ಲಕ್ನೋ: ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಉದ್ಘಾಟನೆಗೊಂಡಿದ್ದ ಲುಲು ಮಾಲ್‌ನಲ್ಲಿ ಕೆಲವರು ನಮಾಜ್ ಮಾಡಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಅಲ್ಲಿನ ವಾತಾವರಣ ಬಿಗಡಾಯಿಸಿದ್ದು, ಹಲವು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಇದೀಗ ಲುಲು ಮಾಲ್ ವಿಚಾರವಾಗಿ ಶಾತಿಯನ್ನು ಕದಡಲು ಪ್ರಯತ್ನಿಸುವ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಲಕ್ನೋ ಆಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.
Advertisement
Advertisement
ಅಬುಧಾಬಿ ಮೂಲದ ಲುಲು ಗ್ರೂಪ್ ನಡೆಸುತ್ತಿರುವ ಉತ್ತರ ಪ್ರದೇಶದ ಲುಲು ಮಾಲ್ ಅನ್ನು ಜುಲೈ 10 ರಂದು ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸಿದ್ದರು. ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಮಾಲ್ ಒಳಗಡೆ ಕೆಲವರು ನೆಲದಲ್ಲಿ ಕುಳಿತುಕೊಂಡು ನಮಾಜ್ ಮಾಡಿದ ವೀಡಿಯೋ ವೈರಲ್ ಆಗಿತ್ತು. ಇದನ್ನೂ ಓದಿ: 10ನೇ ಕ್ಲಾಸ್ ವಿದ್ಯಾರ್ಥಿಯಿಂದಲೇ ಡಿಕೆಶಿ ಶಾಲೆಗೆ ಬಾಂಬ್ ಬೆದರಿಕೆ!
Advertisement
ಮಾಲ್‌ನಲ್ಲಿ ನಮಾಜ್ ಮಾಡಿದ 8 ಮುಸ್ಲಿಂ ವ್ಯಕ್ತಿಗಳ ಪೈಕಿ ನಾಲ್ವರನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ. ನಮಾಜ್ ಮಾಡುತ್ತಿದ್ದ ವೀಡಿಯೋ ವೈರಲ್ ಆಗುತ್ತಿದ್ದಂತೆ ಕೆಲವು ಹಿಂದೂ ಸಂಘಟನೆಗಳು ಸಾರ್ವಜನಿಕ ಸ್ಥಳಗಳನ್ನು ಧಾರ್ಮಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಕೋಮು ಸೌಹಾರ್ದದ ಉಲ್ಲಂಘನೆ ಎಂದು ಆರೋಪಿಸಿವೆ. ಇದರ ಬೆನ್ನಲ್ಲೇ ಬಲಪಂಥೀಯ ಸಂಘಟನೆಗಳು ಮಾಲ್‌ನಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲು ಮುಂದಾಗಿದ್ದವು. ಆದರೆ ಅದನ್ನು ತಡೆಯಲಾಗಿತ್ತು.
Advertisement
ಮಾಲ್ ಮಾಲೀಕರು ಧಾರ್ಮಿಕವಾಗಿ ಪಕ್ಷಪಾತ ಮಾಡುತ್ತಿವೆ ಎಂದು ಕೆಲವು ಸಂಘಟನೆಗಳು ಹೇಳಿದ್ದು, ಬಳಿಕ ಆಡಳಿತ ಮಂಡಳಿ ಧಾರ್ಮಿಕ ಆಚರಣೆಗೆ ಇಲ್ಲಿ ಅನುಮತಿಯಿಲ್ಲ ಎಂದು ಬೋರ್ಡ್ ಅನ್ನು ಅಳವಡಿಸಿದೆ. ಲುಲು ಮಾಲ್ ಎಲ್ಲಾ ಧರ್ಮಗಳನ್ನೂ ಗೌರವಿಸುತ್ತದೆ. ಆದರೆ ಇಲ್ಲಿ ಯಾವುದೇ ಪೂಜೆಗೆ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ನಾವು ನಮ್ಮ ಸಿಬ್ಬಂದಿಗೆ ಇಂತಹ ಘಟನೆಗಳ ಮೇಲೆ ನಿಗಾ ಇಡಲು ಕಟ್ಟುನಿಟ್ಟಿನ ಕ್ರಮ ವಹಿಸಿದ್ದೇವೆ ಎಂದು ಜನರಲ್ ಮ್ಯಾನೇಜರ್ ಸಮೀರ್ ವರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗುವುದು ಸಂಪ್ರದಾಯ: ಡಿ.ಕೆ ಶಿವಕುಮಾರ್