಗೆ ಪೂರ್ವ ತಂಪೆರೆದಿದ್ದು, ಮುಂಗಾರು ನಗರದ ಹಲವೆಡೆ ಸಂಜೆಯ ವೇಳೆಗೆ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಿದೆ.
ನಗರದ ಹಲವೆಡೆ ಸಂಜೆ ವೇಳೆಗೆ ಆರಂಭವಾದ ಬಿರುಗಾಳಿಯಿಂದ ಕುಡಿದ ಮಳೆಗೆ ಮರಗಳು ಧರೆಗುರುಳಿ ಹಲವು ಅವಂತರಗಳನ್ನು ಸೃಷ್ಟಿಸಿತು. ಬಾಣಸವಾಡಿಯಲ್ಲಿ ಮರ ಬಿದ್ದು ಕಾರು ಜಖಂಗೊಂಡಿದೆ. ಬಿಟಿಎಂ ಲೇಔಟ್ ಮತ್ತು ವಿವೇಕನಗರ ಪೊಲೀಸ್ ಠಾಣೆ, ಶಿವಾಜಿನಗರದಲ್ಲಿ ಮರಗಳು ಉರುಳಿದ್ದು ಸಂಚಾರಕ್ಕೆ ತಡೆ ಉಂಟುಮಾಡಿತ್ತು. ಜಯನಗರದಲ್ಲಿ ಮೂರು ಕಾರುಗಳ ಮೇಲೆ ಮರ ಬಿದ್ದಿದ್ದರೆ, 4 ವಿದ್ಯುತ್ ಕಂಬಗಳು ಧರೆಗೆ ಬಿದ್ದಿತ್ತು.
Advertisement
Advertisement
ಅನಿರೀಕ್ಷಿತ ಮಳೆ ಟ್ರಾಫಿಕ್ ಜಾಮ್ ಗೆ ಸಹ ಕಾರಣವಾಗಿತ್ತು. ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಎಲಿವೆಟೆಡ್ ಫ್ಲೈ ಓವರ್ ಮೇಲೆ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಟ್ರಾಫಿಕ್ ನಲ್ಲಿ ಆಂಬುಲೆನ್ಸ್ ಸಿಲುಕಿ ರೋಗಿ ಪರದಾಡಿದ ಘಟನೆ ನಡೆಯಿತು.
Advertisement
ಮಂಡ್ಯ, ಕೆಆರ್ ಪೇಟೆ ಪಟ್ಟಣದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಬಿರುಗಾಳಿಗೆ ಸಿಲುಕಿ ರಸ್ತೆಯಲ್ಲಿ ನಿಲ್ಲಿಸಿದ್ದ ಹತ್ತಾರು ಬೈಕ್‍ಗಳು ನೆಲಕ್ಕೆ ಉರುಳಿ ಜಖಂಗೊಂಡಿದೆ.
Advertisement
ಮಳೆ ಕುರಿತು ಮಾಹಿತಿ ನೀಡಿದ ಹವಾಮಾನ ತಜ್ಞ ಗವಾಸ್ಕರ್, ಇನ್ನು ಮೂರು ನಾಲ್ಕು ದಿನ ಇದೇ ವಾತಾವರಣ ಮುಂದುವರೆಯಲಿದೆ. ಪೂರ್ವ ಮುಂಗಾರು ಆಗಿರುವುದರಿಂದ ಸಹಜವಾಗಿ ಗಾಳಿ ಸಹಿತ ಮಳೆ ಇರಲಿದೆ ಎಂದು ತಿಳಿಸಿದ್ದಾರೆ.