ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಆರ್ಭಟ- ಕರಾವಳಿಯಲ್ಲಿ 3 ದಿನ ಯೆಲ್ಲೊ ಅಲರ್ಟ್

Public TV
1 Min Read
tamil nadu rain

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಕೂಡ ಉತ್ತಮ ಮಳೆಯಾಗಿದೆ. ಈ ಮೂಲಕ ರಾಜ್ಯದ ಹಲವೆಡೆ ವರುಣದೇವ (Rain) ತಂಪೆರೆದಿದ್ದಾನೆ.

ಇಂದಿನಿಂದ ರಾಜ್ಯದಾದ್ಯಂತ ಮಳೆ ಪ್ರಮಾಣ ಇಳಿಕೆ ಸಾಧ್ಯತೆ ಇದೆ. ಉತ್ತರ ಒಳನಾಡಿಗೆ ಯಾವುದೇ ಅಲರ್ಟ್ ಇಲ್ಲ. ದಕ್ಷಿಣ ಒಳನಾಡಿನ ಕೊಡುಗು ಜಿಲ್ಲೆಗೆ ಆರೆಂಜ್ ಅಲರ್ಟ್ (Orange Alert) ಹಾಗೂ ಕರಾವಳಿ ಜಿಲ್ಲೆಗಳಿಗೆ ಮೂರು ದಿನ ಯಲ್ಲೋ ಅಲರ್ಟ್ (Yellow Alert) ಘೋಷಣೆ ಮಾಡಲಾಗಿದೆ. ಉಳಿದಂತೆ ಇತರೆ ಜಿಲ್ಲೆಗಳಲ್ಲಿ ಕೆಲವೆಡೆ ಮಾತ್ರ ಸಾಧಾರಣ ಮಳೆಯಾಗುವ ಸಂಭವವಿದೆ.

RAIN 5

ನಿನ್ನೆ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ..?: ಶಿವಮೊಗ್ಗ: 86.5 ಮಿ.ಮೀ, ಉತ್ತರ ಕನ್ನಡ: 81.5 ಮಿಮೀ, ರಾಮನಗರ: 74 ಮಿ.ಮೀ, ಚಾಮರಾಜನಗರ: 70.5 ಮಿ.ಮೀ, ರಾಯಚೂರು: 70 ಮಿ.ಮೀ, ಕೊಡಗು: 69.5 ಮಿ.ಮೀ, ದಕ್ಷಿಣ ಕನ್ನಡ: 69.5 ಮಿ.ಮೀ, ಉಡುಪಿ: 59.5 ಮಿ.ಮೀ, ಚಿಕ್ಕಮಗಳೂರು: 57 ಮಿ.ಮೀ, ಹಾವೇರಿ: 54 ಮಿ.ಮೀ, ತುಮಕೂರು: 49 ಮಿ.ಮೀ, ಚಿಕ್ಕಬಳ್ಳಾಪುರ: 47 ಮಿ.ಮೀ, ಬಳ್ಳಾರಿ: 46 ಮಿ.ಮೀ, ಮಂಡ್ಯ: 45 ಮಿ.ಮೀ, ಬೆಂಗಳೂರು ನಗರ: 44.5 ಮಿ.ಮೀ, ಮೈಸೂರು: 44 ಮಿ.ಮೀ, ಹಾಸನ: 36.5 ಮಿ.ಮೀ ಹಾಗೂ ದಾವಣಗೆರೆಯಲ್ಲಿ 34.5 ಮಿ.ಮೀ ಮಳೆಯಾಗಿದೆ.

ಅತಿ ಹೆಚ್ಚು ಮಳೆ ಆಗಿರುವ ಸ್ಥಳಗಳು: ನೊಣಬೂರು, ಶಿವಮೊಗ್ಗ: 86.5 ಮಿ.ಮೀ, ಉತ್ತರ ಕನ್ನಡ ಜಿಲ್ಲೆಯ ಬೆಂಗ್ರೆ: 81.5ಮಿ.ಮೀ., ಹೆಬೆಲ್: 80ಮಿ.ಮೀ. & ಜಾಲಿ: 74ಮಿ.ಮೀ., ನಾಗವಾರ, ರಾಮನಗರ: 74ಮಿ.ಮೀ ಮಳೆಯಾಗಿದೆ.

ನಿನ್ನೆ ಮಡಿಕೇರಿಯಲ್ಲಿ ಸುರಿದ ಭಾರೀ ಮಳೆಗೆ ಕುಶಾಲನಗರದ ಕೂಡ್ಲೂರಿನ ಕೆ.ಕೆ.ನಿಂಗಪ್ಪ ಬಡಾವಣೆಯಲ್ಲಿ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿದೆ. ಕುಶಾಲನಗರ ಉರ್ದು ಶಾಲಾ ಶಿಕ್ಷಕಿಯಾಗಿರುವ ಶಾಂತಲಾ ಎಂಬುವರಿಗೆ ಸೇರಿದ ಮನೆಯ ಬೆಡ್ ರೂಂ, ಅಡುಗೆ ಕೋಣೆ, ಡೈನಿಂಗ್ ರೂಂ ಗೋಡೆ ಹಾನಿಯಾಗಿದೆ. ತಡೆಗೋಡೆ ಕುಸಿದು ಮನೆಗೆ ಬಿದ್ದ ಹಿನ್ನಲೆ ಅಂದಾಜು 15 ಲಕ್ಷ ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಮಾಲೀಕರು ಒತ್ತಾಯ ಮಾಡಿದ್ದಾರೆ.

Share This Article