ರಾಖಿ ಸಾವಂತ್ (Rakhi Sawant) ಮಾತಿಗೆ ಗೊಂದಲಕ್ಕೀಡಾಗಿದ್ದಾರೆ ಅಭಿಮಾನಿಗಳು. ಮೈಸೂರಿನ (Mysuru) ಹುಡುಗ ಆದಿಲ್ ಖಾನ್ (Adil Khan) ನಿಂದ ರಾಖಿಗೆ ಮೋಸವಾಗಿದೆ ಎಂದು ಹೇಳುತ್ತಿದ್ದವರು, ಇದೀಗ ರಾಖಿ ಆಡಿದ ಮಾತಿನಿಂದಾಗಿ ತಲೆಚಚ್ಚಿಕೊಳ್ಳುತ್ತಿದ್ದಾರೆ. ಈವರೆಗೂ ಆದಿಲ್ ಗೆ ಶಿಕ್ಷೆಯಾಗಬೇಕು, ಅವನು ಜೈಲಿನಲ್ಲಿ ಇರಬೇಕು, ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಕ್ಯಾಮೆರಾ ಮುಂದೆ ಹೇಳುತ್ತಿದ್ದ ರಾಖಿ, ಈಗ ಉಲ್ಟಾ ಹೊಡೆದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಇಂದು ಬೆಳಗ್ಗೆ ಪ್ರಾರ್ಥನೆ ಮಾಡುವಾಗ ಒಂದು ಆಲೋಚನೆ ಹೊಳೆಯಿತು. ರಂಜಾನ್ ಅಂದರೆ, ಅದು ಕ್ಷಮಿಸುವ ಹಬ್ಬ. ಏನೇ ನೋವನ್ನುಂಟು ಮಾಡಿದರೂ ಕ್ಷಮಿಸಿಬಿಡಿ ಎಂದು ಹೇಳುತ್ತದೆ ಪ್ರಾರ್ಥನೆ. ಹಾಗಾಗಿ ನಾನು ಆದಿಲ್ ಬಗ್ಗೆ ಸಾಫ್ಟ್ ನಿಲುವು ಪಡೆದಿದ್ದೇನೆ. ನಾನು ಅವನಿಗೆ ಕ್ಷಮಿಸದೇ ಇರಬಹುದು. ಆದರೆ, ಅವನಿಗೆ ಬೇಲ್ ಸಿಗಲಿ’ ಎಂದು ಪ್ರಾರ್ಥಿಸಿದೆ ಎಂದಿದ್ದಾರೆ. ಇದನ್ನೂ ಓದಿ: ಹೊಸ ಫೋಟೋಶೂಟ್ ಹಂಚಿಕೊಂಡ ದೀಪಿಕಾ ದಾಸ್
ಆದಿಲ್ ಖಾನ್ ಗೆ ಶಿಕ್ಷೆ ಆಗಲೇಬೇಕು ಎಂದು ಮೈಸೂರಿನವರೆಗೂ ಬಂದಿದ್ದ ರಾಖಿ ಸಾವಂತ್, ಇಲ್ಲೊಂದು ದೂರು ದಾಖಲಿಸಿದ್ದರು. ಆದಿಲ್ ಗೆ ಜಾಮೀನು ಸಿಗದಂತೆ ಹೆಸರಾಂತ ವಕೀಲರನ್ನು ನೇಮಿಸಿಕೊಂಡಿದ್ದರು ರಾಖಿ. ಇದೀಗ ಮನಸ್ಸು ಬದಲಿಸಿಕೊಂಡು ಗಂಡನಿಗೆ ಜಾಮೀನು ಸಿಗಲಿ ಎಂದು ಪ್ರಾರ್ಥಿಸಿದ್ದಾರಂತೆ. ಈ ನಡೆಯು ಅವರ ಅಭಿಮಾನಿಗಳಿಗೆ ಗೊಂದಲವನ್ನುಂಟು ಮಾಡಿದೆ.